ಅರಿಶಿನ ಶಾಸ್ತ್ರದಲ್ಲಿ ಮದುಮಗಳು ಮಾಡಿದಳು ಸ್ವಲ್ಪ ಫ್ರೀ ಆಗಿಯೇ ಡ್ಯಾನ್ಸ್! ನೋಡಿ ಈ ವಿಡಿಯೋದಲ್ಲಿ…
ಮದುವೆಯ ಮನೆ ಎಂದರೆ ಅಲ್ಲಿ ದೊಡ್ಡ ಹಬ್ಬದ ವಾತಾವರಣವೇ ಸೃಷ್ಟಿಯಾಗಿರುತ್ತದೆ. ಕಾರಣ ನಮ್ಮ ಭಾರತದಲ್ಲಿ ಮದುವೆಗೆ ತುಂಬಾ ಮಹತ್ವದ ಸ್ಥಾನ ನೀಡಲಾಗಿದೆ. ಮದುವೆಯಿಂದಾಗಿ ಎರಡು ಜೀವಗಳು ಕೊನೆಯವರೆಗೂ ಒಂದಾಗಿ ಬಿಡುತ್ತವೆ. ಮತ್ತು ಸುಖ ದುಃಖಗಳಲ್ಲಿ ಜೀವನವಿಡೀ ಒಬ್ಬರಿಗೊಬ್ಬರು ಸಂಗಾತಿಯಾಗಿರುತ್ತಾರೆ. ಇತ್ತೀಚೆಗಂತೂ ಮದುವೆಯ ಕಾರ್ಯಕ್ರಮದಲ್ಲಿ ಎಲ್ಲರೂ ಡ್ಯಾನ್ಸ್ ಮಾಡುವದು ಒಂದು ಪ್ಯಾಶನ್ ಮತ್ತು ವಾಡಿಕೆಯಾಗಿ ಬಿಟ್ಟಿದೆ.
ಮೊದಮೊದಲಂತೂ ಮದುಮಕ್ಕಳಿಗೆ ಬಿಟ್ಟು ಎಲ್ಲರೂ ಕುಣಿಯುತ್ತಿದ್ದರು. ಆದರೆ ಈಗ ಹೊಸ ಟ್ರೆಂಡ್ ಪ್ರಕಾರ ಮದುಮಕ್ಕಳೇ ತಮ್ಮ ಮದುವೆಯಲ್ಲಿ ಮೊದಲು ಡ್ಯಾನ್ಸ್ ಮಾಡಲು ತಯಾರಾಗುತ್ತಾರೆ. ಈಗ ಮದುವೆಯ ಮೊದಲು ನಡೆಯುವ ಮುಖ್ಯವಾದ ಕಾರ್ಯಕ್ರಮ ಅರಿಶಿಣ ಶಾಸ್ತ್ರ. ಈ ಅರಿಶಿಣ ಶಾಸ್ತ್ರದಲ್ಲಿ ಮದುಮಗಳು ಕುಣಿದ ವಿಡಿಯೋ ಒಂದು ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಪ್ರಸ್ತುತ ವಿಡಿಯೋದಲ್ಲಿ ಮದುಮಗಳೇ ತುಂಬಾ ಫ್ರೀಯಾಗಿ ಮತ್ತು ಬಿಂದಾಸಾಗಿ ಡಾನ್ಸ್ ಮಾಡುತ್ತಿರುವದು ಕಂಡುಬರುತ್ತದೆ. ಡ್ಯಾನ್ಸ್ ಮಾಡುವಾಗ ಮದುಮಗಳು ಪ್ರೊಫೆಷನಲ್ ಡ್ಯಾನ್ಸರ್ ಎಂದು ತಿಳಿದುಬರುತ್ತದೆ. ಅಷ್ಟೊಂದು ನೀಟಾಗಿ ಯಾವುದೇ ಆತಂಕವಿಲ್ಲದೆ ಡಾನ್ಸ್ ಪ್ರೆಸೆಂಟ್ ಮಾಡಿದ್ದಾಳೆ. ಪ್ರಸ್ತುತ ಡ್ಯಾನ್ಸ್ ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗಿದೆ. ಸದ್ಯ ಈ ವಿಡಿಯೋ ತುಂಬಾ ವೈರಲ್ ಆಗುತ್ತಿರುವುದರಿಂದ ನಿಮ್ಮ ಮುಂದೆ ಇದನ್ನು ತಂದಿದ್ದೇವೆ.
ನೋಡಿ ಮದುಮಗಳ ಈ ಸುಂದರ ಡಾನ್ಸ್…
View this post on Instagram
ಪ್ರಸ್ತುತ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಪ್ಲ್ಯಾಟ್ ಫಾರ್ಮ್ ಆದ instagram ನಲ್ಲಿ kuki0130 ಹೆಸರಿನಿಂದ ಶೇರ್ ಮಾಡಲಾಗಿದೆ. ನೇಟಿಜನ್ಸ್ ಗಳು ಈ ವಿಡಿಯೋವನ್ನು ತುಂಬಾ ಇಷ್ಟಪಟ್ಟಿದ್ದಾರೆ. ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ ಹತ್ತು ಮಿಲಿಯನ್ ಗಿಂತಲೂ ಹೆಚ್ಚು ವೀಕ್ಷಣೆ ಪಡೆದಿದೆ. ಸಾಕಷ್ಟು ನೆಟ್ಟಿಗರು ಕಮೆಂಟ್ ಸಹಿತ ಮಾಡಿದ್ದಾರೆ. ಅಲ್ಲದೆ ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ನೆಟ್ಟಿಗರು ಲೈಕ್ಸ್ ಮಾಡಿದ್ದಾರೆ.