Video; ಇಬ್ಬರ ಜಗಳದಲ್ಲಿ ಮೂರನೆಯವನಿಗೆ ಲಾಭವಾದರೆ, ಇಲ್ಲಿ ಮಾತ್ರ ಮೂವರ ಜಗಳದಲ್ಲಿ 30 ಜನರಿಗೆ ಲಾಭ!

ಕೆಲವೊಮ್ಮೆ ಚಿಕ್ಕಪುಟ್ಟ ವಿಷಯಗಳಿಗೂ ಜಗಳಗಳು ದೊಡ್ಡ ರೂಪವನ್ನು ತಾಳುತ್ತವೆ. ನಂತರ ಅವು ಜಗಳಾಡುವವರಿಗೆ ಗೊತ್ತಿಲ್ಲದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ. ಅದರಲ್ಲೂ ಇಂದಿನ ಯುಗದಲ್ಲಿ ಎಲ್ಲ ಕಡೆಗೂ ಹತ್ತಾರು ಕಣ್ಣುಗಳು ಪ್ರತಿಯೊಬ್ಬರನ್ನು ವೀಕ್ಷಿಸುತ್ತಿರುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಸಾರ್ವಜನಿಕ ವಲಯದಲ್ಲಿ ತುಂಬಾ ಜವಾಬ್ದಾರಿಯಿಂದ ವರ್ತಿಸಬೇಕಾಗಿದೆ. ಇಲ್ಲವಾದರೆ ಸಾಮಾಜಿಕ ಜಾಲತಾಣಗಳಲ್ಲಿ ನಗೆಪಾಟಲಿಗೆ ಈಡಾಗುತ್ತೇವೆ. ಸದ್ಯ ಇದೇ ರೀತಿಯ ವಿಡಿಯೋ ಒಂದು ಇಲ್ಲಿ ನೋಡಬಹುದು.

ಈ ವಿಡಿಯೋದಲ್ಲಿಯ ಭಾಷೆ ಅರ್ಥವಾಗುತ್ತಿಲ್ಲ. ಆದರೆ ಇಲ್ಲಿ ಕಾಣುವ ಸಂಪೂರ್ಣ ದೃಶ್ಯ ಮತ್ತು ಭಾವ ಮಾತ್ರ ಚೆನ್ನಾಗಿ ಅರ್ಥವಾಗುತ್ತದೆ. ಪ್ರಸ್ತುತ ದೃಶ್ಯದಲ್ಲಿ ಮಹಿಳೆಯೊಬ್ಬಳು ಒಂದು ಕಪಲ್ ಜೊತೆಗೆ ವಾಗ್ವಾದ ಮಾಡುತ್ತಿದ್ದಾಳೆ. ಈ ವಾದ ವಿವಾದ ಕೊನೆಗೆ ಜಗಳದಲ್ಲಿ ರೂಪಾಂತರವಾಗುತ್ತದೆ. ಮಹಿಳೆಯೊಬ್ಬಳು ಜಗಳಾಡುತ್ತಾ ಕೊನೆಗೆ ಕಾರಿನಲ್ಲಿ ಕುಳಿತುಕೊಳ್ಳಲು ಹೋದಾಗ ಕೆಳಗೆ ನಿಂತ ಮಹಿಳೆ ಆಕೆಯ ಮೇಲೆ ಏರಿ ಹೋಗುತ್ತಾಳೆ. ಆಗ ಕಾರಿನಲ್ಲಿಯ ಮಹಿಳೆ ಕೆಳಗೆ ನಿಂತ ಮಹಿಳೆಗೆ ಒದೆ ನೀಡುತ್ತಾಳೆ. ಇದನ್ನು ಸಹಿಸದ ಕೆಳಗೆ ನಿಂತ ಮಹಿಳೆ ಪ್ರತಿಯಾಗಿ ಒದೆ ನೀಡಲು ಮುಂದಾಗುತ್ತಾಳೆ. ಪುರುಷ ಮಾತ್ರ ಕೆಳಗಿನ ಮಹಿಳೆಯ ಜಡೆ ಹಿಡಿದು ಕೆಳಗೆ ನೂಕುತ್ತಾನೆ. ಜಗಳ ಸ್ವಲ್ಪ ಹೆಚ್ಚಾಗಿ ಕಾರಿನಲ್ಲಿ ಕುಳಿತವಳು ಮತ್ತೆ ಕೆಳಗೆ ಇಳಿದು ಆಕೆಯ ಜೊತೆ ಹೋರಾಡಲು ನಿಲ್ಲುತ್ತಾಳೆ. ಈ ಸಂದರ್ಭದಲ್ಲಿ ಪ್ಯಾಂಟ್ ತೊಟ್ಟ ಮಹಿಳೆಯ ಪರ್ಸ್ ಕೆಳಗೆ ಬೀಳುತ್ತದೆ. ಇದನ್ನು ನೋಡಿದ ಬೇರೆ ಮಹಿಳೆಯು ಹಠಾತ್ ಆ ಪರ್ಸ್ ತೆಗೆದು ಜೋರಾಗಿ ರೋಡಿನ ಕಡೆಗೆ ಬಿಸಾಕುತ್ತಾಳೆ. ಈ ಪರ್ಸನ್ನು ಬಿಸಾಕುವ ಸಂದರ್ಭದಲ್ಲಿ ಪರ್ಸ್ನಲ್ಲಿದ್ದ ನೋಟುಗಳು ಎಲ್ಲಿ ಬೇಕಲ್ಲಿ ಗಾಳಿಗೆ ಹಾರಿ ಚೆಲ್ಲಾಪಿಲ್ಲಿಯಾಗಿ ರಸ್ತೆ ಮೇಲೆ ಬೀಳುತ್ತವೆ. ನೋಟುಗಳು ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಬೀಳುವುದಷ್ಟೇ ತಡ ಕ್ಷಣಾರ್ಧದಲ್ಲಿ ಸುಮಾರು 20 ರಿಂದ 30 ಜನ ಒಮ್ಮೆಲೇ ಹಣ ದೋಚಿಕೊಳ್ಳಲು ಚಂಗನೇ ಜಿಗಿದು ಬರುತ್ತಾರೆ.

ನೋಡಿ ಈ ತಮಾಶೆಗೆ ಈಡಾದ ವಿಡಿಯೋ…

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಅಲ್ಮಾಸಾಫಿರ್ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋ 1.6 ಮಿಲಿಯನ್ ವೀಕ್ಷಣೆಯನ್ನು ಪಡೆದಿದ್ದು ಸಾವಿರಾರು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಇಬ್ಬರ ಜಗಳದಲ್ಲಿ ಮೂರನೇಯವನಿಗೆ ಲಾಭವಾಗಿದ್ದು ಕೇಳಿದ್ದೇವೆ, ಆದರಿಲ್ಲಿ ಮೂವರ ಜಗಳದಲ್ಲಿ 30 ಜನರಿಗೆ ಲಾಭವಾಯಿತಲ್ಲ, ಅಲ್ವಾ?