ಅಂಬಾನಿಯವರ ಈ ಶಾಲೆಯಲ್ಲಿ ಕೋಟ್ಯಾಧಿಪತಿಗಳೇ ಕಲಿಯಬಹುದು, ಶಾಲೆಯ ಒಂದು ತಿಂಗಳಿನ ಶುಲ್ಕನಲ್ಲಿ ಒಂದು ದುಬಾರಿ ಕಾರು ಬರುತ್ತೆ!
ಇಂದಿನ ದಿನಗಳಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ಸಬಲರನ್ನಾಗಿಸುವುದು ಪಾಲಕರ ಮೇಲಿನ ಒಂದು ದೊಡ್ಡ ಜವಾಬ್ದಾರಿಯಾಗಿದೆ. ಸಾಮಾನ್ಯ ನಾಗರಿಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಓದಿಸುತ್ತಾರೆ. ಸ್ವಲ್ಪ ಉತ್ತಮ ಆದಾಯ ಹೊಂದಿರುವ ಜನರು ತಮ್ಮ ಮಕ್ಕಳನ್ನು ಒಳ್ಳೆಯ ಖಾಸಗಿ ಶಾಲೆಗೆ ಕಳುಹಿಸುತ್ತಾರೆ. ಆದರೆ ಸೆಲೆಬ್ರಿಟಿಗಳು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ವಿಶೇಷ ಶಾಲೆಗಳನ್ನು ಬಯಸುತ್ತಾರೆ. ಅಂತಹ ಖ್ಯಾತನಾಮರ ಮಕ್ಕಳಿಗೆ ಶಿಕ್ಷಣ ನೀಡಲು ಮುಂಬೈನಲ್ಲಿ ಪ್ರಸಿದ್ಧ ಶಾಲೆ ಇದೆ. ಈ ಶಾಲೆಯ ಶುಲ್ಕ ಎಷ್ಟಿದೆಯೆಂದರೆ ಕೋಟ್ಯಾಧಿಪತಿಗಳು ಮಾತ್ರ ತಮ್ಮ ಮಕ್ಕಳಿಗೆ ಇಲ್ಲಿ ಶಿಕ್ಷಣ ಕೊಡಿಸಬಲ್ಲರು. ಈ ಶಾಲೆಯ ಬಗ್ಗೆ ಹಾಗೂ ಶಾಲೆಯಲ್ಲಿಯ ಒಂದು ತಿಂಗಳ ನಿಖರವಾದ ಶುಲ್ಕ ಎಷ್ಟು ಎಂದು ತಿಳಿದುಕೊಳ್ಳೋಣ ಬನ್ನಿ.
ದೇಶದ ಅತಿದೊಡ್ಡ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಮುಂಬೈನ ಬಾಂದ್ರಾದಲ್ಲಿ ತಮ್ಮ ತಂದೆಯ ನೆನಪಿಗಾಗಿ ಶಾಲೆಯನ್ನು ಪ್ರಾರಂಭಿಸಿದ್ದಾರೆ. ಈ ಶಾಲೆಯ ಹೆಸರು ಧೀರೂಭಾಯಿ ಅಂಬಾನಿ ಇಂಟರ್ನ್ಯಾಶನಲ್ ಸ್ಕೂಲ್. ಈ ಶಾಲೆಯಲ್ಲಿ ನೀವು ನಂಬದಿರುವಷ್ಟು ಪ್ರವೇಶ ಶುಲ್ಕವಿದೆ. ಇದು ದೇಶದ ಉನ್ನತ ದರ್ಜೆಯ ಶಾಲೆಗಳಲ್ಲಿ ಒಂದಾಗಿದೆ. ಇದು ಬಾಲಿವುಡ್ ಸೆಲೆಬ್ರಿಟಿಗಳ ನೆಚ್ಚಿನ ಶಾಲೆಯಾಗಿದೆ. ಶಾರುಖ್ ಖಾನ್ ಅವರ ಮಗ ಅಬ್ರಾಮ್, ಐಶ್ವರ್ಯಾ ರಾಯ್ ಅವರ ಮಗಳು ಆರಾಧ್ಯ, ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್ ಅವರಂತಹ ಅನೇಕ ಸೆಲೆಬ್ರಿಟಿಗಳ ಮಕ್ಕಳು ಇಲ್ಲಿ ಓದಿದ್ದಾರೆ ಮತ್ತು ಇನ್ನೂ ಅನೇಕ ಸೆಲೆಬ್ರಿಟಿ ಮಕ್ಕಳು ಇಲ್ಲಿ ಓದುತ್ತಿದ್ದಾರೆ.

ಶಾಲೆಯು ಮುಂಬೈನ ಬಾಂದ್ರಾ ಪರಿಸರದಲ್ಲಿಯ ಟ್ರೈಡೆಂಟ್ ರಸ್ತೆ, ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಲ್ಲಿದೆ. ಮುಂಬೈ ಮಾತ್ರವಲ್ಲದೆ ದೇಶದ ಅತ್ಯಂತ ದುಬಾರಿ ಶಾಲೆಗಳ ಪಟ್ಟಿಯಲ್ಲಿ ಧೀರೂಭಾಯಿ ಅಂಬಾನಿ ಶಾಲೆಯ ಪ್ರಮುಖ ಹೆಸರಾಗಿದೆ. ಅಂಬಾನಿಯವರು ಈ ಶಾಲೆಯನ್ನು 2003 ರಲ್ಲಿ ಸ್ಥಾಪಿಸಿದರು. ಶಾಲಾ ಕಟ್ಟಡವು ಏಳು ಮಹಡಿಗಳನ್ನು ಹೊಂದಿದೆ. ಈ ಶಾಲೆಯಲ್ಲಿ ವಿಶೇಷವಾಗಿ International Baccalaureate ಕೋರ್ಸ್ಗಳ ಆಧಾರದ ಮೇಲೆ ಶಿಕ್ಷಣವನ್ನು ನೀಡಲಾಗುತ್ತದೆ. ಶಾಲೆಯು ಮಲ್ಟಿಮೀಡಿಯಾ ಪ್ರೊಜೆಕ್ಟರ್ಗಳು, ವ್ಯಾಪಕವಾದ ಉದ್ಯಾನಗಳು ಮತ್ತು ಮೈದಾನಗಳನ್ನು ಹೊಂದಿದೆ. ಪ್ರತಿ ತರಗತಿಯಲ್ಲಿ ಮೈಕ್ ವ್ಯವಸ್ಥೆ, ಡಿಸ್ಪ್ಲೇ ಮತ್ತು ಬೋರ್ಡ್, ವಿದ್ಯಾರ್ಥಿಗಳಿಗೆ ಲಾಕರ್ಗಳು, ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸೌಲಭ್ಯ ಮತ್ತು ಎಸಿ ಸೌಲಭ್ಯವಿದೆ. ಈ ಶಾಲೆಯ ಧ್ಯೇಯವಾಕ್ಯವೆಂದರೆ “ಕನಸು ಕಾಣುವ ಧೈರ್ಯ ಮಾಡಿ, ಅತ್ಯುತ್ತಮವಾಗಲು ಕಲಿಯಿರಿ”.
ಈ ಶಾಲೆಯಲ್ಲಿ ಅನೇಕ ದೊಡ್ಡ ಗಣ್ಯರು, ಕಲಾವಿದರು, ಉನ್ನತ ವರ್ಗದ ಕುಟುಂಬದ ಮಕ್ಕಳು ಈ ಶಾಲೆಯಲ್ಲಿ ಓದಲು ಬರುತ್ತಾರೆ ಆದ್ದರಿಂದ ಈ ಶಾಲೆಯು ಆಕರ್ಷಣೆಯ ಬಿಂದುವಾಗುತ್ತದೆ. ಕಿಂಗ್ ಖಾನ್ ಪುತ್ರಿ ಸುಹಾನಾ ಖಾನ್, ಮಗ ಅಬ್ರಹಾಂ ಖಾನ್, ಹೃತಿಕ್ ರೋಷನ್ ಮಕ್ಕಳಾದ ಹೃಧನ್ ಮತ್ತು ರೆಹಾನ್, ಶ್ರೀದೇವಿ ಪುತ್ರಿಯರಾದ ಜಾನ್ವಿ ಮತ್ತು ಖುಷಿ ಕಪೂರ್, ಅಭಿಷೇಕ್ ಬಚ್ಚನ್ ಐಶ್ವರ್ಯ ರೈ-ಬಚ್ಚನ್ ಪುತ್ರಿ , ಸೈಫ್ ಅಲಿ ಖಾನ್ ಮಕ್ಕಳಾದ ಸಾರಾ ಅಲಿ ಖಾನ್ ಮತ್ತು ಇಬ್ರಾಹಿಂ ಖಾನ್ ಈ ಶಾಲೆಯಲ್ಲಿ ಓದಿದ್ದಾರೆ.

ಧೀರೂಭಾಯಿ ಅಂಬಾನಿ ಇಂಟರ್ನ್ಯಾಶನಲ್ ಸ್ಕೂಲ್ನ ಎಲ್ಲಾ ಕೆಲಸಗಳನ್ನು ನೀತಾ ಅಂಬಾನಿ ನೋಡಿಕೊಳ್ಳುತ್ತಾರೆ. ದೇಶದ ಮೊದಲ ಟಾಪ್ ಹತ್ತು ಶ್ರೇಯಾಂಕದಲ್ಲಿ ಈ ಶಾಲೆಯು ಸಹ ಸಮಾವೇಶವಾಗಿದೆ. ಈ ಶಾಲೆಯು “ನಂಬರ್ ಒನ್ ಇಂಟರ್ನ್ಯಾಷನಲ್ ಸ್ಕೂಲ್” ಎಂಬ ಬಿರುದನ್ನು ಸಹ ಪಡೆದುಕೊಂಡಿದೆ. 2017 ರ ವರದಿಯ ಪ್ರಕಾರ, ಇಲ್ಲಿ LKG ಯಿಂದ 4 ನೇ ವರೆಗಿನ ಶುಲ್ಕಗಳು ರೂ 2.05 ಲಕ್ಷ, V ನಿಂದ VII ವರೆಗೆ ರೂ 2.1 ಲಕ್ಷ, VIII ರಿಂದ X (ICSE ಬೋರ್ಡ್) ರೂ 2.3 ಲಕ್ಷ, VIII ರಿಂದ X (IGCSE ಬೋರ್ಡ್) ರೂ 5 . 9 ಲಕ್ಷ ರೂಪಾಯಿ, XI ಮತ್ತು XII ತರಗತಿಗಳಿಗೆ (IBDP ಬೋರ್ಡ್) ಶುಲ್ಕ 9.65 ಲಕ್ಷ ರೂ. ಮುಂಬೈ ಮಿರರ್ ವರದಿ ಪ್ರಕಾರ, ಪೋಷಕರು ವರ್ಷಕ್ಕೆ 24 ಲಕ್ಷ ರೂಪಾಯಿ ಠೇವಣಿ ಪಾವತಿಸಬೇಕಾಗುತ್ತದೆ.
ಫುಟ್ಬಾಲ್ಗಾಗಿ ಶಾಲೆಯಲ್ಲಿ ಆಸ್ಟ್ರೋ ಟರ್ಫ್ ಮೈದಾನವನ್ನು ಸಿದ್ಧಪಡಿಸಲಾಗಿದೆ. ಶಾಲೆಯಲ್ಲಿ ತುರ್ತು ವೈದ್ಯಕೀಯ ಕೇಂದ್ರವೂ ಇದೆ. ಶಾಲಾ ಗ್ರಂಥಾಲಯವು 38250 ಪುಸ್ತಕಗಳು, 40 ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು, 1600 ಮಲ್ಟಿಮೀಡಿಯಾ ಸಿಡಿಗಳು/ಡಿವಿಡಿಗಳು/ಆಡಿಯೋ ಕ್ಯಾಸೆಟ್ಗಳು ಮತ್ತು 16 ಆನ್ಲೈನ್ ಡೇಟಾಬೇಸ್ಗಳನ್ನು ಹೊಂದಿದೆ. ಕ್ಯಾಂಪಸ್ನಾದ್ಯಂತ ವೈ-ಫೈ ಸೌಲಭ್ಯವಿದೆ. ಆಧುನಿಕ ಅಡುಗೆಮನೆ ಮತ್ತು 2 ಡೈನಿಂಗ್ ಹಾಲ್ಗಳೊಂದಿಗೆ ಐಷಾರಾಮಿ ಕಾರ್ಪೆಟ್ ಏರಿಯಾ ಕೂಡ ಇದೆ.