ಬ್ರೇಕ್ ಫೇಲ್; ಬೆಟ್ಟದ ಕೊರಕಲಿನಿಂದ ಧುಮುಕುತ್ತ ಬಂದು ನೆಲಕ್ಕೆ ಅಪ್ಪಳಿಸಿ ಶರದಂತೆ ಚಿಮ್ಮಿ ಮತ್ತೆ ಸಾವಕಾಶವಾಗಿ ಹರಿದ ಮಾನವ ಫಾಲ್ಸ್ ನೋಡಿ.

ಸೋಶಿಯಲ್ ಮೀಡಿಯಾದಲ್ಲಿ ಅದ್ಭುತ ಕಂಟೆಂಟ್ ಗಳನ್ನು ಶೇರ್ ಮಾಡುವ ನೆಟ್ಟಿಗರಿಗೆ ಕೆಲವೊಮ್ಮೆ ಧನ್ಯವಾದವನ್ನು ನೀಡಲೇಬೇಕು. ಕಾರಣ ನಾವು ಇಂಥ ಅದ್ಭುತವಾದ ದೃಶ್ಯಗಳನ್ನು ನೋಡುವುದರಿಂದ ವಂಚಿತರಾಗುತ್ತಿದ್ದೇವೆನೋ ಎನಿಸುತ್ತದೆ. ಸದ್ಯದ ವಿಡಿಯೋ ಒಂದು ನಿಮಗಾಗಿ ತಂದಿದ್ದೇವೆ. ಈ ವಿಡಿಯೋ ನೋಡಿದ ನಂತರ ಅಬ್ಬಾ ಎಂದು ತಲೆಗೆ ಕೈ ಹಚ್ಚಿಕೊಳ್ಳುತ್ತೀರಿ ನಿಜ.

ಈ ವಿಡಿಯೋದಲ್ಲಿ ಧಡೂತಿ ಕಾಯದ ವ್ಯಕ್ತಿಯೊಬ್ಬ ಬೆಟ್ಟದ ಮೇಲಿಂದ ಇಳಿದು ಬರುತ್ತಿದ್ದಾನೆ. ಇಳಿದು ಬರುವಾಗ ಆತನ ಬ್ಯಾಲೆನ್ಸ್ ತಪ್ಪಿದ್ದೇ ತಡ ರೋಚಕ ದೃಶ್ಯಕ್ಕೆ ಎಡೆ ಮಾಡಿಕೊಡುತ್ತದೆ. ವ್ಯಕ್ತಿಯು ಭಾರವಾಗಿರುವ ಕಾರಣ ಬೆಟ್ಟ ಇಳಿಯುವಾಗ ಆತನ ಬ್ಯಾಲೆನ್ಸ್ ತಪ್ಪುತ್ತದೆ. ಹೀಗಾಗಿ ಆತ ಮೇಲಿನಿಂದಲೇ ವೇಗದಿಂದ ಬರಲು ಶುರು ಮಾಡುತ್ತಾನೆ. ಮಧ್ಯದಲ್ಲಿ ಈ ಗಾಡಿಗೆ ಎಲ್ಲಿಯೂ ನಿಲ್ಲಲು ಸಾಧ್ಯವಾಗುವುದಿಲ್ಲ. ಅಥವಾ ಈ ಗಾಡಿ ಯಾರಿಗೂ ತಡೆಯಲು ಸಾಧ್ಯವಾಗುವುದಿಲ್ಲ. ರಭಸದಲ್ಲಿ ಇಳಿದು ಬಂದ ವ್ಯಕ್ತಿ ಕೆಳಗೆ ಬರುತ್ತಲೇ ದೀರ್ಘ ದಂಡ ನಮಸ್ಕಾರ ಹಾಕುತ್ತಾನೆ. ಈ ಸಂದರ್ಭದಲ್ಲಿ ವೇಗದ ಕಾರಣದಿಂದಾಗಿ ಆತನ ಎರಡು ಕಾಲಗಳು ಆಕಾಶದ ಕಡೆಗೆ ಚಾಚುತ್ತವೆ. ಇಷ್ಟಾದರೂ ವ್ಯಕ್ತಿ ಕ್ಷಣದಲ್ಲಿ ಎದ್ದು ನಿಲ್ಲುತ್ತಾನೆ ಮತ್ತು ನಗುಮೊಗದಿಂದ ಪೋಸ್ ನೀಡುತ್ತಾನೆ.

ನೋಡಿ ಈ ವಿಡಿಯೋ…

 

View this post on Instagram

 

A post shared by Ahmad Khan (@swort_ff_8)

ಪ್ರಸ್ತುತ ರೋಚಕ ವಿಡಿಯೋ ಇನ್ಸ್ಟಾಗ್ರಾಮಿನಲ್ಲಿ swort _ff _8 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ ಮಿಲಿಯನ್ಗಟ್ಟಲೆ ವೀಕ್ಷಣೆಯನ್ನು ಪಡೆದಿದೆ.