Bigboss Final: ಕನ್ನಡ ಬಿಗ್ಬಾಸ್ ಸೀಸನ್-9 ರ ವಿನ್ನರ ಯಾರಾಗಬೇಕು? ಯಾರಾಗಲಿದ್ದಾರೆ ತಿಳಿದುಕೊಳ್ಳಿ!!
ಬಿಗ್ಬಾಸ್ ಇನ್ನೂ ಈ ವಾರ ಫೈನಲ್ ವಾರ ಅಂತಲೇ ಪರಿಗಣಿಸಬೇಕಾಗುತ್ತದೆ. ಈ ವಾರದ ಕೊನೆಗೆ ಬಿಗ್ಬಾಸ್ ಮುಕ್ತಾಯ ವಾಗುತ್ತದೆ. ಹಾಗಾಗಿ ಈ ವಾರ ಕನ್ನಡ ಬಿಗ್ಬಾಸ್ ಸೀಸನ್ 9 ರ ವಿಜೇತ ಯಾರು ಎಂಬುದು ನಮಗೆಲ್ಲ ತಿಳಿದು ಬರುತ್ತದೆ. ಈ ವಾರದ ಆರಂಭದಲ್ಲಿ ಮನೆಯಲ್ಲಿ ಕೇವಲ ಆರು ಜನ ಸ್ಪರ್ಧಿಗಳು ಮಾತ್ರ ಉಳಿದಿದ್ದರು. ಬಿಗ್ಬಾಸ್ ನಿಯಮದ ಪ್ರಕಾರ ಕೊನೆಯ ವಾರದ ಮಧ್ಯದಲ್ಲಿ ಒಂದು ಎಲಿಮಿನೇಟ್ ಆಗುತ್ತೆ ಅಂದರೆ ಬಿಗ್ಬಾಸ್ ಫೈನಲ್ಗೆ ಕೇವಲ ಐದು ಸ್ಪರ್ಧಿಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ಆದ್ದರಿಂದ ಮಂಗಳವಾರ ನೇರವಾಗಿ ಎಲಿಮಿನೆಟ್ ಪ್ರಕ್ರಿಯೆ ನಡೆಯಿತು ಅದರಲ್ಲಿ ಆರ್ಯವರ್ಧನ್ ಅವರ ಪ್ರಯಾಣ ಮುಗಿಯಿತು.
ಎಲಿಮಿನೇಟ್ ನಂತರ ಫೈನಲ್ ಗೆ ಎಂಟ್ರಿಯಾದ ಸ್ಪರ್ಧಿಗಳಿಗೆ ಖುಷಿ ಪಡಿಸುವ ಸಲುವಾಗಿ ಬಿಗ್ಬಾಸ್ ಹೊಸ ಯೋಜನೆಯೊಂದನ್ನು ರೂಪಿಸಿ ಹಲವಾರು ಪ್ರಕಾರದ ಸರ್ಪ್ರೈಸ್ ನೀಡಿದರು. ಈ ಎಲ್ಲ ಸರ್ಪ್ರೈಸ್ ಕಂಡು ಮನೆಯಲ್ಲಿದ್ದ ಸ್ಪರ್ಧಿಗಳು ಕೂಡಾ ಕುಣಿದು ಕುಪ್ಪಳಿಸಿದರು. ಆದರೆ ಇಂದು ಶುಕ್ರವಾರ ಸಾಯಂಕಾಲ 7.30 ರಿಂದ ಬಿಗ್ಬಾಸ್ ಫೈನಲ್ ಪ್ರಾರಂಭ ವಾಗಲಿದೆ ಹೀಗಾಗಿ ಈ ಬಾರಿಯ ಅಂದರೆ ಬಿಗಬಾಸ್ ಸೀಸನ್ 9 ರ ವಿನ್ನರ ಯಾರಾಗುತ್ತಾರೆ ಎಂಬುದು ತಿಳಿದುಕೊಳ್ಳಲು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ.

ಬಿಗ್ಬಾಸ್ ಮನೆಯಲ್ಲಿ ಸದ್ಯಕ್ಕೆ ಫೈನಲ್ ಗೆ ಐದು ಸ್ಪರ್ಧಿಗಳಲ್ಲಿ ರೂಪೇಶ್, ರಾಜಣ್ಣ, ರಾಕೇಶ್, ದಿವ್ಯಾ ಉರುಡುಗ ಮತ್ತು ದೀಪಿಕಾ ದಾಸ್ ಆಯ್ಕೆ ಯಾಗಿದ್ದಾರೆ. ಈ ಐವರಲ್ಲಿ ಗೆಲ್ಲೋರು ಯಾರು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಈ ಸಂಪೂರ್ಣ ಸೀಸನ್ ವಿಚಾರ ಮಾಡಲಾಗಿ ಟಾಸ್ಕ್ ಮಾಡಿದ ರೀತಿ, ಚಟುವಟಿಕೆಗಳಲ್ಲಿಯ ಸಹಭಾಗಿತ್ವ, ಕ್ಯಾಪ್ಟನ್ ಶೀಪ್ ಇವೆಲ್ಲ ಸಂಗತಿಗಳನ್ನು ಗಮನಕ್ಕೆ ತಗೆದುಕೊಂಡರೆ ಅದ್ಭುತವಾದ ಪ್ರದರ್ಶನ ನೀಡಿದ ಸ್ಪರ್ಧಿ ಎಂದರೆ ರೂಪೇಶ್ ಶೆಟ್ಟಿ. ಅಷ್ಟೇ ಅಲ್ಲ ಕರುನಾಡಿನ ಜನತೆಯ ಅತ್ಯಂತ ಪ್ರೀಯ ಸ್ಪರ್ಧಿ ಸಹ ಇವರೇ ಆಗಿದ್ದಾರೆ. ರೂಪೇಶ್ ಶೆಟ್ಟಿ ಗೆಲ್ಲಬೇಕು ಎಂಬುದು ಎಲ್ಲರ ಆಸೆಯಾಗಿದೆ. ಎಲಿಮಿನೇಟ್ ಆಗಿ ಹೊರಬಂದ ಆರ್ಯವರ್ಧನ್ ಸಹ ಮೊನ್ನೆ ಬಿಗ್ಬಾಸ್ ಯಾರು ಗೆಲ್ಲುತ್ತಾರೆ ಎಂಬುದಕ್ಕೆ ಉತ್ತರ ಹೇಳಿದ್ದಾರೆ.
“1000% ಕೊಟ್ಟು ಹೇಳುತ್ತೇನೆ ಈ ಸೀಸನ್ ವಿನ್ನರ್ ರೂಪೇಶ್ ಶೆಟ್ಟಿ ಆಗಲಿದ್ದಾರೆ” ಎಂದು ಆರ್ಯವರ್ಧನ್ ಅವರು ತಮ್ಮ ಅನಿಸಿಕೆ ತಿಳಿಸಿದ್ದಾರೆ. ಈ ಐವರಲ್ಲಿ ರಾಕೇಶ್ ಸಹ ಒಬ್ಬ ಸ್ಟ್ರಾಂಗ್ ಸ್ಪರ್ಧಿ ಅಂತಲೇ ಹೇಳಬಹುದು. ಹೀಗಾಗಿ ರೂಪೇಶ್ ಹಾಗೂ ರಾಕೇಶ್ ಇವರಲ್ಲಿ ಯಾರು ವಿನ್ನರ್ ಆಗಬೇಕು ಹಾಗೂ ಯಾರು ರನ್ನರ್ ಅಪ್ ಆಗಬೇಕು ಎಂಬುದು ಕಾದು ನೋಡಬೇಕು. ನಿಮ್ಮ ಪ್ರಕಾರ ಈ ಐವರಲ್ಲಿ ಯಾರು ವಿನ್ನರ್ ಮತ್ತು ಯಾರು ರನ್ನರ್ ಅಪ್ ಆಗಬೇಕು ಎಂಬುದು ನಮಗೆ ಕಾಮೆಂಟ್ ಮಾಡಿ ತಿಳಿಸಿ.
