ತನ್ನದೇ ಮದುವೆಯಲ್ಲಿ ಭರ್ಜರಿಯಾಗಿ ಚೆಂಡೆಯನ್ನು ಬಾರಿಸಿ ಸಖತ್ ಸೆಲೆಬ್ರೇಶನ್ ಮಾಡಿದಳು ವಧು! ನೋಡಿ ಈ ವೈರಲ್ Video.
ನಮ್ಮ ದೇಶದಲ್ಲಿ ಮದುವೆಯಲ್ಲಿ ಅಥವಾ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಕಂಡುಬರುವ ರೂಢಿ, ಪರಂಪರೆ, ಆಚರಣೆಗಳು ಜಗತ್ತಿನ ಯಾವ ದೇಶದಲ್ಲಿಯೂ ಕಂಡುಬರಲಿಕ್ಕಿಲ್ಲ. ಇಲ್ಲಿ ಹೆಜ್ಜೆ ಹೆಜ್ಜೆಗೆ, ಊರಿಂದ ಊರಿಗೆ, ರಾಜ್ಯ ರಾಜ್ಯಗಳಲ್ಲಿ ಅನೇಕ ರೀತಿಯ ನೂರಾರು ಪ್ರಕಾರದ ವಿವಿಧ ಆಚರಣೆಗಳು, ಪದ್ಧತಿಗಳು ನೋಡಲು ಸಿಗುತ್ತವೆ.
ಮದುವೆಯಲ್ಲಿ ಮುಖ್ಯ ಆಕರ್ಷಕ ವಧು-ವರರಾಗಿರುತ್ತಾರೆ. ಇತ್ತೀಚೆಗೆ ತಮ್ಮ ಮದುವೆಯಲ್ಲಿ ತಾವೇ ಅಂದರೆ ವಧು-ವರರೇ ವಿವಿಧ ರೀತಿಯ ಕಲೆಗಳನ್ನು ಸಾದರಪಡಿಸುವ ಟ್ರೆಂಡ್ ಹೆಚ್ಚಾಗಿದೆ. ಇದರಲ್ಲಿ ಡ್ಯಾನ್ಸ್ ಮಾಡುವುದನ್ನು ಮತ್ತು ಹಾಡುವುದು ಹೀಗೆ ಬೇರೆ ಇನ್ನಾವುದೋ ರೀತಿಯ ಆಕ್ಟಿವಿಟೀಸ್ ಗಳನ್ನು ಮಾಡುವುದು ನೋಡಿರಬೇಕು. ಸದ್ಯ ಇಲ್ಲಿ ನೋಡಲಿರುವ ವಧು ಒಬ್ಬಳು ತನ್ನಲ್ಲಿರುವ ಬೇರೆ ಕಲೆಯನ್ನೇ ತನ್ನದೇ ಮದುವೆಯಲ್ಲಿ ಬಿಂದಾಸ್ ಆಗಿ ಪ್ರದರ್ಶನ ಮಾಡುತ್ತಿದ್ದಾಳೆ ಅದು ಸಖತ್ ಜೋಶ್ ನಲ್ಲಿ.
ಮದುವೆ ನೆರೆಯ ಕೇರಳ ರಾಜ್ಯದಲ್ಲಿಯದಿದೆ. ಇಲ್ಲಿ ವಧು ಚೆಂಡೆಯನ್ನು (ಮದ್ದಳೆ ಅಥವಾ ಮೃದಂಗವನ್ನು ಹೋಲುವ ವಾದ್ಯ) ಬಾರಿಸುತ್ತಿರುವುದು ನೋಡಬಹುದು. ಈ ವಾದ್ಯವನ್ನು ಯಕ್ಷಗಾನದಲ್ಲಿ ಉಪಯೋಗಿಸಲಾಗುತ್ತದೆ. ವಧು ಕೆಂಪು ಸೀರೆ ತೊಟ್ಟು ತುಂಬಾ ಸುಂದರವಾಗಿ ಕಾಣುತ್ತಿದ್ದಾಳೆ. ಈಕೆ ತನ್ನದೇ ಮದುವೆಯಲ್ಲಿ ತುಂಬಾ ಸಂತೋಷದಿಂದ ಚೆಂಡೆಯನ್ನು ಬಾರಿಸುತ್ತಿರುವುದು ನೀವಿಲ್ಲಿ ನೋಡಬಹುದು. ಆಕೆಯ ಜೊತೆಗೆ ಇನ್ನಿತರ ಚಂಡೆ ವಾದಕರು ಸಹ ತುಂಬಾ ಹುರುಪಿನಿಂದ ವಾದ್ಯವನ್ನು ಬಾರಿಸುತ್ತಿರುವುದು ಕಂಡುಬರುತ್ತದೆ. ಈ ದೃಶ್ಯವನ್ನು ನೋಡಿದಾಗ ವಧು ಇದರಲ್ಲಿ ತುಂಬಾ ಪ್ರವೀಣಳಾಗಿದ್ದಾಳೆಂದು ಗೊತ್ತಾಗುತ್ತದೆ.
ನೋಡಿ ಈ ವಿಡಿಯೋ…
ಪ್ರಸ್ತುತ ವಿಡಿಯೋ ಇಂಟರ್ನೆಟ್ ನಲ್ಲಿ ತುಂಬಾ ವೇಗವಾಗಿ ವೈರಲ್ ಆಗುವುದರ ಜೊತೆಗೆ ಈ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಒಟ್ಟಿನಲ್ಲಿ ವಧು ಮಾತ್ರ ತನ್ನ ಮದುವೆಯನ್ನು ಚೆಂಡೆ ಬಾರಿಸುತ್ತಾ ಯೂನಿಕ್ ಆಗಿ ಸೆಲೆಬ್ರೇಶನ್ ಮಾಡುತ್ತಿದ್ದಾಳೆ ನಿಜ.