Video; ಸೂಜಿಯಲ್ಲಿ ದಾರ ಪೋಣಿಸಲು ಆಗುತ್ತಿಲ್ಲವೆ, ಚಿಂತೆ ಬೇಡ; ಈ ಹುಡುಗಿಗೆ ಹೇಳಿ! ಚೆನ್ನಾಗಿ ಪೋಣಿಸಿ ಕೊಡುವಳು…

ತಮಾಷೆಯ ವಿಡಿಯೋಗಳು ಎಂದರೆ ಯಾರಿಗಿಷ್ಟವಿಲ್ಲ? ಎಲ್ಲ ವಯಸ್ಸಿನ ಜನರೂ ಇಂಥ ವಿಡಿಯೋಗಳನ್ನು ನೋಡಲು ಇಷ್ಟಪಡುತ್ತಾರೆ. ಅದಕ್ಕಾಗಿಯೇ ಸೋಷಿಯಲ್ ಮೀಡಿಯಾದಲ್ಲಿ ಈ ರೀತಿಯ ಕಂಟೆಂಟ್ ಗಳು ತುಂಬಾ ವೈರಲ್ ಆಗುತ್ತವೆ. ಸದ್ಯ ಇಂಥ ಒಂದು ತಮಾಷೆಯ ವಿಡಿಯೋ ಇಲ್ಲಿ ನೋಡಿದ ಬಳಿಕ ನಗು ತಡೆದುಕೊಳ್ಳುವದೇ ಸಾಧ್ಯವಾಗುವದಿಲ್ಲ.

ಪ್ರಸ್ತುತ ವಿಡಿಯೋದಲ್ಲಿ ಪುಟ್ಟ ಹುಡುಗಿಯೊಬ್ಬಳು ತುಂಬಾ ಗಂಭೀರವಾಗಿ ಕೆಲಸವೊಂದು ಮಾಡುತ್ತಿದ್ದಾಳೆ. ಈ ದೃಶ್ಯ ನೋಡಿದಾಗ ನೋಡುಗರು ದಂಗಾಗುತ್ತಾರೆ. ಯಾಕೆಂದರೆ ಅಷ್ಟೊಂದು ಸೀರಿಯಸ್ ಆಗಿ ಈ ಕೆಲಸದಲ್ಲಿ ತೊಡಗಿದ್ದಾಳೆ. ಇಲ್ಲಿ ಆಕೆ ಮಾಡುತ್ತಿರುವ ಕೆಲಸವೇನು ಗೊತ್ತಾ? ಆಕೆ ಸೂಜಿಯಲ್ಲಿ ದಾರವನ್ನು ಪೋಣಿಸುವ ಕೆಲಸವನ್ನು ಮಾಡುತ್ತಿದ್ದಾಳೆ. ಅದು ಸಾಕಷ್ಟು ತನ್ಮಯತೆಯಿಂದ. ಈ ಮುದ್ದು ಹುಡುಗಿಯ ಸ್ಟೈಲ್ ನ ವರ್ಣನೆಯಂತೂ ನನ್ನಿಂದ ಮಾಡಲು ಸಾದ್ಯವಿಲ್ಲ. ಅದಕ್ಕಾಗಿ ಆಕೆಯ ಈ ದೃಶ್ಯವನ್ನು ನೀವು ನಿಮ್ಮ ಕಣ್ಣುಗಳಿಂದಲೇ ನೋಡಿ ಗೊತ್ತಾಗುತ್ತೆ. ವಿಡಿಯೋದ ಕೊನೆ ಮಾತ್ರ ಮಿಸ್ ಮಾಡಬೇಡಿ.

ನೋಡಿ ಈ ವಿಡಿಯೋ…

 

View this post on Instagram

 

A post shared by Erdal Argun (@erdaldiyorki)

ಪ್ರಸ್ತುತ ಈ ಮುದ್ದಾದ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ erdaldiyorki ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಲಕ್ಷಾವಧಿ ಜನರು ನೋಡಿದ್ದಲ್ಲದೆ ಸಾವಿರಾರು ಜನರು ಲೈಕ್ ಸಹ ಮಾಡಿದ್ದಾರೆ.