Video; ಈ ಚಿತ್ರದಲ್ಲಿ ಕಾಣುತ್ತಿರುವ ಪ್ರಾಣಿ “ನಾಯಿ” ಎಂದರೆ ಶುದ್ಧ ತಪ್ಪು! ನಿಮ್ಮ ಕಣ್ಣುಗಳನ್ನು ಸರಿಯಾಗಿ ಪರೀಕ್ಷಿಸಬೇಕಾಗುತ್ತೆ!

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಅನೇಕ ಚಿತ್ರಗಳು ಕೆಲವೊಮ್ಮೆ ನೆಟ್ಟಿಗರಿಗೆ ದಂಗುಗೊಳಿಸುತ್ತವೆ. ಇಂತ ಚಿತ್ರಗಳನ್ನು ಅಥವಾ ವಿಡಿಯೋಗಳನ್ನು ಸರಿಯಾಗಿ ನೋಡಿದಾಗ ನಿಜಾಂಶ ತಿಳಿಯುತ್ತದೆ ಮತ್ತು ಮನುಷ್ಯನಿಗೆ ಆಶ್ಚರ್ಯವಾಗುತ್ತದೆ.

ಸದ್ಯ ಇಲ್ಲಿ ನೋಡುವ ವಿಡಿಯೋ ಸಹ ಇದೇ ರೀತಿಯ ಬೆರಗು ನೀಡುವಂತಿದೆ. ಈ ವಿಡಿಯೋ ನೋಡುವಾಗ ಮೊದಲು ನಾಯಿಯೊಂದು ಕುಳಿತಿದೆ ಎಂದು ಕಂಡು ಬರುತ್ತದೆ. ಕೆಲವೇ ಕೆಲವು ಕ್ಷಣಗಳ ನಂತರ ಅಕ್ಷರಶಃ ಚಿತ್ರ ಬದಲಾಗುತ್ತದೆ. ನಾಯಿಯ ಮುಖ ಹೋಗಿ ಒಮ್ಮೆಲೇ ಅಲ್ಲಿ ಬೆಕ್ಕಿರುವುದು ಕಣ್ಣಿಗೆ ಗೋಚರವಾಗುತ್ತದೆ. ಇದು ನಿಜಕ್ಕೂ ಅಚ್ಚರಿ ಹುಟ್ಟಿಸುತ್ತದೆ.

ನೋಡಿ ಈ ವಿಶೇಷ ವಿಡಿಯೋ…

 

View this post on Instagram

 

A post shared by Doglarmeme (@doglarmeme)

ಈ ಬೆರಗುಗೊಳಿಸುವ ವಿಡಿಯೋ ಸೋಶಿಯಲ್ ಮೀಡಿಯಾದ ಪ್ಲಾಟ್ ಫಾರ್ಮ್ ಆಗ ಇನ್ಸ್ಟಾಗ್ರಾಮ್ ನಲ್ಲಿ doglarmeme ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋ 11.1 ಮಿಲಿಯನ್ ಜನರಿಗೆ ಬೆರಗುಗೊಳಿಸಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ 8 ಲಕ್ಷಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.