ಕೊನೆಯ ವಾರದಲ್ಲಿ ಸ್ಪರ್ಧಿಗಳಿಗೆ ಡಬಲ್ ಸರ್ಪ್ರೈಸ್ ನೀಡಿದ ಬಿಗ್ಬಾಸ್, ಸರ್ಪ್ರೈಸ್ ನೋಡಿ ಕುಣಿದು ಕುಪ್ಪಳಿಸಿದ ದಿವ್ಯಾ ಉರುಡುಗ!!!

ಬಿಗ್ಬಾಸ್ ಇನ್ನೂ ಈ ವಾರ ಫೈನಲ್ ವಾರ ಅಂತಲೇ ಪರಿಗಣಿಸಬೇಕಾಗುತ್ತದೆ. ಈ ವಾರದ ಕೊನೆಗೆ ಬಿಗ್ಬಾಸ್ ಮುಕ್ತಾಯ ವಾಗುತ್ತದೆ. ಹಾಗಾಗಿ ಈ ವಾರ ಕನ್ನಡ ಬಿಗ್ಬಾಸ್ ಸೀಸನ್ 9 ರ ವಿಜೇತ ಯಾರು ಎಂಬುದು ನಮಗೆಲ್ಲ ತಿಳಿದು ಬರುತ್ತದೆ. ಸದ್ಯಕ್ಕೆ ಮನೆಯಲ್ಲಿ ಕೇವಲ ಆರು ಜನ ಸ್ಪರ್ಧಿಗಳು ಮಾತ್ರ ಉಳಿದಿದ್ದಾರೆ. ಬಿಗ್ಬಾಸ್ ನಿಯಮದ ಪ್ರಕಾರ ಕೊನೆಯ ವಾರದ ಮಧ್ಯದಲ್ಲಿ ಒಂದು ಎಲಿಮಿನೇಟ್ ಆಗುತ್ತೆ ಅಂದರೆ ಬಿಗ್ಬಾಸ್ ಫೈನಲ್ಗೆ ಕೇವಲ ಐದು ಸ್ಪರ್ಧಿಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ಆದ್ದರಿಂದ ನಿನ್ನೆ ನೇರವಾಗಿ ಎಲಿಮಿನೆಟ್ ಪ್ರಕ್ರಿಯೆ ನಡೆಯಿತು ಅದರಲ್ಲಿ ಆರ್ಯವರ್ಧನ್ ಅವರ ಪ್ರಯಾಣ ನಿನ್ನೆಗೆ ಮುಗಿಯಿತು.

ಎಲಿಮಿನೇಟ್ ನಂತರ ಫೈನಲ್ ಗೆ ಎಂಟ್ರಿಯಾದ ಸ್ಪರ್ಧಿಗಳಿಗೆ ಖುಷಿ ಪಡಿಸುವ ಸಲುವಾಗಿ ಬಿಗ್ಬಾಸ್ ಹೊಸ ಯೋಜನೆಯೊಂದನ್ನು ರೂಪಿಸಿದರು. ಅಂದರೆ ಬಿಗ್ಬಾಸ್ ಮನೆಯಲ್ಲಿದ್ದ ಸ್ಪರ್ಧಿಗಳಿಗೆ ಡಬಲ್ ಸರ್ಪ್ರೈಸ್ ನೀಡಿದರು. ಇದನ್ನು ಕಂಡು ಬಿಗ್ಬಾಸ್ ಸ್ಪರ್ಧಿಗಳು ಪಟ್ಟ ಖುಷಿ ಹೇಳತಿರದು. ಬಿಗ್ಬಾಸ್ ಮೊದಲನೆಯ ಸರ್ಪ್ರೈಸ್ ಅಂದರೆ ಮನೆಯಲ್ಲಿದ್ದ ಸ್ಪರ್ಧಿಗಳಿಗೆ ಹುಲಿ ನೃತ್ಯ ಮಾಡುವ ಸಲುವಾಗಿ ಹುಲಿ ವೇಷ ಧರಿಸಿಕೊಂಡು ಐದು ಜನರನ್ನು ಒಳಗಡೆ ಕಳುಹಿಸಲಾಯಿತು. ಇವರ ಜೊತೆಗೆ ಮನೆಯಲ್ಲಿದ್ದ ಎಲ್ಲ ಸ್ಪರ್ಧಿಗಳು ತಮ್ಮ ಎಲ್ಲ ಶಕ್ತಿಯನ್ನು ಉಪಯೋಗಿಸಿ ಹುಲಿಯ ನೃತ್ಯವನ್ನು ಮಾಡಿದರು. ಈ ನೃತ್ಯದ ಬಡಿತ ಕೇಳಿದರೆ ಸಾಕು ನಿಂತಲ್ಲಿಯೇ ಮೈ ಜುಮ್ ಎಂದು ಕುಣಿಯಲು ಪ್ರೇರೇಪಿಸುತ್ತದೆ.

ಬಿಗ್ಬಾಸ್ ನೀಡಿದ ಎರಡನೆಯ ಸರ್ಪ್ರೈಸ್ ದಿವ್ಯಾ ಉರುಡುಗ ಅವರಿಗೆ ತುಂಬಾನೇ ಖುಷಿ ನೀಡಿತು. ಅಷ್ಟಕ್ಕೂ ಇವರಿಗೆ ಅಷ್ಟೇ ಏಕೆ ಖುಷಿ ಉಂಟಾಯಿತು ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಉದ್ಭವ ವಾಗಿರಬಹುದು. ಅದಕ್ಕೆ ಉತ್ತರ ನಾವು ಹೇಳಲಿದ್ದೇವೆ. ಕಳೆದ ಬಿಗ್ಬಾಸ್ ಸೀಸನ್ ನಲ್ಲಿ ಲವ್ ಬರ್ಡ್ ಎಂದೇ ಪ್ರಸಿದ್ಧ ವಾಗಿದ್ದ ಜೋಡಿ ಎಂದರೆ ಅದುವೇ ದಿವ್ಯಾ ಉರುಡುಗ ಹಾಗೂ ಅರವಿಂದ್ ಜೋಡಿ. ಕಳೆದ ಬಿಗ್ಬಾಸ್ ಸೀಸನ್ ತುಂಬೆಲ್ಲ ಇವರ ನಡುವಿನ ಪ್ರೀತಿ ಎಲ್ಲರ ಮನಸೆಳೆದಿತ್ತು. ಅಷ್ಟೇ ಅಲ್ಲದೆ ಬಿಗ್ಬಾಸ್ ಮುಕ್ತಯದ ನಂತರವೂ ಸಹ ಇಬ್ಬರು ಜೊತೆಗೂಡಿ ತಮ್ಮ ಪ್ರೀತಿಯನ್ನು ಹಂಚಿ ಕೊಂಡಿದ್ದಾರೆ. ಹೀಗಾಗಿ ದಿವ್ಯಾ ಉರುಡುಗ ಹಾಗೂ ಅರವಿಂದ್ ಅವರ ಜೋಡಿ ತುಂಬಾನೇ ಚರ್ಚೆಯಲ್ಲಿತ್ತು. ಬಿಗ್ಬಾಸ್ ಎರಡನೆಯ ಸರ್ಪ್ರೈಸ್ ಆಗಿ ಅರವಿಂದ್ ಅವರನ್ನು ಮನೆಯ ಒಳಗಡೆ ಕಳುಹಿಸಿದರು. ಮನೆಯಲ್ಲಿ ಫೈನಲ್ ಗೆ ಆಯ್ಕೆಯಾದ ಸ್ಪರ್ಧಿಗಳನ್ನು ಇನ್ನಷ್ಟು ಸ್ಪೂರ್ತಿ ನೀಡುವ ಸಲುವಾಗಿ ಇವರನ್ನು ಮನೆಯ ಒಳಗಡೆ ಕಳುಹಿಸಲಾಯಿತು. ಇವರನ್ನು ಕಂಡು ಎಲ್ಲರಗಿಂತ ಹೆಚ್ಚಾಗಿ ಖುಷಿ ಪಟ್ಟ ಸ್ಪರ್ಧಿ ಎಂದರೆ ಅದುವೇ ದಿವ್ಯಾ ಉರುಡುಗ ನೋಡಿ ಅವರು ಪಟ್ಟಿರುವ ಖುಷಿ.

ವೀಡಿಯೋ ನೋಡಿ..