ಎಂಪ್ಲಾಯ್ ಆಫ್ ದ ಮಂಥ್; 70 ಸೆಕೆಂಡಿನಲ್ಲಿ 70 ಉಣ್ಣೆಗುರಿಗಳ ಹಿಂಡು ತಂದು ಸರಿಯಾಗಿ ಶೆಡ್ಡಿಗೆ ಹಚ್ಚಿದ ನಾಯಿಯ ಎಫೋರ್ಟ್ ನೋಡಿ.
ಅನೇಕ ದೇಶಗಳಲ್ಲಿ ಸದ್ಯಕ್ಕೆ ತಮ್ಮ ಮಹತ್ವದ ಕೆಲಸಗಳನ್ನು ಬೇರೆ ಪ್ರಾಣಿಗಳಿಂದ ಮಾಡಿಕೊಳ್ಳುತ್ತಿದ್ದಾರೆ. ಇಲ್ಲಿ ಮನುಷ್ಯನ ಜಾಣತನಕ್ಕೆ ಮೆಚ್ಚಬೇಕೊ ಅಥವಾ ಆ ಪ್ರಾಣಿಯ ಬುದ್ಧಿವಂತಿಕೆಗೆ ಮೆಚ್ಚಬೇಕೊ ನೀವೇ ಹೇಳಿ. ಪ್ರಸ್ತುತ ವಿಡಿಯೋದಲ್ಲಿ ತನ್ನ ಕೆಲಸದ ಪ್ರತಿ ನಾಯಿಯ ಕರ್ತವ್ಯಪರತೆ ಎಂಥದ್ದು ಎಂಬುದು ಕಂಡು ಬರುತ್ತದೆ.
ಈ ವಿಡಿಯೋದಲ್ಲಿ ಕಂಡು ಬರುವ ದೃಶ್ಯ ನಿಜಕ್ಕೂ ನಿಮಗೆ ಬೆರಗು ಗೊಳಿಸುತ್ತದೆ. ಕಾರಣ ಅಂಥ ಕೆಲಸವನ್ನೇ ಇಲ್ಲಿ ನಾಯಿಯು ತುಂಬಾ ಪರಿಪೂರ್ಣತೆಯಿಂದ ಅದೂ ಮನುಷ್ಯನಿಗಿಂತಲೂ ತುಂಬಾ ಕಡಿಮೆ ಸಮಯದಲ್ಲಿ ಅಷ್ಟೇ ಅಚ್ಚುಕಟ್ಟುತನದಿಂದ ಮಾಡಿದೆ.
ಇಲ್ಲಿ ಸುಮಾರು 60 ರಿಂದ 70 ಉಣ್ಣೆಗುರಿಗಳು ಓಪನ್ ಮೈದಾನದಲ್ಲಿ ಹುಲ್ಲು ಮೇಯುತ್ತಿವೆ. ವಾತಾವರಣವೆಲ್ಲ ಪೂರ್ತಿ ಮಳೆಯ ವಾತಾವರಣದಿಂದ ಕೂಡಿದೆ. ಹೀಗಾಗಿ ಕುರಿಗಳ ಮಾಲೀಕ ನಾಯಿಗೆ ಒಂದು ಆದೇಶ ನೀಡುತ್ತಾನೆ. ತನ್ನ ಮಾಲೀಕ ಆದೇಶಸಿದ್ದೇ ತಡ ನಾಯಿಯು ನಾಗಾಲೋಟದಲ್ಲಿ ಓಡುತ್ತ ಹೋಗುತ್ತದೆ ಮತ್ತು ಒಂದೇ ಒಂದು ನಿಮಿಷದಲ್ಲಿ ಮೈದಾನದಲ್ಲಿ ಮೇಯುತ್ತಿರುವ ಎಲ್ಲ ಕುರಿಗಳನ್ನು ಸರಿಯಾಗಿ ಹೊಡೆದುಕೊಂಡು ತಂದು ಶೆಡ್ಡಿಗೆ ಹಚ್ಚುತ್ತದೆ. ನಾಯಿಯ ಈ ಕೆಲಸ ಕುರಿಗಳ ಮಾಲೀಕನಿಗೆ ಎಷ್ಟೊಂದು ಸಂತಸ ತಂದಿರಬೇಕು ಎಂಬುದನ್ನು ಶಬ್ದಗಳಲ್ಲಿ ಹೇಳಲು ಸಾಧ್ಯವಿಲ್ಲ, ಅಲ್ವಾ?
ನೋಡಿ ಈ ವಿಶೇಷ ವಿಡಿಯೋ…
ಪ್ರಸ್ತುತ ವಿಡಿಯೋವನ್ನು ಸೋಷಿಯಲ್ ಮೀಡಿಯಾ ಸೈಟ್ ಆದ ಟ್ವಿಟರ್ ನಲ್ಲಿ Thund3rBOlt ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ನೆಟ್ಟಿಗರಿಗೆ ತುಂಬಾ ಇಷ್ಟವಾದದ್ದು ಇಲ್ಲಿ ಕಂಡು ಬರುತ್ತದೆ. ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ 3 ಮಿಲಿಯನ್ ಗಿಂತಲೂ ಹೆಚ್ಚು ವೀಕ್ಷಣೆಯನ್ನು ಪಡೆದಿದೆ. ನಾಯಿಯ ಈ ಕೆಲಸ ನಿಜಕ್ಕೂ ಅದ್ಭುತವಾಗಿದೆ.
ವಿಡಿಯೋ ನೋಡಿ.
https://twitter.com/Thund3rB0lt/status/1613558344933048320?s=20&t=_P3J15uM2bajai48HzPciw
ಇದರ ಮೇಲಿಂದ ಪ್ರತಿಯೊಂದು ಪ್ರಾಣಿಗಳಲ್ಲಿ ಕಲಿಯುವ ಬುದ್ಧಿಶಕ್ತಿ ಇರುತ್ತದೆ, ಅವುಗಳಿಗೆ ಹೇಗೆ ಕಲಿಸಿದರೆ ಈ ಪ್ರಾಣಿಗಳು ಕಲಿತುಕೊಳ್ಳುತ್ತವೆ ಎಂಬ ಐಡಿಯಾ ಮಾತ್ರ ಕಲಿಸುವವನಲ್ಲಿ ಇರಬೇಕು, ಅಲ್ವಾ? ಶೇರ್ ಮಾಡಿದ ವ್ಯಕ್ತಿ ನಾಯಿಯ ಕೆಲಸಕ್ಕೆ ಮೆಚ್ಚಿ ಈ ವಿಡಿಯೋಗೆ Employee of the Month ಎಂದು ಕ್ಯಾಪ್ಶನ್ ನೀಡಿದ್ದಾನೆ.