ಕಾಡಿನಲ್ಲಿ ಟೂರಿಸ್ಟ್ ಜೀಪನ್ನು ಹಠಾತ್ ಬೆನ್ನಟ್ಟಿ ತೀರ ಹತ್ತಿರವೇ ಬಂದ ಘೇಂಡಾ! ಯುವತಿ ತಬ್ಬಿಬ್ಬು; Video ದೃಶ್ಯ ಕ್ಯಾಮೆರಾದಲ್ಲಿ ಸೆರೆ.

ಕಾಡಿನಲ್ಲಿ ಸಂಚರಿಸುವಾಗ ಕೆಲವೊಮ್ಮೆ ಪ್ರಾಣಿಗಳಿಂದ ಅತಿರೇಕದ ಪ್ರಸಂಗಗಳು ಘಟಿಸುತ್ತವೆ. ಅಂಥ ಪ್ರಸಂಗಗಳನ್ನು ನಾವೆಂದೂ ಈ ಮೊದಲು ಯೋಚಿಸಿರುವದಿಲ್ಲ. ಅಷ್ಟೊಂದು ಬೆವರಿಳಿಸುವ ಘಟನೆಗಳು ನಡೆದು ಹೋಗುತ್ತವೆ. ಕಾಡಿನಲ್ಲಿ ಸಂಚರಿಸುವದೆಂದರೆ ಸಾಮಾನ್ಯವಲ್ಲ. ಕಾರಣ ಕಾಡುಪ್ರಾಣಿಗಳು ಯಾವಾಗ ಯಾವ ರೀತಿ ನಮ್ಮೊಂದಿಗೆ ವರ್ತಿಸುತ್ತವೆ ಎಂದು ತಿಳಿದುಕೊಳ್ಳಲು ಸಾಧ್ಯವಿಲ್ಲ. ಸದ್ಯ ಇದೇ ರೀತಿಯ ವಿಚಿತ್ರ ವಿಡಿಯೋ ಒಂದು ಇಂಟರ್ನೆಟ್ ನಲ್ಲಿ ನೋಡಲು ಸಿಗುತ್ತಿದೆ.

ಪ್ರಸ್ತುತ ವಿಡಿಯೋದಲ್ಲಿ ಪ್ರವಾಸಿಗರು ಓಪನ್ ಜೀಪಿನಲ್ಲಿ ಕುಳಿತು ಕಾಡಿನ ಆಸ್ವಾದವನ್ನು ತೆಗೆದುಕೊಳ್ಳುತ್ತಿದ್ದಾರೆ. ಎಲ್ಲರೂ ಸಂತೋಷದಲ್ಲಿ ಮುಳುಗಿರುವಾಗಲೇ ಒಂದು ಬೆವರಿಳಿಸುವ ಘಟನೆಯೊಂದು ಜರುಗುತ್ತದೆ.

ಅದೇನೆಂದರೆ ಘೇಂಡಾ ಮೃಗವೊಂದು ಹಠಾತ್ ಪ್ರವಾಸಿಗರ ಜೀಪಿಗೆ ಫಾಲೋ ಮಾಡಲು ಶುರು ಮಾಡುತ್ತದೆ. ಆ ಸಂದರ್ಭದಲ್ಲಿ ಜೀಪಿನ ಡ್ರೈವರ್ ಇದೆಲ್ಲ ಸಹಜವೆಂಬಂತೆ ಜೀಪನ್ನು ಓಡಿಸಲು ಶುರು ಮಾಡುತ್ತಾನೆ. ಆದರೆ ಇದು ಸಹಜವಾಗಿರುವದಿಲ್ಲ. ಕಾರಣ ಘೇಂಡಾ ಸುಮಾರು 3 ಕಿಲೋಮೀಟರ್ ಗಳ ವರೆಗೆ ಜೀಪಿನ ಫಾಲೋ ಮಾಡುತ್ತಾ ಬೆನ್ನಟ್ಟಿ ಬರುತ್ತದೆ. ಆಗ ಮಾತ್ರ ಜೀಪಿನಲ್ಲಿ ಕುಳಿತವರಿಗೆ ಎಲ್ಲ ದೇವರುಗಳು ನೆನಪಿಗೆ ಬರುತ್ತಾರೆ. ಅದರಲ್ಲಿ ಕುಳಿತ ಯುವತಿಯೊಬ್ಬಳಂತೂ ಹೆದರಿ ಒಂದೇ ಸವನೆ ಗಂಟಲು ಹರಿದು ಹೋಗುವ ಹಾಗೆ ಕಿರುಚುತ್ತಿದ್ದಾಳೆ. ಹಿಂದೆ ಘೇಂಡಾ ಮಾತ್ರ ತನ್ನ ವೇಗ ಸ್ವಲ್ಪವೂ ಕಡಿಮೆ ಮಾಡದೆ ಹಾಗೆಯೇ ಜೀಪಿನ ಹತ್ತಿರ ಹತ್ತಿರ ಬಂದೇ ಬರುತ್ತಿದೆ. ಈ ರೀತಿ ಘೇಂಡಾ ಸುಮಾರು 3 ಕಿ. ಮೀ ಗಳವರೆಗೆ ಪ್ರವಾಸಿಗರ ವಾಹನವನ್ನು ಅಟ್ಟಿಸಿಕೊಂಡು ಬರುತ್ತದೆ.

ನೋಡಿ ಈ ವಿಡಿಯೋ…

ಪ್ರಸ್ತುತ ವಿಡಿಯೋವನ್ನು ನ್ಯೂಸ್ ಏಜೆನ್ಸಿ ANI ಶೇರ್ ಮಾಡಿದೆ. ಈ ದೃಶ್ಯ ಆಸಾಮಿನ ಬಕ್ಸಾ ದಲ್ಲಿಯ ಮಾನಸ ನ್ಯಾಷನಲ್ ಪಾರ್ಕ್ (Manas National Park) ನಲ್ಲಿಯದಿದೆ. ಈ ಘಟನೆಯಲ್ಲಿ ಯಾವುದೇ ಅನಾಹುತ ಪ್ರಸಂಗಗಳ ಬಗ್ಗೆ ವರದಿಯಾಗಿಲ್ಲ. ಪ್ರಸ್ತುತ ಘಟನೆ ಡಿಸೆಂಬರ್ 29 ರಂದು ನಡೆದಿದೆ.