ಆನೆಯ ಮುಂದೆ ನಿಂತು ಡಾನ್ಸ್ ಮಾಡುವ ಯುವತಿಯ ವಿಡಿಯೋ ಶೇರ್ ಮಾಡಿದರು ಆನಂದ್ ಮಹೀಂದ್ರ; ಆನೆ ಏನು ಮಾಡಿದೆ ನೋಡಿ…

ಮಹಿಂದ್ರ ಗ್ರೂಪಿನ ಚೇರ್ಮನ್ ಆನಂದ್ ಮಹೀಂದ್ರ ಯಾವತ್ತು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ. ಅವರು ಶೇರ್ ಮಾಡಿದ ಒಂದು ವಿಡಿಯೋ ಕ್ಲಿಪ್ ಇಲ್ಲಿಯವರೆಗೆ ಮಿಲಿಯನ್ಗಟ್ಟಲೆ ವೀಕ್ಷಣೆಯನ್ನು ಪಡೆದಿದೆ. ಅಂಥ ಯಾವ ವಿಡಿಯೋವನ್ನು ಅವರು ಶೇರ್ ಮಾಡಿದ್ದಾರೆ ಬನ್ನಿ ನೋಡೋಣ.

ಸೋಶಿಯಲ್ ಮೀಡಿಯಾದಲ್ಲಿ ಆನಂದ್ ಸರ್ ಅವರು ಶೇರ್ ಮಾಡುವ ಪ್ರತಿಯೊಂದು ಪೋಸ್ಟ್ ಗಳಿಗೆ ಜನರು ತುಂಬಾ ಸಪೋರ್ಟ್ ಮಾಡುತ್ತಾರೆ. ಈಗ ಶೇರ್ ಮಾಡಿದ ವಿಡಿಯೋ ನಮ್ಮದೇ ರಾಜ್ಯದ ಪ್ರಸಿದ್ಧ ದೇವಾಲಯ ಕಟೀಲು ದುರ್ಗಾಪರಮೇಶ್ವರಿ ಮಂದಿರದಲ್ಲಿಯದಿದೆ. ಇಲ್ಲಿ ಯುವತಿಯೊಬ್ಬಳು ಆನೆಯ ಮುಂದೆ ನಿಂತು ಭರತನಾಟ್ಯವನ್ನು ಪ್ರಸ್ತುತಪಡಿಸುತ್ತಿದ್ದಾಳೆ. ಈ ನರ್ತಕಿ ಆನೆಯ ಮುಂದೆ ನಿಂತು ಪರಂಪರಾಗತವಾದ ನೃತ್ಯವನ್ನು ಸಾದರಿಕರಿಸುತ್ತಿದ್ದಾಳೆ. ಈ ನೃತ್ಯ ಮಾಡುವಾಗ ಯುವತಿ ಎರಡು ಕೈಗಳನ್ನು ಜೋಡಿಸಿ ಆನೆಗೆ ನಮಸ್ಕರಿಸಿದಾಗ ಆನೆ ತಕ್ಷಣ ತನ್ನ ಸೊಂಡಿಲನ್ನು ಎತ್ತಿ ಯುವತಿಗೆ ಆಶೀರ್ವದಿಸುತ್ತದೆ. ಈ ದೃಶ್ಯವನ್ನು ನೋಡಿ ಆನಂದ್ ಮಹೀಂದ್ರ ಅವರು ಅಮೇಜಿಂಗ್ ಎಂದಿದ್ದಾರೆ.

ನೋಡಿ ಈ ವಿಡಿಯೋ…

ಆನಂದ್ ಮಹೀಂದ್ರ ಅವರು ಈ ವಿಡಿಯೋವನ್ನು ಡಿಸೆಂಬರ್ 31 ರಂದು ಟ್ವಿಟರ್ ನಲ್ಲಿ ತಮ್ಮ ಅಕೌಂಟ್ ನಿಂದ ಶೇರ್ ಮಾಡಿದ್ದಾರೆ. ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ 1.1 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ. ಹಾಗೂ 30,000 ಕ್ಕೂ ಹೆಚ್ಚು ಲೈಕ್ ಗಳನ್ನು ಪಡೆದಿದೆ.