ಬಿಗಬಾಸ್ ಸೀಸನ್ -9 ರ ವಿನ್ನರ್ ಹಾಗೂ ರನ್ನರ್ ಅಪ್ ಯಾರು ? ವಿಡಿಯೋ ನೋಡಿ!!

ನಿನ್ನೆ ಬಿಗ್ಬಾಸ್ ಫಿನಾಲೇ ನಡೆಯಿತು. ಕಳೆದ ನೂರು ದಿವಸಗಳಿಂದ ಬಿಗ್ಬಾಸ್ ಆಟ ಶುರುವಾಗಿದೆ. ನಿನ್ನೆಗೆ ಈ ಆಟದ ಅಂತ್ಯ ವಾಯಿತು. ಸುಮಾರು 18 ಸ್ಪರ್ಧಿಗಳು ಮನೆಯಲ್ಲಿ ಎಂಟ್ರಿ ಮಾಡಿ ತಮ್ಮ ಆಟವನ್ನು ಪ್ರದರ್ಶನ ಮಾಡಿದರು. ಈ ಎಲ್ಲ ಸ್ಪರ್ಧಿಗಳಲ್ಲಿ ಒಬ್ಬರೇ ವಿನ್ನರ್ ಆಗೋದು ಎಂಬ ಸಂಗತಿ ನಮಗೆಲ್ಲ ಗೊತ್ತೇ ಇದೆ. ನಿನ್ನೆಗೆ ಸುದೀಪ್ ಅವರು ಬಿಗ್ಬಾಸ್ ಸೀಸನ್ 9 ರ ವಿನ್ನರ್ ಯಾರು ಅಂತ ತಿಳಿದರು

ಈ ವಾರದ ಮೊದಲಿಗೆ ಮನೆಯಲ್ಲಿ 6 ಸ್ಪರ್ಧಿಗಳು ಇದ್ದರು. ಆದರೆ ಬಿಗ್ಬಾಸ್ ನಿಯಮದ ಪ್ರಕಾರ ಫೈನಲ್ಗೆ ಕೇವಲ 5 ಸ್ಪರ್ಧಿಗಳು ಮಾತ್ರ ಹೋಗುತ್ತಾರೆ. ಹೀಗಾಗಿ ಮಂಗಳವಾರ ರಾತ್ರೋ ರಾತ್ರಿ ಎಲಿಮಿನೇಟ್ ಪ್ರಕ್ರಿಯೆ ನಡೆಯಿತು. ಅದರಲ್ಲಿ ಆರ್ಯವರ್ಧನ್ ಗುರೂಜಿ ಯವರು ಎಲಿಮಿನೇಟ್ ಆಗಿ ಹೊರಬಂದರು. ಆಗ ಫೈನಲ್ಗೆ ರೂಪೇಶ್, ರಾಜಣ್ಣ, ರಾಕೇಶ್ , ದೀಪಿಕಾ ಹಾಗೂ ದಿವ್ಯಾ ಎಂಟ್ರಿ ಯಾದರು.

ಫೈನಲ್ ಪ್ರಕ್ರಿಯೆ ಎರಡು ದಿವಸಗಳಲ್ಲಿ ನಡೆಯಿತು. ಅಂದರೆ ಶುಕ್ರವಾರ ಹಾಗೂ ಶನಿವಾರ ಹೀಗೆ ಎರಡು ದಿನಗಳಲ್ಲಿ ನಡೆಯಿತು. ಶುಕ್ರವಾರದ ಸಂಚಿಕೆಯ ಕೊನೆಯಲ್ಲಿ ಒಬ್ಬ ಸ್ಪರ್ಧಿಯನ್ನು ಎಲಿಮಿನೇಟ್ ಮಾಡಲಾಯಿತು ಆ ಪ್ರಕ್ರಿಯೆಯಲ್ಲಿ ಮನೆಯಿಂದ ದಿವ್ಯ ಉರುಡುಗ ಅವರು ಹೊರಬಂದರು . ತದನಂತರ ನಿನ್ನೆ, ಮೊದಲಿಗೆ ರಾಜಣ್ಣ ನಂತರ ದೀಪಿಕಾ ದಾಸ್ ಅವರು ಹೊರಬಂದರು. ಅಲ್ಲಿ ಉಳಿದ ಇಬ್ಬರು ಸ್ಪರ್ಧಿ ರೂಪೇಶ್ ಹಾಗೂ ರಾಕೇಶ್. ಇಬ್ಬರು ಸಹ ತುಂಬಾ ಉತ್ತಮವಾದ ಆಟವನ್ನು ಆಡಿದ್ದಾರೆ. ಇಬ್ಬರು ಅಷ್ಟೇ ಎಫರ್ಟ್ ಹಾಕಿ ಪ್ರತಿಯೊಂದು ಟಾಸ್ಕ್ ಕಂಪ್ಲೀಟ್ ಮಾಡಿದ್ದಾರೆ. ಹೀಗಾಗಿ ಅವರಲ್ಲಿ ಗೆಲ್ಲೋದು ಯಾರು ಎಂಬುದು ಎಲ್ಲರಿಗೆ ಒಂದು ದೊಡ್ಡ ಪ್ರಶ್ನೆಯಾಗಿತ್ತು.

ರೂಪೇಶ್ ಶೆಟ್ಟಿ ಹಾಗೂ ರಾಕೇಶ್ ಅಡಿಗ ಅವರನ್ನು ಸುದೀಪ್ ಮನೆಯಿಂದ ಕರೆದುಕೊಂಡು ಬಂದು ಸ್ಟೇಜ್ ಮೇಲೆ ನಿಲ್ಲಿಸಿ ಸುದೀಪ್ ಅವರು ನಿಮ್ಮಿಬ್ಬರಲ್ಲಿ ಬಿಗ್ಬಾಸ್ ಯಾರು ಗೆಲ್ಲಬೇಕು ‘ ಎಂಬ ಪ್ರಶ್ನೆ ಕೇಳಿದರು. ಆಗ ಇಬ್ಬರು ಸಹಿತ ಒಬ್ಬರ ಹೆಸರು ಇನ್ನೊಬ್ಬರು ಹೀಗೆ ಹೇಳಿದರು. ಆದರೆ ಇಡೀ ಸೀಸನ್ ಕುರಿತು ವಿಚಾರ ಮಾಡಲಾಗಿ ಹಾಗೂ ವೋಟ್ ಗಳ ಮೇರೆಗೆ ರೂಪೇಶ್ ಶೆಟ್ಟಿ ಯವರನ್ನು ಬಿಗ್ಬಾಸ್ ಸೀಸನ್ 9 ವಿನ್ನರ್ ಎಂದು ಘೋಷಣೆ ಮಾಡಲಾಯಿತು. ತದನಂತರ ಅಲ್ಲಿ ರೂಪೇಶ್ ಪಟ್ಟ ಖುಷಿ ಹೇಳತೀರದು. ರಾಕೇಶ್ ಅಡಿಗ ಅವರು ರನ್ನರ್ ಅಪ್ ಆದರು.

ವೀಡಿಯೋ ನೋಡಿ..