Video; ರೋಮ್ಯಾಂಟಿಕ್ ಫೋಟೋಗಳನ್ನು ಶೂಟ್ ಮಾಡುವಾಗ ವರನ ಕೈಯಿಂದ ಅನಾಮತ್ತಾಗಿ ಜಾರಿ ಬಿದ್ದಳು ವಧು..!
ಮದುವೆಯ ಸೀಸನ್ ಶುರುವಾಯಿತೆಂದರೆ ಸಾಕು ಸೋಶಿಯಲ್ ಮೀಡಿಯಾದಲ್ಲಿ ಮದುವೆಯ ಪ್ರಸಂಗಗಳ ಭರ್ಜರಿ ವಿಡಿಯೋಗಳು ವೈರಲ್ ಆಗಲು ಶುರುವಾಗುತ್ತವೆ. ಇಂಥ ಈ ವಿಡಿಯೋಗಳಲ್ಲಿ ಕೆಲವು ಹೃದಯಗಳನ್ನು ಗೆದ್ದರೆ ಇನ್ನೂ ಕೆಲವು ವಿಡಿಯೋಗಳು ಸಾಕಷ್ಟು ನಕ್ಕು ನಗಿಸಿ ಹೋಗುತ್ತವೆ. ಈಗಂತೂ ಮದುವೆಯ ಮೊದಲ ಮತ್ತು ನಂತರ ಹೀಗೆ ಹತ್ತು ಹಲವು ಪ್ರಸಂಗಗಳಲ್ಲಿ ಫೋಟೋಗಳನ್ನು ತೆಗೆದೇ ತೆಗೆದುಕೊಳ್ಳುತ್ತಾರೆ. ಇದೇ ಪ್ರಸಂಗದಲ್ಲಿ ನಡೆದ ಒಂದು ಅಚಾತುರ್ಯದ ದೃಶ್ಯ ಈಗ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ.
ವಿಡಿಯೋ ಶೂಟ್ ನಡೆದಾಗ ವಧು-ವರ ಇಬ್ಬರು ತುಂಬಾ ರೋಮ್ಯಾಂಟಿಕ್ ಆಗಿ ಬೇರೆ ಬೇರೆ ಪೊಜಿಶನ್ ಗಳಲ್ಲಿ ಕ್ಯಾಮೆರಾಮನ್ ಗೆ ಪೋಸುಗಳನ್ನು ಕೊಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ನಡೆದ ಅಚಾತುರ್ಯದ ಪ್ರಸಂಗ ಒಂದು ನೋಡುಗರಿಗೆ ದಂಗುಬಡಿಸುತ್ತದೆ. ವಿಡಿಯೋದಲ್ಲಿ ಕಂಡುಬರುವ ದೃಶ್ಯದ ಪ್ರಕಾರ, ಕಪಲ್ ವೆಡ್ಡಿಂಗ್ ಫೋಟೋಶೂಟ್ ಮಾಡುವಾಗ ತುಂಬಾ ರೋಮ್ಯಾಂಟಿಕ್ ಆಗಿ ಕಾಣಿಸುತ್ತಿದ್ದಾರೆ. ಇಬ್ಬರೂ ಕೂಡಿ ಮೆಲ್ಲಗೆ ಡಾನ್ಸ್ ಮಾಡುತ್ತಿರುವುದು ಕಂಡು ಬರುತ್ತಿದೆ. ಈ ಸಂದರ್ಭದಲ್ಲಿ ವರ ವಧುವಿಗೆ ಸೊಂಟ ಬಳಿಸಿ ಹಿಡಿಯಬೇಕಾಗಿತ್ತು, ಆದರೆ ಅದನ್ನು ಮರೆತ ಕಾರಣ ಅಥವಾ ಇಬ್ಬರು ಒಬ್ಬರೊಳಗೊಬ್ಬರು ತಲ್ಲೀನರಾಗಿದ್ದರಿಂದ ತಮ್ಮ ಸ್ಟೆಪ್ ಗಳನ್ನು ಮರೆಯುತ್ತಾರೆ. ಈ ತಪ್ಪಿನ ಪ್ರತಿಫಲ ಇಬ್ಬರಿಗೂ ಅಲ್ಲಿಯೇ ತಕ್ಷಣ ಸಿಗುತ್ತದೆ. ಅದೇನೆಂದರೆ ವರನ ಕೈಯಿಂದ ವಧು ಜಾರಿ ಬಿಡುತ್ತಾಳೆ ಮತ್ತು ಅಲ್ಲಿಯೇ ಕೆಳಗೆ ಬೀಳುತ್ತಾಳೆ. ಈ ಸಂದರ್ಭದಲ್ಲಿ ವರನ ಬ್ಯಾಲೆನ್ಸ್ ಸಹ ತಪ್ಪಿ ಬಿಡುತ್ತದೆ.
ನೋಡಿ ಈ ವಿಡಿಯೋ…
View this post on Instagram
ಈ ದೃಶ್ಯದ ನಂತರ ವಿಡಿಯೋದಲ್ಲಿ ಕಂಡು ಬರುವ ಜೋಡಿ ನಾಚಿಕೆಯಿಂದ ನೀರಾಗುತ್ತಾರೆ. ಈ ಸಂದರ್ಭದಲ್ಲಿ ಅಲ್ಲಿ ಉಪಸ್ಥಿತರಿದ್ದ ಸಂಬಂಧಿಕರಿಗೂ ಸಹ ನಗು ತಡೆದುಕೊಳ್ಳುವುದು ಸಾಧ್ಯವಾಗುವುದಿಲ್ಲ. ಪ್ರಸ್ತುತ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮಿನಲ್ಲಿ jaipur_preweddings ಹೆಸರಿನ ಖಾತೆಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ 9 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ. ಮತ್ತು 5 ಲಕ್ಷ 45 ಸಾವಿರಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.