Video; ವಿಶ್ವದ ಅತೀ ಅಪರೂಪದ ಮೀನನ್ನು ನೋಡಿ; ನೀರಿನಿಂದ ಮೇಲೆತ್ತಲು ಇದು ಪಡೆದುಕೊಳ್ಳುವ ಆಕಾರವೇ ಬೇರೆ…
ಜಗತ್ತು ವಿಸ್ಮಯಗಳ ಗೂಡಾಗಿದೆ. ಇಲ್ಲಿ ಬದುಕುವ ಪ್ರತಿಯೊಂದು ಜೀವಿಯಲ್ಲಿ ಒಂದೊಂದು ಆಶ್ಚರ್ಯ ಅಡಗಿದೆ. ಸದ್ಯ ನಿಮ್ಮನ್ನು ಬೆರಗುಗೊಳಿಸುವ ವಿಚಿತ್ರ ಮೀನಿನ ದೃಶ್ಯವೊಂದನ್ನು ನಿಮಗಾಗಿ ತಂದಿದ್ದೇವೆ.
ಈ ವಿಡಿಯೋದಲ್ಲಿ ಫಿಶ್ ಟ್ಯಾಂಕ್ ಕಂಡುಬರುತ್ತದೆ. ವ್ಯಕ್ತಿ ಫಿಶ್ ಟ್ಯಾಂಕಿನಲ್ಲಿ ಕೈ ಹಾಕಿ ಪುಟ್ಟದಾದ ಮೀನೊಂದನ್ನು ನೀರಿನಿಂದ ಹೊರಗೆ ತೆಗೆಯುತ್ತಾನೆ. ಆ ಮೀನನ್ನು ಹೊರಗೆ ತೆಗೆಯುತ್ತಲೇ ವಿಚಿತ್ರವಾದ ಸದ್ದು ಮಾಡುತ್ತಾ ಹೊರಗಿನ ಗಾಳಿಯನ್ನು ತನ್ನ ಮೈಯಲ್ಲಿ ತುಂಬಿಕೊಳ್ಳಲು ಶುರುಮಾಡುತ್ತದೆ. ಹೇಗೆ ಗಾಳಿಯನ್ನು ತನ್ನ ಮೈಯೊಳಗೆ ತುಂಬಿಕೊಳ್ಳುತ್ತದೆ ಹಾಗೆ ಮೀನು ದುಂಡಗೆ ಆಕಾರವನ್ನು ಪಡೆಯಲು ಶುರುಮಾಡುತ್ತದೆ. ಕೆಲವೇ ಕ್ಷಣಗಳಲ್ಲಿ ಮೀನು ಹವೆ ತುಂಬಿ ದುಂಡಗೆ ಚಂಡಿನಂತೆ ಕಾಣುತ್ತದೆ. ಮೀನಿನ ಈ ವರ್ತನೆ ನೋಡಲು ತುಂಬಾ ಅಪರೂಪದ್ದಾಗಿದೆ. ಪ್ರಸ್ತುತ ಮೀನಿನಲ್ಲಿ ಇದೊಂದು ವಿಶೇಷ ಗುಣ ಕಂಡುಬರುತ್ತದೆ.
ನೋಡಿ ಈ ಅಪರೂಪದ ಮೀನಿನ ವಿಡಿಯೋ…
View this post on Instagram
ಈ ಸುಂದರವಾದ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಪ್ಲ್ಯಾಟ್ ಫಾರ್ಮ್ ಆದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಅನಿಮಲ್ಸ್ ಡ್ರಾಲರಿ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ನೆಟ್ಟಿಗರಿಗೆ ತುಂಬಾ ಇಷ್ಟವಾದಂತೆ ಕಾಣುತ್ತದೆ. ಪ್ರಸ್ತುತ ವಿಡಿಯೋವನ್ನು ಲಕ್ಷಾವಧಿ ಜನರು ನೋಡಿದ್ದಲ್ಲದೆ ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ.