ಹಿತ್ತಾಳೆಯ ಮೂರ್ತಿ ಚಿನ್ನದ್ದೆಂದು ಹೇಳಿ ಮಾಡಿದ ಮಾರಾಟ! ನಂತರ ಗೊತ್ತಾಯ್ತು ಖರೀದಿಸಿದವನು ಕೊಟ್ಟಿದ್ದ ನಕಲಿ ನೋಟುಗಳನ್ನು…
ಏಟಿಗೆ ಎದುರೇಟು, ಮುಯ್ಯಿಗೆ ಮುಯ್ಯಿ, ಟಿಟ್ ಫಾರ್ ಟ್ಯಾಟ್ ಎನ್ನುವ ಗಾದೆ ಮಾತಿನ ತರ ವಿಚಿತ್ರ ಘಟನೆಯೊಂದು ಸೋಶಿಯಲ್ ಮೀಡಿಯಾದಲ್ಲಿ ಬೆಳಕಿಗೆ ಬಂದಿದೆ. ಇಲ್ಲಿ ಹಿತ್ತಾಳೆಯ ಮೂರ್ತಿಯನ್ನು ಚಿನ್ನದ್ದೆಂದು ಹೇಳಿ ಮಾರಾಟ ಮಾಡುವ ನಾಲ್ಕು ಜನರ ಗ್ಯಾಂಗ್ ಒಂದನ್ನು ಪೊಲೀಸರು ಉತ್ತರ ಪ್ರದೇಶದಿಂದ ಅರೆಸ್ಟ್ ಮಾಡಿದ್ದಾರೆ. ಈಗ ವ್ಯವಹಾರದಲ್ಲಿ ನಡೆದ ಇನ್ನೊಂದು ಟ್ವಿಸ್ಟ್ ಏನೆಂದರೆ, ಚಿನ್ನದ ಮೂರ್ತಿಯ ಆಸೆಗಾಗಿ ಖರೀದಿ ಮಾಡಿದವರು ಕೊಟ್ಟ ಒಟ್ಟು ಹಣ 15,86,150/00 ಎಲ್ಲವೂ ನಕಲಿ ನೋಟುಗಳಾಗಿದ್ದವು ಎಂಬುದು ಬೆಳಕಿಗೆ ಬಂದಿದೆ. ಇದಕ್ಕೂ ಮೊದಲು ಈ ನಾಲ್ಕು ಜನರ ಗ್ಯಾಂಗ್ ಇದೇ ರೀತಿಯ ಜೈನ ಧರ್ಮದ ತೀರ್ಥಂಕರಗಳ ಅನೇಕ ಮೂರ್ತಿಗಳನ್ನು ಮಾರಾಟ ಮಾಡಿದ್ದರು ಎಂಬುದು ಸಹ ತಿಳಿದು ಬಂದಿದೆ. ಪೊಲೀಸ್ ತನಿಖೆಯಲ್ಲಿ ತಿಳಿದುಬಂದ ಪ್ರಕಾರ ಎರಡೂ ಪಕ್ಷಗಳು ಒಬ್ಬರಿಗೊಬ್ಬರು ಸರಿಯಾಗಿಯೇ ಮೋಸ ಮಾಡಿದ್ದಾರೆ ಎನ್ನುತ್ತಿದ್ದಾರೆ.
ಈ ಪ್ರಕರಣ ಬೆಳಕಿಗೆ ಬಂದ ರೀತಿಯೂ ಸಹ ತುಂಬಾ ವಿಚಿತ್ರವಾಗಿದೆ. ಪೊಲೀಸರು ವಾಹನಗಳ ತಪಾಸಣೆ ಮಾಡಿಬಿಡುತ್ತಿರುವಾಗ ಒಂದು ವ್ಯಾನ್ ನಲ್ಲಿ ನಾಲ್ಕು ಜನರು ನೋಟುಗಳನ್ನು ತೆಗೆದುಕೊಂಡು ಕುಳಿತಿದ್ದರು. ಆಗ ಪೊಲೀಸರು ಅವರನ್ನು ಅರೆಸ್ಟ್ ಮಾಡಿ ಪೊಲೀಸ್ ಸ್ಟೇಷನ್ ನಲ್ಲಿ ಹಣ ಎಣಿಸಿದಾಗ ಆ ಹಣ 15,83,050 ಇದ್ದದ್ದು ತಿಳಿದು ಬಂತು. ಇದಕ್ಕೆ ಸಂಬಂಧಪಟ್ಟಂತೆ ಪೊಲೀಸರು ನಾಲ್ಕು ಜನರ ಜೊತೆಗೆ ತನಿಖೆ ನಡೆಸಿದಾಗ ಪ್ರತಿಯೊಬ್ಬರ ಉತ್ತರಗಳು ಬೇರೆ ಬೇರೆಯಾಗಿ ಬರತೊಡಗಿದವು. ತದನಂತರ ಅವರ ಮೊಬೈಲ್ ಚೆಕ್ ಮಾಡಿದಾಗ ಅವುಗಳಲ್ಲಿ ಅನೇಕ ಜೈನ ಧರ್ಮಕ್ಕೆ ಸಂಬಂಧಿಸಿದ ಮೂರ್ತಿಗಳ ಫೋಟೋಗಳು ಕಂಡುಬಂದವು.
ಈ ತನಿಖೆಯಲ್ಲಿ ಇಂಥ ಗ್ಯಾಂಗ್ ಭಗವಾನ್ ಮಹಾವೀರರೊಂದಿಗೆ ಅನೇಕ ತೀರ್ಥಂಕರರ ಮೂರ್ತಿಗಳನ್ನು ಚೆನ್ನಾಗಿ ಪಾಲಿಶ್ ಮಾಡಿ ಅಗ್ಗದ ಬೆಲೆಯಲ್ಲಿ ಮಾರಾಟ ಮಾಡಿ ಜನರಿಗೆ ಮೋಸ ಮಾಡುತ್ತಿದ್ದರು. ಆದರೆ ಇಲ್ಲಿ ಮಾತ್ರ ಮೂರ್ತಿಯನ್ನು ಖರೀದಿ ಮಾಡಿದವರು ಬದಲಿಗೆ ನೀಡಿದ ಎಲ್ಲ ಹಣವೂ ಸಹ ನಕಲಿ ಎಂಬುದು ತಿಳಿದು ಬಂದಿತ್ತು.
ಪೊಲೀಸರು ನೋಟುಗಳ ತಪಾಸಣೆ ಮಾಡಿದಾಗ ಅದರಲ್ಲಿ ಕೇವಲ 1400 ರೂಪಾಯಿಗಳು ನಿಜವಾದ ನೋಟುಗಳಾಗಿದ್ದು ಉಳಿದ ಎಲ್ಲ ಹಣ ನಕಲಿ ನೋಟುಗಳಾಗಿದ್ದವು. ಪೊಲೀಸರು ಸದ್ಯ ನಾಲ್ಕು ಜನರನ್ನು ಜೈಲಿಗೆ ಹಾಕಿ ಅವರ ಮುಖ್ಯಸ್ಥ ಅಖ್ತರ್ ನ ಶೋಧ ನಡೆಸಿದ್ದಾರೆ.