Video; ಎಣ್ಣೆ ಜೋರಿನಿಂದ ರೈಲನ್ನೇ ನಿಲ್ಲಿಸಿದ ಸೂಪರ್ ಮ್ಯಾನ್; ಅದೇ ಎಣ್ಣೆಯನ್ನು ಕ್ಷಣಾರ್ಧದಲ್ಲಿ ಇಳಿಸಿದ ಮೋಟರ್ಮನ್..!

ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಗುವ ಕೆಲವು ವಿಡಿಯೋಗಳು ಭಾರಿ ಮಜವಾಗಿರುತ್ತವೆ. ಈ ರೀತಿಯ ವಿಡಿಯೋಗಳನ್ನು ಒಮ್ಮೆ ನೋಡಿದ ನಂತರ ಮೇಲಿಂದ ಮೇಲೆ ನೋಡಬೇಕೆನಿಸುತ್ತದೆ.

ಈಗ ಇಲ್ಲಿ ನೋಡಲಿರುವ ವಿಡಿಯೋ ಸಹ ಇದೇ ರೀತಿಯದ್ದಾಗಿದೆ. ಈ ವಿಡಿಯೋದ ಮೊದಲ ಭಾಗ ಸಿಟ್ಟು ತರಿಸುವದಾಗಿದ್ದರೆ ಕೊನೆ ಮಾತ್ರ ತುಂಬಾ ಇಂಟರೆಸ್ಟಿಂಗ್ ಆಗಿದ್ದು ಸಾಕಷ್ಟು ತಮಾಷೆಯಿಂದ ಕೂಡಿದೆ. ಇಲ್ಲಿ ವ್ಯಕ್ತಿಯೊಬ್ಬ ಎಣ್ಣೆ ಹೊಡೆದ ನಂತರ ಬಾಹುಬಲಿಯ ರೂಪವನ್ನು ತಾಳಿಕೊಂಡಿದ್ದಾನೆ. ಇದೇ ಭರದಲ್ಲಿ ಆತ ರೈಲಿನ ಟ್ರ್ಯಾಕ್ ಮೇಲೆ ಎದುರಿಗೆ ರೈಲು ಬರುತ್ತಿದ್ದರೂ ಲೆಕ್ಕಿಸದೆ ಹಾಗೆಯೇ ಹೋಗುತ್ತಾನೆ. ಇಲ್ಲಿ ಕುಡಿದವನ ಅದೃಷ್ಟ ಚೆನ್ನಾಗಿತ್ತು, ರೈಲು ಸಹ ಇನ್ನು ವೇಗ ತೆಗೆದುಕೊಂಡಿರಲಿಲ್ಲ. ಹೀಗಾಗಿ ಯಾವುದೇ ರೀತಿಯ ಅನಾಹುತ ಘಟಿಸಿಲ್ಲ. ಮತ್ತು ಮೋಟರ್ ಮನ್ ಜಾಗೃತೆಯಿಂದಾಗಿ ರೈಲನ್ನು ನಿಲ್ಲಿಸಿದ್ದಾನೆ. ಆದರೆ ಕಥೆ ಇಲ್ಲಿಗೆ ಮುಗಿದಿಲ್ಲ. ಟ್ರೈನಿನ ಡ್ರೈವರ್ ಟ್ರೈನ್ ನಿಲ್ಲಿಸಿ ಅಷ್ಟಕ್ಕೆ ಬಿಟ್ಟಿಲ್ಲ. ಆತ ಹಾಗೆ ತಕ್ಷಣ ಕೆಳಗಿಳಿದು ಓಡುತ್ತಾ ಬಂದು ಮುಂದೆ ಮುಖ ಮಾಡಿ ಹೋಗುತ್ತಿದ್ದ ಎಣ್ಣೆ ಮಹಾರಾಜನಿಗೆ ಎರಡೇಟು ಬಿಗಿಯುತ್ತಾನೆ. ಮೋಟರ್ಮನ್ ನ ಒಂದೇ ಏಟಿಗೆ ರೈಲು ತಡೆದ ಎಣ್ಣೆ ಬಾಹುಬಲಿ ಅಲ್ಲಿಯೇ ನೆಲಕಚ್ಚುತ್ತಾನೆ. ಟ್ರೈನಿನ ಡ್ರೈವರ್ ಮಾಡಿದ ಈ ಕೆಲಸ ನೆಟ್ಟಿಗರಿಗೆ ತುಂಬಾನೇ ಇಷ್ಟವಾಗಿದೆ.

ವಿಡಿಯೋ ನೋಡಿ

ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ‘ಲವ್ ಕುಮಾರ್ ಲೋಕೋ ಪೈಲೆಟ್ ಆಫೀಸಿಯಲ್’ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಪ್ರಸ್ತುತ ವಿಡಿಯೋ 2.4 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ. ವಿಡಿಯೋದ ಕೊನೆಯಲ್ಲಿ ವ್ಯಕ್ತಿಯೊಬ್ಬ ಈ ಎಲ್ಲ ದೃಶ್ಯವನ್ನು ರಿಪೋರ್ಟರ್ ಹಾಗೆ ವಿವರಿಸಿ ಹೇಳುತ್ತಿದ್ದಾನೆ.