ವರ್ಗದಲ್ಲಿ ಶಿಕ್ಷಕರು ಇರದೇ ಇದ್ದಾಗ ಅದ್ಭುತವಾದ ರೀತಿಯಲ್ಲಿ ಡ್ಯಾನ್ಸ್ ಮಾಡಿದ ಇಬ್ಬರು ಹುಡುಗಿಯರು!!

ಎಲ್ಲರ ಜೀವನದಲ್ಲಿ ಜೀವನಪೂರ್ತಿ ನೆನಪಾಗಿ ಉಳಿಯುವ ಸಂಗತಿಗಳಲ್ಲಿ ಶಾಲೆ ಮತ್ತು ಕಾಲೇಜಿನಲ್ಲಿಯ ನೆನಪುಗಳು ತುಂಬಾ ವಿಶೇಷವಾಗಿರುತ್ತವೆ. ಆ ಸಮಯದಲ್ಲಿ ನಾವು ನಮಗೆ ಬೇಕಾದ ರೀತಿಯಲ್ಲಿ ವರ್ತಿಸುತ್ತೇವೆ ಅಲ್ಲದೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಅವುಗಳಲ್ಲಿ ಸಹಭಾಗ ಸಹ ತಗೆದುಕೊಳ್ಳುತ್ತೇವೆ. ವಾರ್ಷಿಕೋತ್ಸವ ಸಮಯದಲ್ಲಿ ವಿವಿಧ ಡ್ಯಾನ್ಸ್ ನಾಟಕ ಮುಂತಾದ ಕಾರ್ಯಗಳಲ್ಲಿ ಸ್ಟೇಜ್ ಮೇಲೆ ಹೋಗಿ ನಮ್ಮ್ ಬಳಿಯಲ್ಲಿದ್ದ ಕೌಶಲ್ಯವನ್ನು ಜನರ ಎದುರಿಗೆ ಪ್ರದರ್ಶನ ಮಾಡುತ್ತೆವೆ. ಆದರೆ ಈಗ ಅನೇಕ ಕಾಲೇಜಿನಲ್ಲಿಯ ಅನೇಕ ವಿದ್ಯಾರ್ಥಿಗಳು ರೋಡ್ ಮೇಲೆ ತಮ್ಮ ಕಲಾಬಾಜಿಯನ್ನು ಪ್ರದರ್ಶನ ಮಾಡುತ್ತಾ ಜನರ ಗಮನವನ್ನು ಸೆಳೆದುಕೊಳ್ಳುತ್ತಾರೆ.

ಭಾರತದಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ ಅಲ್ಲದೆ ಪ್ರತಿಯೊಂದು ಕಾರ್ಯಕ್ರಮದಲ್ಲಿ ಏನಾದರೂ ಹೊಸದಾದ ಸಂಗತಿಯನ್ನು ಮಾಡುವ ಪ್ರಯತ್ನ ಎಲ್ಲರೂ ಮಾಡುತ್ತಾರೆ. ಈ ಪ್ರಯತ್ನದಿಂದಾಗಿ ನಮಗೆ ಅಲ್ಲಿಯ ವಿಶೇಷತೆಯ ಕುರಿತು ಗುರುತಾಗುವದು. ಅಲ್ಲದೆ ಅವರ ಕಡೆಯಿಂದ ಪ್ರೋತ್ಸಾಹ ತಗೆದುಕೊಂಡು ನಾವು ಸಹ ಅವರ ಹಾಗೆ ಹೊಸದಾಗಿ ಏನಾದ್ರೂ ಮಾಡಬೇಕು ಎಂದು ಮನದಲ್ಲಿ ಹುಮ್ಮಸ್ಸು ಬರುತ್ತದೆ.

ಇಂದಿನ ಪ್ರತಿಯೊಂದು ಪೀಳಿಗೆಗೆ ಡ್ಯಾನ್ಸ್ ಮಾಡುವದು ಎಂದರೆ ತುಂಬಾ ಇಷ್ಟ. ಗಣೇಶೋತ್ಸವ ಬಂದರೆ ಸಾಕು ದಿನವಿಡೀ ಡಿ ಜೆ ಹಚ್ಚಿ ಅದರ ಮುಂದೆ ತಮಗೆ ಬೇಕಾದ ರೀತಿಯಲ್ಲಿ ಡ್ಯಾನ್ಸ್ ಮಾಡುತ್ತಾರೆ. ಅಲ್ಲದೆ ಗಣೇಶ ಉತ್ಸವದ ಕೊನೆಯ ದಿನದ ಅಂದರೆ ಮೆರವಣಿಗೆಯ ದಿವಸ ವಂತು ಪ್ರತಿಯೊಬ್ಬರ ಡ್ಯಾನ್ಸ್ ಬಗ್ಗೆ ಹೇಳತೀರದು. ಅಂದು ಚಿಕ್ಕ ಮಗುವಿನಿಂದ ಹಿಡಿದು ಮುಪ್ಪಾದ ಮುದುಕರು ಸಹ ಜೋಶ್ ನಲ್ಲಿ ಡ್ಯಾನ್ಸ್ ಮಾಡುತ್ತಾರೆ.

ಸದ್ಯಕ್ಕೆ ಡ್ಯಾನ್ಸ್ ನ ಒಂದು ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಮೇಲೆ ಎಂತ ಅದ್ಭುತವಾದ ರೀತಿಯಲ್ಲಿ ಡ್ಯಾನ್ಸ್ ಮಾಡಿದ್ದಾರೆ ಎಂದು ನೀವೇ ಹೇಳುವಿರಿ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಯಾವುದೋ ಒಂದು ಕಾಲೇಜಿನಲ್ಲಿ ಗ್ಯಾಪ್ ಪಿರಿಡ್ ಸಮಯದಲ್ಲಿ ಇಬ್ಬರು ಯುವತಿಯರು ಜೊತೆಗೂಡಿ ಕ್ಲಾಸ್ ರೂಮ್ ನ ಮುಂಭಾಗದಲ್ಲಿ ನಿಂತುಕೊಂಡು ಅತೀ ಸುಂದರವಾಗಿ ಡ್ಯಾನ್ಸ್ ಮಾಡಿದ್ದಾರೆ. ಅವರು ಮಾಡಿರುವ ಸ್ಟೆಪ್ ಗಳು ನೋಡಿದರೆ ಯಾವ ಹೀರೋ ಹೀರೊಯಿನ್ ಸಹ ಇವರ ಮುಂದೆ ಜೀರೋ ಎಂದೆನಿಸುತ್ತದೆ. ಇಬ್ಬರು ಯುವತಿಯರು ಜೊತೆಗೂಡಿ ಹಾಕಿರುವ ಸ್ಟೆಪ್ ಮಿಸ್ ಆಗದೆ ಒಂದೇ ರೀತಿಯಲ್ಲಿ ಕುಣಿತ ಮಾಡಿದ್ದಾರೆ. ಈ ವೀಡಿಯೋವನ್ನು ನೋಡಿ ನೆಟ್ಟಿಗರು ಇವರನ್ನು ಹೋಗಳುತ್ತಿದ್ದಾರೆ.

ವೀಡಿಯೋ ನೋಡಿ.

ಪ್ರಸ್ತುತ ವೀಡಿಯೋವನ್ನು ಯೂಟ್ಯೂಬ್ ನಲ್ಲಿ swapnarao ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಈ ಅದ್ಭುತವಾದ ಡ್ಯಾನ್ಸ್ ವಿಡಿಯೋವನ್ನು ಇದುವರೆಗೆ ಸುಮಾರು ಐವತ್ತು ಮಿಲಿಯನ್ ರಷ್ಟು ಜನರು ವೀಕ್ಷಣೆ ಮಾಡಿದ್ದಾರೆ ಅಲ್ಲದೆ ಈ ಯುವತಿಯರ ಡ್ಯಾನ್ಸ್ ಕಂಡು ಸುಮಾರು 5 ಲಕ್ಷಕ್ಕೂ ಹೆಚ್ಚು ನೆಟ್ಟಿಗರು ಲೈಕ್ ಮಾಡಿದ್ದಾರೆ.