Video; ಮಾಧುರಿ ದೀಕ್ಷಿತ್ ರ ಜನಪ್ರಿಯ “ಧಕ್ ಧಕ್” ಹಾಡಿಗೆ ಸಖತ್ ಹೆಜ್ಜೆ ಹಾಕಿ ನೃತ್ಯ ಮಾಡಿ ಧೂಳ್ ಎಬ್ಬಿಸಿದ ಯುವತಿ…

ಬಾಲಿವುಡ್ ನಲ್ಲಿ 90 ರ ದಶಕವನ್ನು ನಟಿ ಮಾಧುರಿ ದೀಕ್ಷಿತ್ ಅವರು ಸಂಪೂರ್ಣವಾಗಿ ತಮ್ಮ ಹೆಸರಿಗೆ ಬರೆದುಕೊಂಡರೆಂದರೆ ತಪ್ಪಲ್ಲ. ಈ ಸಮಯದಲ್ಲಿ ಅವರ ಅನೇಕ ಚಿತ್ರಗಳು ತೆರೆಕಂಡವು, ಮತ್ತು ಸೂಪರ್ ಹಿಟ್ ಆದವು. ಇದೇ ಸಂದರ್ಭದಲ್ಲಿ ತೆರೆಕಂಡ ‘ಬೇಟಾ’ ಚಿತ್ರವು ಒಳ್ಳೆಯ ಹಾಡುಗಳಿಂದ ಚಿತ್ರ ರಸಿಕರ ಮನರಂಜಿಸಿತು. ಈ ಚಿತ್ರದಲ್ಲಿ ಮಾಧುರಿ ದೀಕ್ಷಿತ್ ಅವರು ‘ಧಕ್ ಧಕ್ ಕರ್ನೆ ಲಗಾ’ ಹಾಡಿಗೆ ಭರ್ಜರಿಯಾಗಿ ಡಾನ್ಸ್ ಮಾಡಿ ಚಿತ್ರ ರಸಿಕರ ಮೆಚ್ಚುಗೆಗೆ ಪಾತ್ರವಾದರು. ಅಂದಿನಿಂದ ಮಾಧುರಿ ದೀಕ್ಷಿತ್ ಅವರು ಧಕ್ ಧಕ್ ಗರ್ಲ್ ಎಂದೇ ಪ್ರಸಿದ್ಧಿಯನ್ನು ಸಹ ಪಡೆದರು.

ಸದ್ಯ ಇದೇ ಹಾಡಿಗೆ ಯುವತಿಯೊಬ್ಬಳು ಮನೆಯಲ್ಲಿ ಸಖತ್ತಾಗಿ ಮೈ ಬಳುಕಿಸಿದ್ದಾಳೆ. ಇದೇ ಬೇಟಾ ಚಿತ್ರದ ಫೇಮಸ್ ‘ಧಕ್ ಧಕ್ ಕರ್ನೆ ಲಗಾ’ ಹಾಡಿಗೆ ಫುಲ್ ಬಿಂದಾಸ್ ಆಗಿ ಯುವತಿಯೊಬ್ಬಳು ತನ್ನ ಸೊಂಟವನ್ನು ಬಳುಕಿಸಿದ್ದಾಳೆ. ತಿಳಿ ಗುಲಾಬಿ ಬಣ್ಣದ ಸೀರೆಯಲ್ಲಿ ಯುವತಿ ಮತ್ತಷ್ಟು ಸುಂದರವಾಗಿ ಕಾಣುತ್ತ ತೀರ ಚೆನ್ನಾಗಿ ಹೆಜ್ಜೆಯನ್ನಿಟ್ಟಿದ್ದು ನೆಟ್ಟಿಗರಿಗೆ ಸಖತ್ ಇಷ್ಟವಾದಂತೆ ಕಾಣುತ್ತಿದೆ. ಈ ಹಾಡಿನಲ್ಲಿ ಯುವತಿಯು ತಾಳಕ್ಕೆ ತಕ್ಕಂತೆ ದೇಹದ ಪ್ರತಿಯೊಂದು ಅಂಗಾಂಗಗಳನ್ನು ತುಂಬಾ ಸುಂದರವಾಗಿ ಬಳಕಿಸಿದ್ಧಾಳೆ. ಯುವತಿಯ ಈ ಸುಂದರ ನೃತ್ಯವನ್ನು ವರ್ಣಿಸುವದಕ್ಕಿಂತ ನೋಡುವುದೇ ಒಳ್ಳೆಯದೆಂದು ನನ್ನ ಭಾವನೆ.

ನೋಡಿ ಯುವತಿಯ ಈ ನೃತ್ಯದ ಸಖತ್ ವಿಡಿಯೋ

ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ಮಹಾರಾಷ್ಟ್ರ ಚಾ ಮುಲಿ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ 4 ಲಕ್ಷ ವೀಕ್ಷಣೆಯನ್ನು ಪಡೆದಿದ್ದು ಸುಮಾರು 30 ಸಾವಿರಕ್ಕೂ ಹೆಚ್ಚು ನೆಟ್ಟಿಗರು ಈ ವೀಡಿಯೋವನ್ನು ಇಷ್ಟಪಟ್ಟು ಲೈಕ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ಯುವತಿಯ ನೃತ್ಯ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದು ನೋಡುಗರು ಮಾತ್ರ ತುಂಬಾ ಇಂಟರೆಸ್ಟಿಂಗ್ ನಿಂದ ನೋಡುತ್ತಿದ್ದಾರೆ.