Video; ಇವತ್ತಿನ ಹೀರೋ; ತಾಯಿ ಗ್ಯಾರೇಜ್ ಗೇಟ್ ಸರಿಪಡಿಸುವಾಗ ಜಾರಿತು ಕಾಲಲ್ಲಿಯ ಏಣಿ! ಪುಟ್ಟ ಮಾಡಿದ ದೊಡ್ಡ ಕೆಲಸ ನೋಡಿ.

ಸೋಶಿಯಲ್ ಮೀಡಿಯಾದಲ್ಲಿ ಕೆಲವೊಮ್ಮೆ ರೋಮಾಂಚನ ಗೊಳ್ಳುವ ವಿಶೇಷ ವಿಡಿಯೋಗಳು ನೋಡಲು ಸಿಗುತ್ತವೆ. ಇಲ್ಲಿಯ ಅದ್ಭುತ, ಆಶ್ಚರ್ಯ ನೋಡಿ ಯೂಸರ್ ಬೆರಗಾಗುತ್ತಾನೆ. ಸದ್ಯ ಇದೇ ರೀತಿಯ ಒಂದು ವಿಡಿಯೋ ಇಲ್ಲಿ ನೋಡಿ.

ಪ್ರಸ್ತುತ ವಿಡಿಯೋದಲ್ಲಿ ಪುಟ್ಟ ಮಗು ತಾಯಿಯ ಸಹಾಯಕ್ಕೆ ಓಡಿ ಬಂದಿದ್ದಾನೆ, ಮತ್ತು ಆತ ಮಾಡಿದ ಈ ಕೆಲಸ ಆತನನ್ನು ಇವತ್ತಿನ ಹೀರೋ ಮಾಡಿದೆ. ವಿಡಿಯೋದಲ್ಲಿ ಕಂಡು ಬರುವ ದೃಶ್ಯದ ಪ್ರಕಾರ ತಾಯಿ ಗ್ಯಾರೇಜಿನ್ ಗೇಟ್ ಸರಿಪಡಿಸುವ ಸಂದರ್ಭದಲ್ಲಿ ಹಠಾತ್ ಕಾಲಲ್ಲಿಯ ಏಣಿ ಜಾರಿ ಕೆಳಗೆ ಬಿದ್ದಿದೆ. ಆಗ ಅಲ್ಲಿಯೇ ನಿಂತ ಚಿಕ್ಕ ಮಗು ತನ್ನ ತಾಯಿಯನ್ನು ಗಂಡಾಂತರದಿಂದ ಉಳಿಸಿಕೊಳ್ಳಲು ಕ್ಷಣದಲ್ಲಿ ಆಕ್ಟಿವ್ ಆಗಿದ್ದಾನೆ.

ಆತ ಮಾಡಿದ್ದೇನು ನೋಡಿ ಈ ವಿಡಿಯೋದಲ್ಲಿ..

ಪುಟ್ಟನು ಮೊದಲು ತಾಯಿಗೆ ಯಾವುದೇ ರೀತಿಯಲ್ಲಿ ಮೇಲಿನಿಂದ ಕೆಳಗೆ ಬೀಳದಂತೆ ಆದಷ್ಟು ಬೇಗನೆ ಏಣಿಯನ್ನು ಎತ್ತಿ ಹಚ್ಚುವ ಪ್ರಯತ್ನ ಮಾಡಿದ್ದಾನೆ. ಇಲ್ಲಿ ಹುಡುಗ ತನ್ನ ಶಕ್ತಿ ಮೀರಿ ಏಣಿಯನ್ನು ಎದ್ದು ನಿಲ್ಲಿಸುವ ಕೆಲಸ ಮಾಡಿದ್ದಾನೆ. ಏಣಿಯನ್ನು ತಾಯಿಯ ಕಾಲಿನ ಹತ್ತಿರ ತರುತ್ತಲೇ ತಾಯಿಯು ತನ್ನ ಕಾಲುಗಳಿಂದ ಏಣಿಯನ್ನು ಅಡ್ಜಸ್ಟ್ ಮಾಡಿಕೊಂಡು ನಿಲ್ಲಿಸಿಕೊಂಡಿದ್ದಾಳೆ. ಆನಂತರ ತಾಯಿ ನಿಧಾನವಾಗಿ ಮೇಲಿನಿಂದ ಕೆಳಗೆ ಇಳಿದಿದ್ದಾಳೆ.

ವಿಡಿಯೋ ನೋಡಿ

ಪ್ರಸ್ತುತ ವಿಡಿಯೋ ಟ್ವಿಟರ್ ನಲ್ಲಿ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ 8.8 ಮಿಲಿಯನ್ ಗಿಂತಲೂ ಹೆಚ್ಚಿಗೆ ವೀಕ್ಷಣೆಯನ್ನು ಪಡೆದಿದೆ.