Video; PAK vs NZ: ಪಾಕಿಸ್ತಾನಿ ಆಟಗಾರನ ಥ್ರೋದಿಂದ ಅಂಪಾಯರ್ ಗೆ ಬಿತ್ತು ಜೋರಾದ ಪೆಟ್ಟು; ಸಿಟ್ಟಿನಿಂದ ಎಸೆದರು ಬೌಲ್ ನ ಜರ್ಸಿ!
ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಣ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ನ್ಯೂಜಿಲೆಂಡ್ ತಂಡ 79 ರನ್ ಗಳಿಂದ ಸೋಲಿಸಿ ಪ್ರಸ್ತುತ ಸಿರೀಸ್ ನಲ್ಲಿ ತನ್ನನ್ನು 1-1 ಸಮನಾದ ಅಂತರದಲ್ಲಿ ತಂದು ನಿಲ್ಲಿಸಿದೆ. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಮೊದಲ ಬ್ಯಾಟಿಂಗ್ ಮಾಡಿ 261 ರನ್ಗಳ ಗುರಿಯನ್ನು ಪಾಕಿಸ್ತಾನಕ್ಕೆ ನೀಡಿತು. ಈ ಆಟದಲ್ಲಿ ನ್ಯೂಜಿಲೆಂಡ್ ನ ಡೆವಾನ್ ಕೋನವೇ 101 ರನ್ಗಳ ಅದ್ಭುತ ಆಟವನ್ನು ಪ್ರದರ್ಶಿಸಿದರು. ತದನಂತರ ಪಾಕಿಸ್ತಾನ ತಂಡಕ್ಕೆ ಕೇವಲ 182 ರನ್ ಗಳಿಸಲಷ್ಟೇ ಸಾಧ್ಯವಾಯಿತು.
ಈ ಪಂದ್ಯದಲ್ಲಿ ನಡೆದ ಒಂದು ಘಟನೆ ಮಾತ್ರ ಎಲ್ಲರ ಗಮನ ತನ್ನಡೆಗೆ ಸೆಳೆಯಿತು. ನ್ಯೂಜಿಲೆಂಡ್ ನ ಬ್ಯಾಟಿಂಗ್ ಸಂದರ್ಭದಲ್ಲಿ ಪಾಕಿಸ್ತಾನದ ಆಟಗಾರ ಎಸೆದ ಥ್ರೋ ಅಂಪಾಯರ್ ಅಲಿಂ ದಾರ್ ಅವರಿಗೆ ಜೋರಾಗಿ ತಗುಲಿತು. ಇದರಿಂದ ಅಲೀಮ್ ದಾರ್ ತಮ್ಮ ಮಾನಸಿಕ ಸಂತುಲನ ಕಳೆದುಕೊಂಡರು ಮತ್ತು ತಮ್ಮ ಕೈಯಲ್ಲಿದ್ದ ಬೌಲರ್ ನ ಜರ್ಸಿಯನ್ನು ಜೋರಾಗಿ ನೆಲಕ್ಕೆ ಎಸೆದರು.
ನೋಡಿ ಈ ವಿಡಿಯೋ…
View this post on Instagram
ಸಾಮಾನ್ಯವಾಗಿ ಕ್ರಿಕೆಟ್ ಮೈದಾನದಲ್ಲಿ ಆಟಗಾರರು ಸಿಟ್ಟಿನಿಂದ ವರ್ತಿಸುವುದನ್ನು ನೋಡುತ್ತೇವೆ. ಮತ್ತು ಈ ಸಿಟ್ಟಿನಿಂದ ವರ್ತಿಸುವ ಆಟಗಾರರನ್ನು ಸಮಾಧಾನ ಪಡಿಸುವ ಕೆಲಸ ಅಂಪಾಯರ್ಸ್ ಗಳು ಮಾಡುತ್ತಿರುತ್ತಾರೆ. ಆದರೆ ಇಲ್ಲಿ ಮಾತ್ರ ಆಟಗಾರರಿಗೆ ಅಂಪಾಯರ್ ನ ಸಿಟ್ಟು ಶಾಂತ ಮಾಡಬೇಕಾಯಿತು.
36ನೇ ಒವರ್ನಲ್ಲಿ ಹ್ಯಾರಿಸ್ ರೌಫ್ ಅವರು ಎಸೆದ ಬಾಲಿಗೆ ಗ್ರೀನ್ ಫಿಲಿಪ್ಸ್ ಡೀಪ್ ಸ್ಕ್ವೇರ್ ಲೆಗ್ ಗೆ ಬಾರಿಸಿದ ಚೆಂಡು ಮೊಹಮ್ಮದ್ ವಸೀಮ್ ಅವರು ಫೀಲ್ಡ್ ಮಾಡಿ ಎಸೆದಾಗ ಆ ಚಂಡು ನೇರ ಅಂಪಾಯರ್ ಆದ ಅಲೀಮ್ ದಾರ್ ಅವರ ಕಾಲಿಗೆ ಜೋರಾಗಿ ಬಡಿಯಿತು. ತದನಂತರ ಅಲೀಮ್ ದಾರ್ ಅವರು ನೋವನ್ನು ತಾಳಲಾಗದೆ ಬೌಲರ್ ನ ಟಿ-ಶರ್ಟ್ ಸಿಟ್ಟಿನಿಂದ ನೆಲಕ್ಕೆ ಬೀಸಿ ಒಗೆದರು. ಆನಂತರ ಮಾತ್ರ ಪಾಕಿಸ್ತಾನದ ಆಟಗಾರರು ಅಂಪೈರ್ ಅವರ ಸಿಟ್ಟನ್ನು ನೋಡಿ ಶಮನಗೊಳಿಸಲು ಯತ್ನಿಸಿದರು.