Video; ಅಬ್ಬಾ! ಮದುವೆಯಲ್ಲಿಯ ಇದೆಂತ ಆಚರಣೆ? ಮದುವೆಗೆ ಮುನ್ನವೇ ವರನ ಸೊಂಟ ಮುರಿದ ಕುದುರೆ!
ನಮ್ಮ ದೇಶದಲ್ಲಿ ಕಂಡುಬರುವ ರೂಢಿ, ಪರಂಪರೆ, ಆಚರಣೆಗಳು ಜಗತ್ತಿನ ಯಾವ ದೇಶದಲ್ಲಿಯೂ ಕಂಡುಬರಲಿಕ್ಕಿಲ್ಲ. ಇಲ್ಲಿ ಹೆಜ್ಜೆ ಹೆಜ್ಜೆಗೆ, ಊರಿಂದ ಊರಿಗೆ, ರಾಜ್ಯ ರಾಜ್ಯಗಳಲ್ಲಿ ಅನೇಕ ರೀತಿಯ ಸಾವಿರಾರು ಪ್ರಕಾರದ ವಿವಿಧ ಆಚರಣೆಗಳು ನೋಡಲು ಸಿಗುತ್ತವೆ. ಇಂತಹ ಆಚರಣೆಗಳು ಕೆಲವೊಮ್ಮೆ ಕೆಲವರಿಗೆ ತುಂಬಾ ಮುಳುವಾಗಿ ಪರಿಣಮಿಸುತ್ತವೆ. ಸದ್ಯ ಒಂದು ಆಚರಣೆ ಮದುವೆ ಮಾಡಿಕೊಳ್ಳುವ ವರನ ಜೀವಕ್ಕೆ ಕುತ್ತು ತಂದಿದೆ ಎಂದರೆ ತಪ್ಪಾಗಲ್ಲ.
ಈ ವಿಡಿಯೋ ನೋಡಿದಾಗ ಗೊತ್ತಾಗುತ್ತೆ, ಅಯ್ಯೋ ಪಾಪ.. ಇದೆಂಥ ಆಚರಣೆ ಎಂಬ ಶಬ್ದ ನೋಡುಗರ ಬಾಯಿಯಿಂದ ಹೊರ ಬೀಳುತ್ತದೆ. ವಿಡಿಯೋದ ದೃಶ್ಯದಲ್ಲಿ ವರ ಮದುವೆ ಮಾಡಿಕೊಳ್ಳುವ ಹುಮ್ಮಸ್ಸಿನಲ್ಲಿ ಕುದುರೆ ಏರಿ ಕುಳಿತಿದ್ದಾನೆ. ಸಂಬಂಧಿಕರು ವರ ಏರಿ ಕುಳಿತ ಕುದುರೆಯ ಮುಂದೆ ಹೊರಸನ್ನು (ನೂಲಿನ ದಾರಿನಿಂದ ಹೆಣೆದು ತಯಾರಿಸಿದ ಪಲ್ಲಂಗ) ಹಿಡಿದಿದ್ದಾರೆ. ಮೊದಲ ಹಂತದಲ್ಲಿ ಅದನ್ನು ಯಾಕೆ ಹಿಡಿದಿದ್ದಾರೆ ಎಂಬುದು ನೋಡುಗರಿಗೆ ಪ್ರಶ್ನೆಯಾಗುತ್ತದೆ. ಕೆಲವೇ ಕ್ಷಣಗಳಲ್ಲಿ ಕುದುರೆ ಒಂದು ಸುತ್ತು ಹಾಕಿ ಮರಳಿ ಬಂದು ಹೊರಸಿನ ಮೇಲೆ ಏರಲು ಪ್ರಯತ್ನಿಸುತ್ತದೆ. ಇದು ಅದ್ಯಾವ ರೀತಿಯ ರೂಢಿ, ಪರಂಪರೆ ಎಂಬುದು ಮಾತ್ರ ಗೊತ್ತಿಲ್ಲ. ಆದರೆ ಅನುಚಿತ ಪ್ರಕಾರ ಒಂದು ಇಲ್ಲಿ ಘಟಿಸಿಯೇ ಬಿಡುತ್ತದೆ. ವರನನ್ನು ಮೇಲೇರಿಸಿಕೊಂಡು ಕುದುರೆ ತನ್ನ ಎರಡು ಕಾಲುಗಳನ್ನು ಪಲ್ಲಂಗದ ಮೇಲೆ ಇಡಲು ಹೋಗುತ್ತಿದ್ದಂತೆಯೇ ಕುದುರೆಯ ಹಿಂದಿನ ಎರಡು ಕಾಲಗಳು ಸರ್ರನೇ ಮುಂಬದಿಗೆ ಜಾರಿ ಬಿಡುತ್ತವೆ. ಇದರಿಂದಾಗಿ ಕುದುರೆ ಸಂಪೂರ್ಣವಾಗಿ ತನ್ನ ಬ್ಯಾಲೆನ್ಸ್ ಕಳೆದುಕೊಂಡು ಹಿಂಬದಿಗೆ ವರನನ್ನು ಕೆಳಗೆ ಹಾಕಿ ಮೇಲೆ ಬಿದ್ದುಬಿಡುತ್ತದೆ. ಇಲ್ಲಿ ವರ ಕುದುರೆಯ ಕೆಳಗೆ ಸಿಕ್ಕಿ ಬಿದ್ದದ್ದು ಸ್ಪಷ್ಟವಾಗಿ ಕಂಡು ಬರುತ್ತದೆ. ಇನ್ನು ಕುದುರೆಯ ಭಾರದ ಬಗ್ಗೆ ತಲೆ ಕೆಡಿಸಿಕೊಳ್ಳದಿರುವುದೇ ಉತ್ತಮ.
ವೀಡಿಯೋ ನೋಡಿ
View this post on Instagram
ಈ ವಿಡಿಯೋವನ್ನು instagram ನಲ್ಲಿ amanprajapati47 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ 1.4 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ.