Video; ಈ ಕುಡುಕನ ಅದೃಷ್ಟ ನೋಡಿ ಹೇಗಿದೆ? ಯಾವುದು, ಯಾರ ಕೈಯಲ್ಲಿಯೂ ಇಲ್ಲ; ಎಲ್ಲವೂ ಸಮಯ ಬಂದಾಗ ಮಾತ್ರ…
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಕೆಲವು ವಿಡಿಯೋಗಳು ನೆಟ್ಟಿಗನಿಗೆ ಒಮ್ಮೊಮ್ಮೆ ಬೆಚ್ಚಿಬಿಳಿಸುತ್ತದೆ. ಹುಟ್ಟು ಸಾವು ಯಾರ ಕೈಯಲ್ಲಿಯೂ ಇಲ್ಲ. ಅದು ಆ ಮೇಲಿನವನು ಆಶಿಸಿದಾಗ ಮಾತ್ರ ಸಾಧ್ಯ. ಇದನ್ನೇ ಹೇಳುವ ಒಂದು ಅದ್ಭುತ ವಿಡಿಯೋ ಈ ಸಂಚಿಕೆಯಲ್ಲಿ ನೀವು ನೋಡಬಹುದು.
ಪ್ರಸ್ತುತ ವಿಡಿಯೋದಲ್ಲಿ ಒಬ್ಬಳು ಮಹಿಳೆ ರೈಲ್ವೆ ಟ್ರ್ಯಾಕ್ ಕ್ರಾಸ್ ಮಾಡಿ ಬರುತ್ತಿದ್ದಾಳೆ. ಆತನ ಹಿಂದೆಯೇ ಎಣ್ಣೆ ಹೊಡೆದ ಕುಡುಕನೊಬ್ಬ ಬ್ಯಾಲೆನ್ಸ್ ಆಗದೆ ತೂರಾಡುತ್ತಾ ಬರುತ್ತಿದ್ದಾನೆ. ಆತ ಬಂದವನೇ ರೈಲ್ವೆ ಹಳಿಯ ಮೇಲೆ ಬಿದ್ದುಬಿಡುತ್ತಾನೆ. ಇದನ್ನು ಮುಂದಿರುವ ಮಹಿಳೆಯರು ನೋಡುತ್ತಾಳೆ. ಅದೇ ಪರಿಸ್ಥಿತಿಯಲ್ಲಿ ಕುಡುಕ ಹೇಗಾದರೂ ಮಾಡಿ ಎದ್ದು ನಿಲ್ಲಲು ಪ್ರಯತ್ನಿಸುತ್ತಾನೆ. ಈ ಎರಡನೇ ಪ್ರಯತ್ನದಲ್ಲಿಯೂ ಆತ ಯಶಸ್ಸು ಕಾಣುವುದಿಲ್ಲ. ಇದೇ ಸಂದರ್ಭದಲ್ಲಿ ವೇಗದ ರೈಲು ಒಂದು ಹಠಾತ್ತನೆ ಅದೇ ರೈಲ್ವೆ ಟ್ರ್ಯಾಕ್ ಮೇಲೆ ಬರುತ್ತದೆ. ಈ ಎಲ್ಲ ದೃಶ್ಯವನ್ನು ಅಲ್ಲಿ ನಿಂತ ಮಹಿಳೆ ನೋಡುತ್ತಿರುತ್ತಾಳೆ. ರೈಲು ಬರುವುದನ್ನು ನೋಡಿದ ನಂತರ ಮಹಿಳೆ ಅಬ್ಬಾ ಎಂದು ಗಾಬರಿಯಾಗಿ ಬಾಯಿಗೆ ಕೈ ಹಚ್ಚಿಕೊಳ್ಳುತ್ತಾಳೆ. ಇನ್ನೇನು ಆತನ ಕಥೆ ಮುಗಿದೇ ಹೋಗುತ್ತದೆ ಎನ್ನುವಷ್ಟರಲ್ಲಿ ಕುಡುಕ ಮಾತ್ರ ಸೇಫ್ ಆಗಿ ಉಳಿಯುತ್ತಾನೆ. ಒಂದೇ ಒಂದು ಕೂದಲೇಳೆಗೂ ಸಹ ಧಕ್ಕೆಯಾಗುವುದಿಲ್ಲ. ನಶೆಯಲ್ಲಿ ಆತ ಬೀಳಲು ಸರಿಯಾಗಿ ಅದೇ ಸಮಯಕ್ಕೆ ಶರವೇಗದಲ್ಲಿ ಟ್ರೈನ್ ಹಾಯ್ದು ಹೋಗುತ್ತದೆ. ಈತ ಮಾತ್ರ ಅದರ ಕೆಳಗಡೆ ಹಾಗೆಯೇ ಮಲಗಿಕೊಳ್ಳುತ್ತಾನೆ. ಆತನ ಮಹಿಮೆಯಿಂದ ಟ್ರೈನ್ ಪಾಸಾದ ನಂತರ ಮತ್ತೆ ಮೊದಲಿನ ಹಾಗೆ ತೂರಾಡುತ್ತಾ ಟ್ರೈನ್ ಟ್ರ್ಯಾಕ್ ಕ್ರಾಸ್ ಮಾಡುತ್ತಾನೆ.
ನೋಡಿ ಈ ವಿಡಿಯೋ…
View this post on Instagram
ಪ್ರಸ್ತುತ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಹಾದಸಾ ಹೆಸರಿನ ಕೌಂಟ್ ನಿಂದ ಶೇರ್ ಮಾಡಲಾಗಿದೆ.