Video: ಚಿಕ್ಕವರಿದ್ದಾಗ ಬರೀ ಕಥೆ ಕೇಳಿದ್ದೇವೆ ಇಂದು ರಿಯಲ್ ಆಗಿ ನೋಡಿ, ಜಾಣ ಕಾಗೆಯ ಕಥೆ……!!
ನಾವು ಚಿಕ್ಕವರಿದ್ದಾಗ ಶಾಲೆಯಲ್ಲಿ ಗುರುಗಳಿಂದ ಮತ್ತು ಮನೆಯಲ್ಲಿ ಅಜ್ಜಿಯ ಅನೇಕ ಕಥೆಗಳನ್ನು ಕೇಳಿದ್ದೇವೆ. ಅವುಗಳಲ್ಲಿ ಬಹಳಷ್ಟು ಸಲ ಕೇಳಿದ ಕಥೆ ಎಂದರೆ ನೀರಡಿಸಿದ ಕಾಗೆಯ ಕಥೆ ಅಥವಾ ಜಾಣ ಕಾಗೆಯ ಕಥೆ. ನಾವು ಪ್ರತಿಯೊಬ್ಬರೂ ಸಹ ಚಿಕ್ಕವರಿದ್ದಾಗ ಈ ಕಥೆ ಒಂದಲ್ಲ ಒಂದು ಸಹ ಕೇಳಿದ್ದೇವೆ ಅಥವಾ ಹೇಳಿದ್ದೇವೆ. ಈ ಕಥೆ ತುಂಬಾನೇ ಹಿಟ್ ಆದ ಕಥೆ ಯಾಗಿತ್ತು. ಶಾಲೆಯಲ್ಲಿ ಶಿಕ್ಷಕರು ಕಥೆ ಹೇಳು ಎಂದರೆ ಥಟ್ಟನೆ ನೆನಪಿಗೆ ಬರುವ ಕಥೆ ಇದೆ. ಆದರೆ ಈ ಕಥೆ ಇಂದು ಸತ್ಯವಾಗಿ ಅಂದರೆ ವೀಡಿಯೋ ನೋಡಲು ಸಿಕ್ಕಿದೆ.
ಈ ಕಥೆಯಲ್ಲಿ ಒಂದು ಕಾಗೆ ತುಂಬಾ ಬಾಯಾರಿಕೆ ಯಿಂದಾಗಿ ನೀರನ್ನು ಹುಡುಕುತ್ತ ಹುಡುಕುತ್ತ ಒಂದು ಸ್ಥಳಕ್ಕೆ ಬರುತ್ತದೆ. ಅಲ್ಲಿ ಒಂದು ಮಡಿಕೆ ಇರುತ್ತದೆ. ಮಡಿಕೆಯಲ್ಲಿ ನೀರು ಸ್ವಲ್ಪ ಮಟ್ಟದಲ್ಲಿ ಇರುತ್ತವೇ. ಹೀಗಾಗಿ ಮಾಡಿಕೆಯಲ್ಲಿಯ ನೀರು ಕಾಗೆಯು ತನ್ನ ಕೊಕ್ಕರೆಯಿಂದ ಕುಡಿಯಲು ಪ್ರಯತ್ನ ಮಾಡುತ್ತದೆ. ಆದರೆ ಅದು ಎಷ್ಟೇ ಪ್ರಯತ್ನ ಮಾಡಿದರು ಸಹ ಅದಕ್ಕೆ ನೀರು ನೆಲಕುವದೇ ಇಲ್ಲ. ಆಗ ಜಾಣ ಕಾಗೆ ಒಂದು ಉಪಾಯ ಮಾಡುತ್ತದೆ.
ಉಪಾಯ ವೇನೆಂದರೆ ಬಳಿಯಲ್ಲಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ತನ್ನ ಚೂಚಿನಲ್ಲಿ ಹಿಡಿದುಕೊಂಡು ಒಂದೊಂದಾಗಿ ಮಡಿಕೆಯಲ್ಲಿ ಹಾಕುತ್ತದೆ. ಹಾಗೆ ನೀರು ಮೇಲಕ್ಕೆ ಬರುವ ವರೆಗೆ ಹಾಕುತ್ತದೆ. ನೀರು ಮೇಲೆ ಬಂದ ನಂತರ ಅಲ್ಲಿದ್ದ ನೀರನ್ನು ಕುಡಿದು ಅಲ್ಲಿಂದ ಹಾಯಾಗಿ ಸಂತಸದಿಂದ ಹಾರಡುತ್ತ ಹೋಗುತ್ತದೆ. ಇದು ನಾವು ನೀವೆಲ್ಲ ಕೇಳಿರುವ ಕಥೆಯಾಗಿದೆ. ಇದರ ಆಧಾರದ ಮೇಲಿಂದ ಒಂದು ವೀಡಿಯೋ ಸದ್ಯಕ್ಕೆ ತುಂಬಾನೇ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ ನೀವು ನೋಡಬಹುದು, ಒಂದು ಸ್ಥಳದಲ್ಲಿ ಒಂದು ನೀರಿನ ಬಾಟಲಿಯನ್ನು ತಗೆದುಕೊಂಡು ಅದರಲ್ಲಿ ಸ್ವಲ್ಪ ಮಟ್ಟಿಗೆ ನೀರನ್ನು ಹಾಕಿ ಅದನ್ನು ನೆಲದ ಮೇಲೆ ಇಡಲಾಗುತ್ತದೆ. ತದನಂತರ ಅಲ್ಲಿಂದ ಒಂದು ಕಾಗೆ ಬರುತ್ತದೆ. ಕಾಗೆ ನೀರನ್ನು ಕಂಡು ಕುಡಿಯಲು ಪ್ರಯತ್ನಿಸುತ್ತದೆ ಆದರೆ ನೀರು ನೆಲಕುವದೇ ಇಲ್ಲ. ಆಗ ಕಾಗೆ ಅಲ್ಲಿದ್ದ ಕಲ್ಲಿನ ತುಂಡುಗಳನ್ನು ತಗೆದುಕೊಂಡು ಅದರಲ್ಲಿ ಹಾಕಿ ನೀರು ಮೇಲೆ ಬಂದ ಮೇಲೆ ಕುಡಿದು ಹಾರಿ ಹೋಗುತ್ತದೆ. ಈ ವೀಡಿಯೋ ನೋಡಿದ ಮೇಲೆ ನಾವು ಕೇಳಿರುವ ಕಥೆ ನಿಜವಾಯಿತು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ವಿಡಿಯೋ ನೋಡಿ.
View this post on Instagram
ಪ್ರಸ್ತುತ ವಿಡಿಯೋವನ್ನು ಸೋಶಿಯಲ್ ಮಿಡಿಯಾದಲ್ಲಿ ತುಂಬಾ ವೈರಲ್ ಆಗಿದ್ದು, ಈ ವೀಡಿಯೋ ಇನ್ಸ್ಟಾಗ್ರಾಮ್ ನಲ್ಲಿ viralvichar.in ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವೀಡಿಯೋವನ್ನು ಸುಮಾರು ಐದು ಮಿಲಿಯನ್ ಗಿಂತಲೂ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಸುಮಾರು ಐದು ಲಕ್ಷಕ್ಕೂ ಹೆಚ್ಚು ನೆಟ್ಟಿಗರು ಲೈಕ್ ಮಾಡಿದ್ದಾರೆ.