Video; ತನ್ನ ತಾಯಿಯ ಜೊತೆಗೆ ಮುದ್ದಾಡುತ್ತಿರುವ ಪುಟ್ಟ ಕಾಂಗರೂವಿನ ಸಂಡೆ ಸ್ಪೆಷಲ್ ವಿಡಿಯೋ…

 

ತಾಯಿಯ ವಾತ್ಸಲ್ಯ ಮತ್ತು ಪ್ರೀತಿ ಪ್ರತಿಮೆ. ಅದಕ್ಕೆಂದು ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ತಾಯಿಯ ಮಡಿಲು ಮಗುವಿನ ಮೊದಲ ಜಗತ್ತು. ಅವಳ ಮಡಿಲಲ್ಲಿ ಕೂತು ಪ್ರಪಂಚದಲ್ಲಿ ಹೊಸ ಬಣ್ಣಗಳನ್ನು ಕಾಣುತ್ತೇವೆ. ಪ್ರತಿ ಮಗುವಿಗೆ ತಾಯಿ ಬಹಳ ವಿಶೇಷ ಮತ್ತು ಪ್ರಮುಖ ವ್ಯಕ್ತಿ. ವಾಸ್ತವವಾಗಿ, ಅವಳು ಮಕ್ಕಳಿಗೆ ದೇವರ ಅತ್ಯಂತ ಅಮೂಲ್ಯ ಕೊಡುಗೆ ಎಂದೇ ಹೇಳಬಹುದು. ಮೊಟ್ಟ ಮೊದಲು ಮಗು ಅವಳಿಂದ ಮಾತ್ರ ಜಗತ್ತನ್ನು ನೋಡುತ್ತದೆ. ಅವಳು ತನ್ನ ಮಗುವಿಗೆ ಸ್ನೇಹಿತ, ಪೋಷಕರು, ಮಾರ್ಗದರ್ಶಿ ಮತ್ತು ಶಿಕ್ಷಕಿ. ಇಡೀ ಕುಟುಂಬದ ಹೊರೆಯನ್ನೇ ತಾಯಿಯು ಹೊತ್ತಿರತ್ತಾಳೆ.

ಈ ಪ್ರೀತಿ ವಾತ್ಸಲ್ಯ ಜಗತ್ತಿನ ವಾಸಿಸುವ ಪ್ರತಿಯೊಂದು ಜೀವಿಗಳಲ್ಲಿ ಕಂಡು ಬರುತ್ತದೆ. ಸದ್ಯ ಇಲ್ಲಿ ನೋಡಲಿರುವ ವಿಡಿಯೋದಲ್ಲಿಯ ದೃಶ್ಯ ಇದನ್ನೇ ತೋರಿಸುತ್ತದೆ. ಇಲ್ಲಿ ತಾಯಿ ಕಾಂಗರು ಮತ್ತು ಮರಿಕಾಂಗರು ಮಧ್ಯದಲ್ಲಿಯ ದೃಶ್ಯ ಅವರ್ಣನೀಯವಾಗಿದೆ. ಇಂಥ ಸುಂದರವಾದ ದೃಶ್ಯವನ್ನು ಕ್ಯಾಮೆರಾ ಮ್ಯಾನ್ ಒಬ್ಬ ಸೆರೆ ಹಿಡಿದಿದ್ದಾನೆ. ಇಲ್ಲಿ ಪ್ರಾಣಿಗಳ ಮಧ್ಯದಲ್ಲಿಯೂ ತಾಯಿ ಮತ್ತು ಮಗುವಿನ ಪ್ರೀತಿ, ವಾತ್ಸಲ್ಯ ಯಾವ ರೀತಿಯಾಗಿರುತ್ತದೆ ಎಂಬುದನ್ನು ನೋಡಬಹುದು.

ನೋಡಿ ಈ ವಿಡಿಯೋ..

ಪ್ರಸ್ತುತ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ಟ್ವಿಟರ್ ನಲ್ಲಿ @eriksolheim ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ನೆಟ್ಟಿಗರಿಗೆ ತುಂಬಾ ಇಷ್ಟವಾಗಿದೆ. ಮತ್ತು ಪ್ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.