Video; ಬಸ್ಸು, ರೈಲಲ್ಲಿ ನೋಡಿ ನೋಡಿ ತುಂಬಾ ಬೋರ್ ಆಗಿತ್ತು; ಈಗ ನೇರ ವಿಮಾನದಲ್ಲಿ! ಹೊಚ್ಚ ಹೊಸ ಎಡಿಷನ್ ನೊಂದಿಗೆ.

ಜಗಳಗಳು ಇಲ್ಲಿಯೇ ನಡೆಯಬೇಕು, ಹೀಗೆಯೇ ನಡೆಯಬೇಕು, ಇದೇ ರೀತಿಯಲ್ಲಿ ನಡೆಯಬೇಕು, ಇಷ್ಟೇ ನಡೆಯಬೇಕು ಎಂದು ಪೂರ್ವನಿಯೋಜಿತವಾಗಿರುವದಿಲ್ಲ. ವ್ಯಕ್ತಿ ಎಲ್ಲಿದ್ದರೂ ಪ್ರಸಂಗಗಳು ಹಾಗೆ ಒದಗಿ ಬಂದರೆ ಸಾಕು ವ್ಯಕ್ತಿ ತಾನೇನು? ಎಲ್ಲಿದ್ದೇನೆ? ಎಂಬುದರ ಅರಿವು ಆತನಿಗಿರುವದಿಲ್ಲ. ಜಗಳಕ್ಕೆ ಗುದ್ದಾಟಕ್ಕೆ ನಿಂತು ಬಿಡುತ್ತಾನೆ. ಸದ್ಯ ಈ ವಿಡಿಯೋದಲ್ಲಿ ನೋಡುವ ದೃಶ್ಯ ಒಂದು ತುಂಬಾ ಹೊಸದಾಗಿದೆ. ಇದೊಂದು ನೋಡುವದು ಬಾಕಿ ಉಳಿದಿತ್ತು. ಬನ್ನಿ ನೋಡೋಣ…

ಈ ವಿಡಿಯೋದಲ್ಲಿ ವಿಮಾನದಲ್ಲಿಯ ದೃಶ್ಯ ಕಂಡು ಬರುತ್ತಿದೆ. (ರೈಲಿನ ಸಾಮಾನ್ಯ ಬೋಗಿ ಎಂದು ತಿಳಿಯಬೇಡಿ) ಯಾತ್ರಿಕರು ತಮ್ಮ ತಮ್ಮ ಚೇರ್ ನಲ್ಲಿ ಕುಳಿತಿದ್ದಾರೆ. ಆದರೆ ಮಧ್ಯದಲ್ಲಿ ಮಾತ್ರ ಇಬ್ಬರು ವ್ಯಕ್ತಿಗಳ ಮಧ್ಯೆ ವಾಗ್ವಾದ ನಡೆಯುತ್ತಿರುವುದು ಕಂಡು ಬರುತ್ತಿದೆ. ಅಲ್ಲಿಯೇ ಏರ್ ಹೋಸ್ಟೆಸ್ ಒಬ್ಬಳು ಪ್ರಕರಣವನ್ನು ಅಲ್ಲಿಯೇ ಮುಗುಚಿ ಹಾಕಲು ಪ್ರಯತ್ನಿಸುತ್ತಿದ್ದಾಳೆ. ಆದರೆ ಇಬ್ಬರೂ ವ್ಯಕ್ತಿಗಳ ಮಧ್ಯೆ ನಡೆದಿರುವ ವಾದ ಶಮನವಾಗಲಿಕ್ಕೆ ಸಾಧ್ಯವೇ ಇಲ್ಲ ಎನ್ನುವಂತಿದೆ ಪರಿಸ್ಥಿತಿ. ಈ ಸಂದರ್ಭದಲ್ಲಿ ದೃಶ್ಯವನ್ನು ಶೂಟ್ ಮಾಡಿಕೊಳ್ಳುವವ ಎಲ್ಲ ಕಡೆಗೆ ಕ್ಯಾಮೆರಾವನ್ನು ತಿರುಗಿಸುತ್ತಾನೆ. ಅಷ್ಟರಲ್ಲಿಯೇ ಇಬ್ಬರೂ ವ್ಯಕ್ತಿಗಳ ಜಗಳ ತಾರಕಕ್ಕೆ ಏರುತ್ತದೆ. ಪ್ರಸಂಗ ಕೈ ಕೈಗೆ ಬರುತ್ತದೆ. ಇಂಥ ದೃಶ್ಯ ಇಲ್ಲಿಯವರೆಗೆ ಬಸ್ಸು ಮತ್ತು ಟ್ರೈನ್ ನಲ್ಲಿ ನೋಡಿದ್ದೆವು. ಆದರೀಗ ವಿಮಾನದಲ್ಲಿಯೂ ಇಂಥ ಜನ ಇರುತ್ತಾರೆ ಎಂಬುದು ತಿಳಿಯುತ್ತದೆ.

ನೋಡಿ ಈ ವಿಡಿಯೋ…

ಪ್ರಸ್ತುತ ಈ ವಿಡಿಯೋ ಇಂಟರ್ನೆಟ್ ನಲ್ಲಿ ತುಂಬಾ ವೇಗವಾಗಿ ವೈರಲ್ ಆಗುವುದರ ಜೊತೆಗೆ ಈ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಇಲ್ಲಿಯ ಜಗಳ ನೋಡಿ ನೆಟ್ಟಿಗರು ತುಂಬಾ ತಮಾಷೆಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.