ವಸತಿ ಪ್ರದೇಶದಲ್ಲಿ ನುಗ್ಗಿ ಬಂದ ಜೀವಿಯನ್ನು ಬಂಧಿಸಿದ ಬಗೆ ನೋಡಿ; ಮೊದಲಿಗೆ ಕಾಣುವ ದೃಶ್ಯವೇ ಬೇರೆ, ನಂತರದ ದೃಶ್ಯವೇ ಬೇರೆ…
ಇತ್ತೀಚೆಗೆ ಅನೇಕ ಕಾಡು ಪ್ರಾಣಿಗಳು ಸತತವಾಗಿ ಮಾನವ ವಸತಿ ಪ್ರದೇಶಗಳಲ್ಲಿ ನುಗ್ಗಿ ಬರುತ್ತಿದೆ ಎಂದು ನಮ್ಮ ಅನಿಸಿಕೆ ಆದರೆ ನಿಜವಾಗಿಯೂ ಒಂದು ರೀತಿಯಲ್ಲಿ ಮನುಷ್ಯನೇ ಕಾಂಕ್ರೀಟ್ ಜಂಗಲ್ ನ್ನು ಬೆಳೆಸುತ್ತಾ ಕಾಡು ಪ್ರಾಣಿಗಳ ವಸತಿಯಲ್ಲಿ ನುಗ್ಗಿರುವುದು ಸತ್ಯ. ಹೀಗಾಗಿ ಆ ಬಡಪ್ರಾಣಿಗಳಿಗೆ ಬದುಕಲು ಜಾಗವಿಲ್ಲದಂತಾಗಿ ಬವಣೆ ಪಡುತ್ತಿವೆ.
ಸದ್ಯ ಇಲ್ಲಿಯ ವಿಡಿಯೋ ಒಂದು ನೋಡಲಾಗಿ ಮೈ ಜುಮ್ ಎನ್ನುತ್ತದೆ. ವಿಡಿಯೋ ನೋಡುವಾಗ ಮೊದಲಿಗೆ ಏನೂ ತಿಳಿದು ಬರುವುದಿಲ್ಲ. ಚರಂಡಿಯ ನೀರಿನಲ್ಲಿ ಏನೋ ಸ್ವಲ್ಪ ಅಲುಗಾಡಿದಂತೆ ಕಾಣಿಸುತ್ತದೆ. ನಂತರ ಕೆಲವೇ ಕ್ಷಣಗಳಲ್ಲಿ ಇಳಿಬಿಟ್ಟ ಹಗ್ಗಿನ (knot) ಗಂಟಿನಲ್ಲಿ ಆ ಚರಂಡಿಯ ನೀರಿನಲ್ಲಿ ಅಲುಗಾಡುವ ಜೀವಿಯ ಮುಖ ಸಿಗುತ್ತದೆ. ಆ ಜೀವಿಯ ಮುಖ ಹಗ್ಗಿನ ಗಂಟಿನಲ್ಲಿ ಸಿಗುವುದಷ್ಟೇ ತಡ ರೆಸ್ಕ್ಯೂ ಟೀಮಿನವರು ಹಗ್ಗವನ್ನು ಬಲವಾಗಿ ಎಳೆದುಕೊಳ್ಳುತ್ತಾರೆ. ಆಗ ಚರಂಡಿಯ ನೀರಿನಲ್ಲಿ ಅಲುಗಾಡುವ ಜೀವಿಯ ಮುಖ ಅದರಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ. ಆಗ ಅದೊಂದು ದೊಡ್ಡ ಹೆಬ್ಬಾವು ಅಂತ. ಈ ದೃಶ್ಯ ನೋಡಿದಾಗ ಒಮ್ಮೆಲೇ ಮೈ ಜುಮ್ ಎನ್ನುತ್ತದೆ. ಆ ಹೆಬ್ಬಾವನ್ನು ಹಿಡಿಯಲು ಮಾಡಿದ ಪ್ಲಾನ್ ನೋಡಿ ಹೇಗಿತ್ತು.
ನೋಡಿ ಈ ವಿಡಿಯೋ…
View this post on Instagram
ಪ್ರಸ್ತುತ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ instagram ನಲ್ಲಿ Mukeshpotter14 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ನೋಡಲು ಒಮ್ಮೆಲೇ ಮೈ ಜುಮ್ ಎನ್ನುತ್ತದೆ. ಈ ವಿಡಿಯೋ ಇಲ್ಲಿಯವರೆಗೆ 6.8 ಮಿಲಿಯನ್ ವೀಕ್ಷಣೆ ಪಡೆದಿದೆ. ಹಾಗೂ ಲಕ್ಷಾವಧಿ ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.