ಮೈ ಕೊರೆಯುವ ಚಳಿಯಲ್ಲಿ ತಿರುಗಾಡುವ ಜಿಂಕೆಯ ಮುಖವೇ ಹೆಪ್ಪುಗಟ್ಟಿದ Video ವೈರಲ್! ಕೊನೆಗೆ ಜೀವ ಉಳಿಯಿತು ಹೀಗೆ…
ಅಮೆರಿಕ ಮತ್ತು ಕೆನಡಾ ಸದ್ಯ ಹಿಮದಿಂದ ಕೂಡಿದ ಚಂಡಮಾರುತದಿಂದ ತತ್ತರಿಸಿವೆ. ಇದಕ್ಕೆ ಸಂಬಂಧಿಸಿದಂತೆ ದಿನನಿತ್ಯ ಅನೇಕ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಕಾರಣದಿಂದಾಗಿ ಮನುಷ್ಯನ ಜೊತೆಗೆ ಅನೇಕ ಜೀವಿಗಳ ಮೇಲೆ ಈ ಹಿಮ ಚಂಡಮಾರುತ ಪ್ರತಿಕೂಲವಾದ ಪರಿಣಾಮ ಬೀರಿದೆ. ಸದ್ಯ ಜಿಂಕೆಯ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಏನಿದೆ ಬನ್ನಿ ನೋಡೋಣ.
ಪ್ರಸ್ತುತ ವಿಡಿಯೋದಲ್ಲಿ ಕಂಡು ಬರುವ ಜಿಂಕೆಯ ಮುಖ ತೀವ್ರ ಚಳಿಯಿಂದಾಗಿ ಹೆಪ್ಪುಗಟ್ಟಿ ಹೋಗಿದೆ. ಈ ಪ್ರಾಣಿಯ ಕಣ್ಣು ಮತ್ತು ಕಿವಿಗಳು ಹಿಮದಲ್ಲಿ ಹೆಪ್ಪುಗಟ್ಟಿ ಕಲ್ಲಿನಂತಾಗಿದೆ. ಈ ದೃಶ್ಯ ನೋಡಿದಾಗ ಪ್ರಸ್ತುತ ಚಿಗುರೆ ಎಷ್ಟೊಂದು ನೋವು ಅನುಭವಿಸುತ್ತಿರಬಹುದು ಎಂಬ ಪ್ರಶ್ನೆ ಮೂಡುತ್ತದೆ. ತನ್ನ ಆಹಾರಕ್ಕಾಗಿ ಈ ಜಿಂಕೆ ಹಿಮದಲ್ಲಿ ಆಹಾರವನ್ನು ಅಗೆಯುವಾಗ ಇದರ ಮುಖ ಹಿಮದಲ್ಲಿ ಹೆಪ್ಪುಗಟ್ಟಿರಬೇಕೆಂದು ಅಂದಾಜಿಸಲಾಗಿದೆ.
ತಾಪತ್ರಯದಲ್ಲಿ ಸಿಲುಕಿದ ಈ ಜಿಂಕೆಯನ್ನು ಹೇಗೆ ಉಳಿಸಲಾಯಿತು ನೋಡಿ ವಿಡಿಯೋದಲ್ಲಿ…

ವಿಡಿಯೋದಲ್ಲಿ ಕಂಡು ಬರುವ ಹಾಗೆ ಇಬ್ಬರು ಪರ್ವತಾರೋಹಿಗಳು ಜಿಂಕೆಯ ಈ ದೃಶ್ಯವನ್ನು ನೋಡಿ ಅದಕ್ಕೆ ಹೇಗಾದರೂ ಮಾಡಿ ಸಹಾಯ ಮಾಡಬೇಕೆಂದು ಯೋಚಿಸಿದ್ದಾರೆ. ಮೊದಲಿಗೆ ಜಿಂಕೆಯು ಇವರಿಬ್ಬರನ್ನು ನೋಡಿ ಹೆದರಿ ಓಡಿ ಹೋಗಿದೆ. ಅಷ್ಟಾದರೂ ಇಬ್ಬರೂ ಪರ್ವತಾರೋಹಿಗಳು ಆ ಜಿಂಕೆಯನ್ನು ಹಿಡಿದು ನಂತರ ಸಮಾಧಾನದಿಂದ ಮುಖಕ್ಕೆ ಹೆಪ್ಪುಗಟ್ಟಿದ ಹಿಮದಿಂದ ಜಿಂಕೆಯನ್ನು ಬೇರ್ಪಡಿಸಿದ್ದಾರೆ.
ವಿಡಿಯೋ ನೋಡಿ
This extreme cold weather across many parts of the USA & Canada has been extremely harsh for people & wildlife. This crazy footage shows two walkers who spotted a deer with its mouth,eyes & ears completely frozen over. Brilliant effort to help! 👏🏼 Stay safe everyone pic.twitter.com/YUPoEQuTer
— HOW THINGS WORK (@HowThingsWork_) December 28, 2022
ನೆಟ್ಟಿಗರು ಜಿಂಕೆ ಜೀವ ಉಳಿಸಿದ ಇಬ್ಬರು ಪರ್ವತಾರೋಹಿಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಧನ್ಯವಾದಗಳನ್ನು ನೀಡಿದ್ದಾರೆ. ಈ ಪರಿಸ್ಥಿತಿಯಲ್ಲಿ ಸಾಕಷ್ಟು ಅನಿಮಲ್ ಲವರ್ಸ್ ಗಳು ಅಲ್ಲಿ ಪ್ರಾಣಿಗಳ ಸಹಾಯ ಮಾಡಲು ಟೊಂಕಕಟ್ಟಿ ನಿಂತಿದ್ದಾರೆ.