ಚಡ್ಡಿ ದೋಸ್ತರ ಜೋಡಿ ಜೋಶ್ ನಲ್ಲಿ ಜೋರು ಜೋರಾಗಿ ಉಯ್ಯಾಲೆ ತೂಗಿಕೊಳ್ಳುವಾಗ ಮರ ಕೊಟ್ಟಿತು ಫೈನಲ್ ಟಚ್ ಅಪ್!

ಉಯ್ಯಾಲೆಯಾಡುವ ಆನಂದವೇ ಬೇರೆಯಾಗಿದೆ. 30 ರಿಂದ ಮೇಲ್ಪಟ್ಟವರಿಗೆ ಅದರಲ್ಲೂ ಹಳ್ಳಿಯಲ್ಲಿ ಜನಿಸಿದವರಿಗೆ ಉಯ್ಯಾಲೆಯ ಆಟ ತುಂಬಾ ಚೆನ್ನಾಗಿ ಗೊತ್ತು. ಗೆಳೆಯರೊಡಗೂಡಿ ಜೋರು ಜೋರಾಗಿ ಉಯ್ಯಾಲೆ ತೂಗಿಕೊಂಡು ಆಡುವುದೇ ಒಂದು ಹಬ್ಬ. ಇದೇ ರೀತಿ ಉಯ್ಯಾಲೆ ಆಡುವಾಗ ನಡೆದ ಒಂದು ವಿಡಿಯೋ ದೃಶ್ಯವನ್ನು ನಿಮ್ಮ ಮುಂದೆ ತಂದಿದ್ದೇವೆ.

ಪ್ರಸ್ತುತ ವಿಡಿಯೋದಲ್ಲಿ ಇಬ್ಬರು ಮಿತ್ರರು ಕೂಡಿ ಉಯ್ಯಾಲೆ ತೂಗಿಕೊಂಡು ಆಡುತ್ತಿದ್ದಾರೆ. ಇಲ್ಲಿ ಇಬ್ಬರೂ ಮಿತ್ರರು ತುಂಬಾ ಶಕ್ತಿಯಿಂದ ಜೋರು ಜೋರಾಗಿ ಉಯ್ಯಾಲೆ ತೂಗಿ ಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಉಯ್ಯಾಲೆ ಕಟ್ಟಿದ ಮರದ ರೆಂಬೆ ಹಠಾತ್ ಮುರಿದು ಬಿಡುತ್ತದೆ. ಮತ್ತೇನು ಕ್ಷಣದಲ್ಲಿ ಇಬ್ಬರು ಮಿತ್ರರು ಉಯ್ಯಾಲೆಯ ಜೊತೆಗೆ ನೆಲದ ಮೇಲೆ ಸಾಷ್ಟಾಂಗ ನಮಸ್ಕಾರಗಳನ್ನು ಹಾಕಿದ್ದಾರೆ.

ನೋಡಿ ಈ ಇಬ್ಬರೂ ಗೆಳೆಯರ ಉಯ್ಯಾಲೆ ಆಟ…

ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದ ಎಲ್ಲರ ಅಚ್ಚುಮೆಚ್ಚಿನ ಪ್ಲಾಟ್ಫಾರ್ಮ್ ಆದ ಇನ್ಸ್ಟಾಗ್ರಾಮ್ ನಲ್ಲಿ b.sudhakarreddy9250 ಹೆಸರಿನ ಅಕೌಂಟ್ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ 4.7 ಮಿಲಿಯನ್ ನೆಟ್ಟಿಗರು ವೀಕ್ಷಿಸಿದ್ದಾರೆ.