Video; ಜಾವೆಲಿನ್ ಥ್ರೋಅರ್ ನೀರಜ್ ಚೋಪ್ರಾ ಅವರ ಸ್ಪ್ರಿಂಟ್ ನೋಡಿ ಆಶ್ಚರ್ಯ ವ್ಯಕ್ತಪಡಿಸಿದ ಜಗತ್ತಿನ ಮಹಾನ್ ಓಟಗಾರ!

ಟೋಕಿಯೋ ಒಲಂಪಿಕ್ ನಲ್ಲಿ ಜಾವೆಲಿನ್ (ಭಲ್ಲೆ) ಎಸೆದು ಸುವರ್ಣ ಪದಕವನ್ನು ಗೆದ್ದು ಜಗತ್ತಿನ ತುಂಬಾ ಭಾರತಕ್ಕೆ ಪ್ರಶಂಸೆಯನ್ನು ತಂದ ನೀರಜ್ ಚೋಪ್ರಾ ಯಾರಿಗೆ ಗೊತ್ತಿಲ್ಲ ಹೇಳಿ. ಜಗತ್ತಿನ ತುಂಬಾ ನೀರಜ್ ಅವರು ಒಂದೇ ರಾತ್ರಿಯಲ್ಲಿ ಪ್ರಸಿದ್ಧಿಯನ್ನು ಪಡೆದರು. ನೀರಜ್ ಚೋಪ್ರಾ ಯಾವತ್ತೂ ತಮ್ಮ ಫಿಟ್ನೆಸ್ ಕಡೆಗೆ ತುಂಬಾ ಗಮನವನ್ನು ನೀಡುತ್ತಾರೆ. ಅವರು ತಮ್ಮ ಫಿಟ್ನೆಸ್ ವಿಡಿಯೋಗಳನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಸದ್ಯ ಅವರ ಫ್ಯಾನ್ ಲಿಸ್ಟ್ ನಲ್ಲಿ ಒಂದು ಪ್ರಸಿದ್ಧ ಹೆಸರು ಶಾಮೀಲಾಗಿದೆ.

ಬುಧವಾರದಂದು ಅಮೆರಿಕದ ಈ ಓಟಗಾರ ಮೈಕಲ್ ಜಾನ್ಸನ್ (ಒಲಂಪಿಕ್ ನಲ್ಲಿ ನಾಲ್ಕು ಸುವರ್ಣಗಳನ್ನು ಗೆದ್ದಿದ್ದಾರೆ) ಹೇಳುತ್ತಾರೆ, ಭಲ್ಲೆಯನ್ನು ಎಸೆಯುವ ಈ ಆಟಗಾರ ನಿಜಕ್ಕೂ ಒಬ್ಬ ಅದ್ಭುತ ಓಟಗಾರನೂ ಆಗಿದ್ದಾನೆ. ಆತ ಜಂಪ್ ಮತ್ತು ಸ್ಪ್ರಿಂಟ್ ಮಾಡುತ್ತಾನೆ ಎಂದಿದ್ದಾರೆ.

ಜಾನ್ಸನ್ ಇಲ್ಲಿಯವರೆಗೆ ಒಟ್ಟು ಎಂಟು ವಿಶ್ವ ಚಾಂಪಿಯನ್ ಸುವರ್ಣ ಪದಕಗಳನ್ನು ಗೆದ್ದಿದ್ದಾರೆ. 200 ಮೀಟರ್ ಮತ್ತು 400 ಮೀಟರ್ ಗಾಗಿ ಒಲಂಪಿಕ್ ಹಾಗೂ ವಿಶ್ವದಾಖಲೆಗಳನ್ನು ಮಾಡಿದ್ದಾರೆ. ಜಾನ್ಸನ್ ನೀರಜ್ ಚೋಪ್ರಾ ಅವರ ವಾರ್ಮ್ ಅಪ್ ವಿಡಿಯೋ ನೋಡಿ ಆಶ್ಚರ್ಯವನ್ನು ವ್ಯಕ್ತ ಮಾಡಿದ್ದಾರೆ.

ಪ್ರಸ್ತುತ ವಿಡಿಯೋದಲ್ಲಿ ನೀರಜ್ ಚೋಪ್ರಾ ವಾರ್ಮ್ ಅಪ್ ಅಭ್ಯಾಸದಲ್ಲಿ ತೊಡಗಿರುವುದನ್ನು ನೋಡಬಹುದು. ಇವರು ತುಂಬಾ ಫಿಟ್ ಕಾಣಿಸುವುದರ ಜೊತೆಗೆ ಒಬ್ಬ ಓಟಗಾರನ ಹಾಗೆ ತರಬೇತಿ ಪಡೆಯುತ್ತಾರೆ. ಒಬ್ಬ ಭಲ್ಲೆ ಎಸೆಯುವವನ ಗಮನ ಶಕ್ತಿಯ ಮೇಲೆ ಇದೆ, ಅದರ ಜೊತೆಗೆ ಸ್ಪ್ರಿಂಟರ್ ಮತ್ತು ಜಂಪರ್ ಎರಡರ ಸಂಯೋಗದೊಂದಿಗೆ ಫ್ಲೆಕ್ಸಿಬಲಿಟಿ ಹಾಗೂ ವೇಗವನ್ನು ಪ್ರಾಪ್ತ ಮಾಡಿಕೊಳ್ಳುತ್ತಿದ್ದಾರೆ, ಇದು ನಿಜಕ್ಕೂ ಅದ್ಭುತ ಎಂದಿದ್ದಾರೆ.

ವೀಡಿಯೋ ನೋಡಿ

25 ವರ್ಷದ ನೀರಜ್ ಚೋಪ್ರಾ ಅವರು 2022 ರಲ್ಲಿ ಅದ್ಭುತ ದಾಖಲೆಯನ್ನು ಮಾಡಿದರು. ಈ ವರ್ಷ ಒರೆಗಾನ್ ನ ವಿಶ್ವಶಾಂಪಿಯನ್ ಶಿಪ್ ನಲ್ಲಿ ರಜತವನ್ನು ತಮ್ಮ ಹೆಸರಿಗೆ ಮಾಡಿಕೊಂಡರೆ ಸಪ್ಟೆಂಬರ್ ನಲ್ಲಿ ಜುರಿಕ್ ನಲ್ಲಿಯ ಡೈಮಂಡ್ ಲೀಗ್ ಪಂದ್ಯದಲ್ಲಿ ಮೊದಲ ಸ್ಥಾನವನ್ನು ಪಡೆದರು.