ಬೆಂಕಿಯ ಜೊತೆಗೆ ಬೇಕೆಂತಲೇ ಆಡಿದ ಮಸ್ತಿ ಬಿತ್ತು ಯುವಕನಿಗೆ ಭಾರಿ ದುಬಾರಿ; ಹುಚ್ಚನಂತೆ ಓಡಾಡಿದ ಬಗೆ ಒಮ್ಮೆ ನೋಡಿ.
ಮೈಯಲ್ಲಿರುವ ಕೊಬ್ಬು ಕೆಲವೊಮ್ಮೆ ಸುಮ್ಮನೆ ಕೂಡಲು ಬಿಡುವುದಿಲ್ಲ. ಅದು ಏನಾದರೂ ಕ್ಯಾತೆಗೆ ಕೈ ಹಾಕಲು ಹುರಿದುಂಬಿಸುತ್ತದೆ. ಇದೇ ರೀತಿಯ ಒಂದು ವಿಡಿಯೋ ಇಲ್ಲಿ ನೀವು ನೋಡಬಹುದು. ಕಾರಣ ಯುವಕನ ಮೈಯಲ್ಲಿರುವ ಮಸ್ತಿ ಆತನಿಗೆ ತಿರುಗುಬಾಣವಾಗಿ ಹುಚ್ಚನಂತೆ ಓಡಾಡಿಸಿದೆ.
ಯುವಕ ಅದ್ಯಾವ ಕೆಲಸ ಮಾಡಿದ್ದಾನೆ ನೋಡೋಣ ಬನ್ನಿ. ಚಳಿಯಲ್ಲಿ ಬೆಂಕಿಯ ಮುಂದೆ ನಿಂತು ಸುಮ್ಮನೆ ಮೈ ಕಾಯಿಸಿಕೊಳ್ಳೋ ಬದಲು ಯುವಕ ಅದರ ಜೊತೆಗೆ ಚೆನ್ನಾಗಿಯೇ ಚೆಲ್ಲಾಟವಾಡುತ್ತಿದ್ದಾನೆ. ಈ ಸಂದರ್ಭದಲ್ಲಿ ಆತನಿಗೆ ತಿಳಿಯದಂತೆಯೇ ಶರ್ಟಿನ ಹಿಂದಿನ ಬದಿಗೆ ಬೆಂಕಿ ತಗುಲಿದೆ. ಅದನ್ನು ನೋಡಿದ್ದೇ ತಡ ಯುವಕ ಹುಚ್ಚನಂತಾಗಿ ಅತ್ತಿತ್ತ ದಿಕ್ಕೆಟ್ಟು ಓಡುತ್ತಿದ್ದಾನೆ. ಈ ಸಂದರ್ಭದಲ್ಲಿ ಆತನಿಗೆ ಏನು ಮಾಡಬೇಕೆಂಬುದೇ ತಿಳಿಯುತ್ತಿಲ್ಲ. ಕೊನೆಗೆ ದೂರ ಓಡಿ ಹೋಗಿ ತನ್ನ ಶರ್ಟ್ ನ್ನು ಕಳೆದು ಬಿಸಾಕುತ್ತಾನೆ. ಬದುಕಿದೆಯಾ ಬಡಜೀವ ಎಂದು ನಿಟ್ಟುಸಿರು ಬಿಡುತ್ತಿರುವಾಗಲೇ ಪ್ಯಾಂಟಿಗೂ ಜೋರಾಗಿ ಬೆಂಕಿ ತಗುಲಿದೆ ಎಂಬುದು ಗಮನಕ್ಕೆ ಬರುತ್ತದೆ. ಮತ್ತೆ ಹುಚ್ಚರಂತೆ ಅತ್ತಿತ್ತ ಓಡಲು ಶುರು ಮಾಡುತ್ತಾನೆ. ಕೊನೆಗೆ ಕೆಳಗೆ ಕುಳಿತು ಹತ್ತಿದ ಉರಿಯನ್ನು ನಂದಿಸಲು ಪ್ರಯತ್ನಿಸುತ್ತಾನೆ. ಅದೂ ವರ್ಕೌಟ್ ಆಗದೇ ಇದ್ದಾಗ ಕಟ್ಟ ಕಡೆಗೆ ನೀರಿನ ಓಪನ್ ಟ್ಯಾಂಕ್ ನಲ್ಲಿ ಹೋಗಿ ಬೀಳುತ್ತಾನೆ. ಆಗ ಬಟ್ಟೆಗೆ ಹತ್ತಿದ ಬೆಂಕಿ ನಂದಿ ಬಿಡುತ್ತದೆ.
ವಿಡಿಯೋ ನೋಡಿ
View this post on Instagram
Instagram ನಲ್ಲಿ ವೈರಲ್ ಆದ ಈ ವಿಡಿಯೋಗೆ ತುಂಬಾ ಒಳ್ಳೆಯ ಕ್ಯಾಪ್ಶನ್ ಬೇರೆ ನೀಡಿದ್ದಾರೆ. ಕ್ಯಾಪ್ಷನ್ನಲ್ಲಿ “ಇದು ನಿನಗೆ ಬೇಕಿತ್ತಾ ಮಗನೇ?” ಎನ್ನುವ ಶಬ್ದಗಳನ್ನು ಹಾಕಿದ್ದಾರೆ. ಪ್ರಸ್ತುತ ವಿಡಿಯೋವನ್ನು ಪಕ್ಕಾ ಜವಾರಿ ಮಂದಿ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ 7.3 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ.