ತಾಯಿಯೇ ಕೈ ಹಿಡಿದಿದ್ದಾಳೆಂದು ನಿಶ್ಚಿಂತೆಯಿಂದ ಕುಳಿತ ಮರಿ ಮಂಗ; ಗೊತ್ತಾದಾಗ ಕೊಟ್ಟ ರಿಯಾಕ್ಷನ್ 😳 ನೋಡಿ ಹೇಗಿತ್ತು?

ಮಂಗಗಳ ವಿಡಿಯೋಗಳು ನೋಡಲು ನೆಟ್ಟಿಗರಿಗೆ ಸಖತ್ ಇಷ್ಟವಾಗುತ್ತವೆ. ಇಲ್ಲಿ ಏನಾದರೂ ಹೊಸ ವಿಷಯ ಇದ್ದೇ ಇರುತ್ತದೆ, ಏನಾದರೂ ಹೊಸ ಕಂಟೆಂಟ್ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ನೆಟ್ಟಿಗರಿಗಿರುತ್ತದೆ.

ಸದ್ಯ ಇಲ್ಲಿ ನೋಡುವ ವಿಡಿಯೋ ಸಹ ನಿಮ್ಮ ಆಸೆ ನಿಶ್ಚಿತವಾಗಿಯೂ ಭಂಗ ಗೊಳಿಸುವದಿಲ್ಲ. ಇಲ್ಲಿ ವ್ಯಕ್ತಿಯೊಬ್ಬ ನಿಧಾನವಾಗಿ ತನ್ನ ತಾಯಿಯ ಜೊತೆಗೆ ಕುಳಿತ ಮರಿಮಂಗನ ಕೈ ಹಿಡಿದಿದ್ದಾನೆ. ಮರಿಮಂಗವು ತನ್ನ ತಾಯಿಯೇ ಕೈ ಹಿಡಿದಿದ್ದಾಳೆ ಎಂದು ತಿಳಿದು ಸಂಪೂರ್ಣವಾಗಿ ನಿಶ್ಚಿಂತೆಯಿಂದ ಕುಳಿತಿದೆ. ಇದೇ ಸಂದರ್ಭದಲ್ಲಿ ತಾಯಿ ಮಂಗ ಅಲ್ಲಿಂದ ಎದ್ದು ಹೋಗಿದ್ದು ಮರಿಮಂಗದ ಗಮನಕ್ಕೆ ಬಂದೇ ಇಲ್ಲ. ತಾಯಿ ಎದ್ದು ಅದರ ಮುಂದುಗಡೆಯಿಂದ ಹೋದರೂ ಅದಕ್ಕೆ ಈ ವಿಷಯ ಗಮನಕ್ಕೆ ಬಂದೇ ಇಲ್ಲ. ಯಾವಾಗ ಸ್ವಲ್ಪ ಸಮಯದ ನಂತರ ಅದಕ್ಕೆ ಅರಿವು ಮೂಡುತ್ತದೆ ಆಗ ಹೊರಳಿ ನೋಡುತ್ತದೆ, ಮತ್ತು ಥಟ್ಟನೆ ಅದ್ಭುತವಾದ ರಿಯಾಕ್ಷನ ನೀಡಿದೆ.

ನೋಡಿ ಈ ವಿಶೇಷ ವಿಡಿಯೋ…

 

View this post on Instagram

 

A post shared by Ankit Kumar (@krishana_yadav2002)

ಪ್ರಸ್ತುತ ವಿಡಿಯೋ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ ಮಿಲಿಯನ್ ಸಂಖ್ಯೆಯಲ್ಲಿ ವೀಕ್ಷಣೆಯನ್ನು ಪಡೆದಿದೆ. ಅಷ್ಟೇ ಅಲ್ಲ ಸುಮಾರು 3 ಲಕ್ಷ 41 ಸಾವಿರ ಜನರು ಈ ವಿಡಿಯೋಗೆ ತಮ್ಮ ಲೈಕ್ ಬಟನ್ ಪ್ರೆಸ್ ಮಾಡಿದ್ದಾರೆ.