ಪ್ರಸ್ಥದ ದಿನವೇ ಕೋಣೆಯಲ್ಲಿ ಬಂದು ಡಾನ್ಸ್ ಮಾಡ ತೊಡಗಿದರು ಸಂಬಂಧಿಕರು! Video ದಲ್ಲಿ ವಧು-ವರರ ಮುಖ ನೋಡುವಂತಿತ್ತು.
ಮದುವೆಯ ಪ್ರಸಂಗಗಳ ಎಲ್ಲ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ನೋಡಲು ಸಿಗುತ್ತಿವೆ. ಸದ್ಯ ಯಾವುದು ಮುಚ್ಚು ಮರೆ ಇದ್ದಂತೆ ಕಾಣುತ್ತಿಲ್ಲ. ಎಲ್ಲ ಸ್ಥಳಗಳಲ್ಲಿಯ, ಎಲ್ಲಾ ಪ್ರಸಂಗಗಳಲ್ಲಿಯ ವಿಡಿಯೋಗಳನ್ನು ಮಾಡುವುದು ಮತ್ತು ಸೋಶಿಯಲ್ ಮೀಡಿಯಾ ಸೈಟ್ ಗಳಲ್ಲಿ ಅವುಗಳನ್ನು ಹರಿಬಿಡುವುದು ಈಗ ತುಂಬಾ ಸಾಮಾನ್ಯವಾಗಿ ಬಿಟ್ಟಿದೆ.
ವಧು-ವರರ ಹೊಸದಾದ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೋದ ದೃಶ್ಯ ಪ್ರಸ್ಥದ ಕೋಣೆಯಲ್ಲಿಯದಿದೆ. ಇತ್ತೀಚೆಗೆ ಜನರು ಪ್ರತಿಯೊಂದು ಪ್ರಸಂಗವನ್ನು ಎಂಜಾಯ್ ಮಾಡಲು ಇಚ್ಛಿಸುತ್ತಿದ್ದಾರೆ. ಇಲ್ಲಿ ಮದುವೆಯಾದ ನಂತರ ವರ ತನ್ನ ಪತ್ನಿಯ ತವರು ಮನೆಗೆ ಹೋಗಿ ಮೊದಲ ದಿನವೇ ಬೆಚ್ಚಿಬಿದ್ದಿದ್ದಾನೆ.
ಪ್ರಸ್ಥದ ರಾತ್ರಿಯೇ ಮನೆಯವರು ಸೇರಿದರು ವಧು ವರರ ಕೋಣೆಯಲ್ಲಿ…
ಇಂಟರ್ನೆಟ್ ನಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವರ ಅವರ ಪದ್ಧತಿಯಂತೆ ತನ್ನ ಪತ್ನಿಯ ತವರು ಮನೆಗೆ ಹೋಗುತ್ತಾನೆ. ಇಲ್ಲಿ ವಧುವಿನ ಕಡೆಯವರು ವರನಿಗೆ ಸರ್ಪ್ರೈಸ್ ನೀಡುವ ಉದ್ದೇಶದಲ್ಲಿದ್ದರು. ಮನೆಯವರು ಕೋಣೆಯಲ್ಲಿ ತುಂಬಾ ಒಳ್ಳೆಯ ಡೆಕೋರೇಷನ್ ಮಾಡಿರುತ್ತಾರೆ. ಇದನ್ನೆಲ್ಲ ನೋಡಿ ಇಬ್ಬರೂ ಸಂತೋಷ ಪಡುತ್ತಾರೆ. ಆದರೆ ಕೆಲವೇ ಕ್ಷಣಗಳಲ್ಲಿ ಮನೆಯವರೆಲ್ಲರೂ ಅದೇ ಕೋಣೆಯಲ್ಲಿ ಹಠಾತ್ ಬಂದುಬಿಡುತ್ತಾರೆ.
ನೋಡಿ ತಮಾಷೆಯ ಈ ವಿಡಿಯೋ…
View this post on Instagram
ಬೆಡ್ ಮೇಲೆ ಕುಳಿತ ವಧುವಿನ ಮುಂದೆ ಕುಟುಂಬದ ಸದಸ್ಯರು ಒಂದುಗೂಡಿ ಡಾನ್ಸ್ ಮಾಡಲು ಶುರು ಮಾಡುತ್ತಾರೆ. ಈ ಸಂದರ್ಭದಲ್ಲಿ ವಧು ಸಹ ಏನು ತೋಚದಂತಾಗಿ ಅವರ ಜೊತೆಗೆ ಚಪ್ಪಾಳೆ ತಟ್ಟಲು ಶುರುಮಾಡುತ್ತಾಳೆ. ಈ ಸಂದರ್ಭದಲ್ಲಿ ವರನ ಮುಖ ಮಾತ್ರ ನೋಡುವಂತಾಗಿದೆ. ಕೆಲವೇ ಸೆಕೆಂಡುಗಳ ಈ ವಿಡಿಯೋ skg_photography_official ಹೆಸರಿನ ಅಕೌಂಟ್ನಿಂದ ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ.