ಯುವತಿಯರ ಸಿಟ್ಟು ನೆಟ್ಟಿಗೆರಿಸಿದ ಡುಪ್ಲಿಕೇಟ್ ಕಿವುಡ; ಸ್ಪೆಷಲ್ ಪ್ರ್ಯಾOಕ್ ವಿಡಿಯೋ; ಬಿದ್ದು ಬಿದ್ದು ನಕ್ಕರು ನೆಟ್ಟಿಗರು.
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ತಮಾಷೆಯ ವಿಡಿಯೋಗಳೆಂದರೆ ಎಲ್ಲರಿಗೂ ನೋಡಲು ಇಷ್ಟವಾಗುತ್ತದೆ. ಇಂಟರ್ನೆಟ್ ನಲ್ಲಿ ಪ್ರ್ಯಾOಕ್ ವಿಡಿಯೋಗೊಂದು ತುಂಬಾನೇ ಸದ್ದು ಮಾಡುತ್ತಿದೆ. ಈ ವಿಡಿಯೋ ನೋಡಿ ಹಾಗೂ ಎಂಜಾಯ್ ಮಾಡಿ.
ಪ್ರಸ್ತುತ ವಿಡಿಯೋದಲ್ಲಿ ಯುವತಿಯರಿಬ್ಬರಿಗೆ ಯುವಕನೊಬ್ಬ ಅಡ್ರೆಸ್ ಕೇಳುತ್ತಿದ್ದಾನೆ. ಅಡ್ರೆಸ್ ಕೇಳಿದ ನಂತರ ಇಬ್ಬರೂ ಗೆಳತಿಯರು ಯುವಕನಿಗೆ ಹೇಳಲು ಮುಂದಾಗುತ್ತಾರೆ. ಆಗ ಯುವಕ ತನಗೆ ಶಬ್ದ ಕೇಳಿಸುವುದಿಲ್ಲ ಮತ್ತು ತಾನು ಕಿವುಡನೆಂದು ಹೇಳುತ್ತಾನೆ. ಅದಕ್ಕೆ ಯುವತಿಯರು ಅಯ್ಯೋ ಪಾಪ ಎಂದು ಆತನಿಗೆ ಸನ್ನೆ ಮುಖಾಂತರ ಉ.. ಉ.. ಉ.. ಉ.. ಎಂದು ಹೇಳಲು ಶುರು ಮಾಡುತ್ತಾರೆ. ಈ ದೃಶ್ಯ ನೋಡುವವರಿಗೆ ತುಂಬಾನೇ ಇಷ್ಟವಾಗುತ್ತದೆ. ಯುವಕ ಮತ್ತೆ ಅವರು ಹೇಳಿದ ವಿಳಾಸವನ್ನು ತಪ್ಪು ತಪ್ಪಾಗಿ ಕೇಳುತ್ತಾನೆ. ಆಗ ಯುವತಿಯರ ಸಿಟ್ಟು ನೆಟ್ಟಿಗೆ ಇರುತ್ತದೆ ಮತ್ತು ಇಬ್ಬರು ಕೂಡಿ ಒಂದೇ ಉಸಿರಿಗೆ ಉ….. ಉ….. ಎಂದು ಜೋರಾಗಿ ಹೇಳುತ್ತಾರೆ. ಆಗ ಯುವಕ ನೇರವಾಗಿ ಸರಿಯಾಗಿ ಮಾತುಗಳಿಂದ ಹೇಳಿ ಹೀಗೇಕೆ ನೀವು ಉ… ಉ… ಉ… ಉ… ಎನ್ನುತ್ತಿದ್ದೀರಿ ಎಂದು ಕೇಳುತ್ತಾನೆ. ಆಗ ಇಬ್ಬರು ಯುವತಿಯರು ಯುವಕ ಹಠಾತ್ ಮಾತನಾಡುವುದನ್ನು ಕೇಳಿ ಮೆಚ್ಚಿ ಬೀಳುತ್ತಾರೆ.
ನೋಡಿ ಈ ಪ್ರ್ಯಾOಕ್ ವಿಡಿಯೋ…
View this post on Instagram
ಈ ತಮಾಷೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮಿನಲ್ಲಿ ಡಿಫೆನ್ಸ್ ಎಡಿಕ್ಟೆಡ್ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ.