ಕ್ವಾರಂಟೈನ್ ಸೆಂಟರ್ ಸಲುವಾಗಿ ಹೊಚ್ಚ ಹೊಸ 19 ಫ್ಲೋರ್ ಟಾವರ್ ಕೊಟ್ಟ ಹೃದಯವಂತ ಬಿಲ್ಡರ್!
ಕೊರೊನ ರೋಗಿಗಳ ಮೇಲೆ ತಕ್ಷಣ ಉಪಚಾರವಾಗಬೇಕು, ಮತ್ತು ಅವರು ಬೇಗ ಗುಣಮುಖರಾಗಬೇಕು ಎಂಬ ಉದ್ದೇಶದಿಂದ ಮುಂಬಯಿಯ ಉಪನಗರವಾದ ಮಾಲಾಡ್ ನಲ್ಲಿಯ ಒಬ್ಬ ಬಿಲ್ಡರ್ ತನ್ನ 19 ಫ್ಲೋರ್ ನ ಬಿಲ್ಡಿಂಗ್ ಅನ್ನೇ ಕ್ವಾರಂಟೈನ್ ಸೆಂಟರ್ ಗಾಗಿ ಮುಂಬಯಿ ಮಹಾನಗರ ಪಾಲಿಕೆಯ ಸುಪುರ್ದಿಗೆ ಕೊಟ್ಟಿದ್ದಾನೆ. ಬದಲಿಗೆ ಯಾವುದೇ ಬಾಡಿಗೆ ಅಥವಾ ಇನ್ನಾವುದೇ ದೇಣಿಗೆಯ ಆಸೆಯಿಲ್ಲದೆ ಸಮಾಜಕಾರ್ಯದ ಉದ್ದೇಶದಿಂದ ಕೊಟ್ಟಿದ್ದಾನೆ. ಬಿಲ್ಡರ್ ತೆಗೆದುಕೊಂಡ ಈ ನಿರ್ಣಯದಿಂದ ಎಲ್ಲರೂ ಆತನನ್ನು ಕೊಂಡಾಡುತ್ತಿದ್ದಾರೆ.
ಸಂಪೂರ್ಣ ಮಹಾನಗರದಲ್ಲಿಯ ಕೊರೊನ ಸಂಸರ್ಗವನ್ನು ನಿಲ್ಲಿಸುವದಕ್ಕಾಗಿ…
ಈ ಬಿಲ್ಡರ್ ಹೆಸರು ಮೆಹುಲ್ ಸಿಂಘವಿ ಇದ್ದು ಇವರ ಶ್ರೀಜಿ ಶರಣ್ ಡೆವಲಪರ್ಸ್ ಕಂಪನಿ ಇದ್ದು ಮಾಲಾಡ್ ನಲ್ಲಿ ಅವರ ಶ್ರೀಜಿ ಪ್ಯಾರಡಾಯಿಜ್ ಹೆಸರಿನ 19 ಅಂತಸ್ತಿನ ದೊಡ್ಡ ಬಂಗಲೆಯನ್ನು ಇತ್ತೀಚೆಗೆ ಕಟ್ಟಿದ್ದಾರೆ. ಬಂಗಲೆಯು ಅಧಿಕೃತವಾಗಿದ್ದು ಮಹಾನಗರ ಪಾಲಿಕೆಯ ಎಲ್ಲ ನಿಯಮಗಳ ಪಾಲನೆ ಮಾಡಿ ಮತ್ತು ಪಾಲಿಕೆಯ ಅನುಮತಿಯನ್ನು ಪಡೆದು ಕಟ್ಟಿದ ಗಗನ ಚುಂಬಿತ ವಾಸ್ತು ಆಗಿದೆ. ಈ 19 ಅಂತಸ್ತಿನ ಬಂಗಲೆಯಲ್ಲಿ 130 ಫ್ಲ್ಯಾಟ್ಸ್ ಗಳು ಇದ್ದು ಕೆಲವೊಂದು ಖರೀದಿಯಾಗಿದ್ದು ಕೆಲವು ಮನೆಗಳನ್ನು ಬಾಡಿಗೆಗೆ ಕೊಡಲಾಗಿದೆ. ಈ ಭಾಗದ ಉಪನಗರಗಳಲ್ಲಿ ಕೊರೊನ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದರಿಂದ ಸಂಪೂರ್ಣ ಬಿಲ್ಡಿಂಗ್ ನ್ನೇ ಕ್ವಾರಂಟೈನ್ ಸಲುವಾಗಿ ಪಾಲಿಕೆಗೆ ಕೊಟ್ಟಿದ್ದಾನೆ. ಅಲ್ಲಿದ್ದ ಮನೆ ಮಾಲೀಕರಿಗೆ ಮತ್ತು ಬಾಡಿಗೆದಾರರಿಗೆ ಬೇರೆ ಕಡೆಗೆ ಇರಲು ವ್ಯವಸ್ಥೆ ಮಾಡಿದ್ದಾನೆ. ಇದಕ್ಕಾಗಿ ತಗಲುವ ವೆಚ್ಚವನ್ನು ತಾನೇ ಭರಿಸುವದಾಗಿಯೂ ಹೇಳಿದ್ದಾನೆ. ಸಿಂಘವಿಯವರ ಈ ಔದಾರ್ಯವನ್ನು ಕಂಡು ಬೃಹನ್ಮುಂಬಯಿ ಮಹಾನಗರ ಪಾಲಿಕೆಯು ಅವರಿಗೆ ಪ್ರಮಾಣ ಪತ್ರವನ್ನು ಕೊಟ್ಟು ಗೌರವಿಸಿದೆ. ಸದ್ಯಕ್ಕೆ ಈ ಬಿಲ್ಡಿಂಗ್ ನಲ್ಲಿ 300 ಜನ ಸೊಂಕಿತರನ್ನು ಇಡಲಾಗಿದೆ.

ದೇಶದಲ್ಲಿ ಸದ್ಯ ಕೊರೊನ ಸೋಂಕು ಹೆಚ್ಚಾಗುತ್ತಿರುವ ನಿಟ್ಟಿನಲ್ಲಿ ಇಂಥ ಸಂಕಟದ ಸಮಯದಲ್ಲಿ ದೇಶಕ್ಕಾಗಿ ಎಷ್ಟು ಸಾಧ್ಯವಿದೆ ಅಷ್ಟನ್ನಾದರೂ ಮಾಡಬೇಕಾದ ಜವಾಬ್ದಾರಿ ನಮ್ಮೆಲ್ಲರದಿದೆ. ಇಲ್ಲಿಯ ಸ್ಥಾನಿಕ MLA ಯರಾದ ಗೋಪಾಲ್ ಶೆಟ್ಟಿಯವರು ಈ ಬಿಲ್ಡಿಂಗ್ ನ್ನು ಕೊರೊನ ರೋಗಿಗಳಿಗಾಗಿ ಉಪಯೋಗ ಮಾಡಬಹುದು ಎಂದು ಸಲಹೆ ಕೊಟ್ಟಾಗ ನನಗೆ ಅದು ಒಳ್ಳೆಯ ಸಲಹೆ ಎನಿಸಿ ತಕ್ಷಣ ನಾನು ಕೊಟ್ಟುಬಿಟ್ಟೆ. ಇದೆಲ್ಲದರ ಶ್ರೇಯ ಗೋಪಾಲ ಶೆಟ್ಟಿಯವರಿಗೆ ಸಲ್ಲುವದು ಎಂದು ಸಿಂಘವಿ ನಮ್ರವಾಗಿ ಹೇಳುತ್ತಾರೆ.
ಈ ಸಂಕಟದ ಸಮಯದಲ್ಲಿ ಜನರು ವೈಯಕ್ತಿಕ ಹಿತವನ್ನು ಬದಿಗೆ ಸಾರಿ ಸಮಾಜ ಕಾರ್ಯಕ್ಕೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಇದರ ಅಭಿಮಾನವೆನಿಸುತ್ತದೆ. ಎಲ್ಲರೂ ತಮ್ಮ ಕೈಲಾದಷ್ಟು ಸಹಾಯ ಮಾಡಿದರೆ ತಮ್ಮ ತಮ್ಮ ಪ್ರಾಣ ಉಳಿಸಿಕೊಳ್ಳಬಹುದು. ಜನರ ಸಹಕಾರ್ಯದಿಂದ ನಾವು ರೋಗಿಗಳಿಗೆ ಇನ್ನಷ್ಟು ಸರಿಯಾಗಿ ನೋಡಿಕೊಳ್ಳಬಹುದು, ಎಂದು ಆಡಿಷನಲ್ ಕಮಿಷನರ್ ಸಂಜಯ್ ಕಬರೆ ಹೇಳಿದ್ದಾರೆ.