ತನ್ನ ಜೊತೆ ಮರಿಗಳನ್ನೂ ಸಹ ಹಾವಿನಿಂದ ರಕ್ಷಿಸಿಕೊಳ್ಳಲು ಈ ಪುಟ್ಟ ಹಕ್ಕಿಯ ಗೂಡಿನ ಇಂಜಿನಿಯರಿಂಗ್ ಪ್ಲಾನ್ ನೋಡಿ! ಸೂಪರ್…
ಜಗತ್ತು ವಿಸ್ಮಯಗಳ ಗೂಡಾಗಿದೆ. ಇಲ್ಲಿ ಬದುಕುವ ಪ್ರತಿಯೊಂದು ಜೀವಿಯಲ್ಲಿ ಒಂದೊಂದು ಆಶ್ಚರ್ಯ, ಕಲೆ ಅಡಗಿದೆ. ಅವುಗಳನ್ನು ಸಮೀಪದಿಂದ ವೀಕ್ಷಿಸಿದಾಗ ನಿಜಕ್ಕೂ ಆಶ್ಚರ್ಯವಾಗುತ್ತದೆ. ಸದ್ಯ ನಿಮ್ಮನ್ನು ಬೆರಗುಗೊಳಿಸುವ ಹಕ್ಕಿಯ ಗುಡೊಂದು ಇಲ್ಲಿ ನೋಡಬಹುದು.
ಈ ವಿಡಿಯೋದಲ್ಲಿ ಪುಟ್ಟ ಹಕ್ಕಿಯು ತನ್ನ ಗೂಡಿನಲ್ಲಿ ಹೋಗುತ್ತಿರುವದನ್ನು ಮತ್ತು ಬರುತ್ತಿರುವುದನ್ನು ನೋಡಬಹುದು. ಗಮನವಹಿಸಿ ನೋಡಿದಾಗ ಈ ಗೂಡಿನಲ್ಲಿ ಒಂದು ಅದ್ಭುತ ಕಂಡುಬರುತ್ತದೆ. ಅದೇನೆಂದರೆ ಈ ಗೂಡಿನಲ್ಲಿ ಎರಡು ಪಾರ್ಟಿಶನ್ ಗಳನ್ನು ಮಾಡಿದೆ. ಇವೆರಡು ಸಂಪೂರ್ಣವಾಗಿ ಬೇರೆ ಬೇರೆಯಾಗಿವೆ. ಈ ಎರಡು ಕಂಪಾರ್ಟ್ಮೆಂಟ್ ಗಳಿಗೆ ಹೋಗಲು ಒಂದೇ ಸ್ಥಳದಲ್ಲಿ ಎರಡು ಬಾಗಿಲುಗಳಿವೆ. ತಾನು ಹಾಗೂ ತನ್ನ ಮರಿಗಳನ್ನು ರಕ್ಷಿಸಿಕೊಳ್ಳಲು ರಹಸ್ಯವಾದ ಕಂಪಾರ್ಟ್ಮೆಂಟ್ ನ ಬಾಗಿಲನ್ನು ಮುಚ್ಚಲು ಬರುವ ಹಾಗೆ ವ್ಯವಸ್ಥೆ ಮಾಡಿಕೊಂಡಿದೆ. ಒಂದು ಕೆಳಗಿನ ಬಾಗಿಲು ಸದಾ ತೆರೆದಿರುವಂತೆ ವ್ಯವಸ್ಥೆ ಮಾಡಿ ಕೊಂಡಿದೆ. ಈ ಭಾಗದಲ್ಲಿ ತನ್ನ ಮರಿಗಳನ್ನು ಅದು ಇಡುವುದೇ ಇಲ್ಲ. ಹಾವು ಅಲ್ಲಿ ಅಟ್ಯಾಕ್ ಮಾಡಿದರೂ ಅದಕ್ಕೆ ಅಲ್ಲಿ ಏನು ಸಿಗುವುದಿಲ್ಲ. ಸುರಕ್ಷಿತ ಭಾಗಕ್ಕೆ ಹೋಗಲು ಅದರ ಬಾಗಿಲು ಮೇಲಿನ ಬದಿಯಲ್ಲಿ ಇಟ್ಟಿರುತ್ತದೆ. ತಾನು ಒಳಗೆ ಹೋಗುವಾಗ ಅದನ್ನು ತನ್ನ ಚುಂಚಿನಿಂದ ಕೆಳಗಿನ ಬದಿಗೆ ಸರಿಸಿ ಓಪನ್ ಮಾಡಿ ಒಳಗೆ ಹೋಗುತ್ತದೆ. ನಂತರ ಮತ್ತೆ ವಾಪಸ್ ಬರುವಾಗ ಆ ಬಾಗಿಲನ್ನು ತುಂಬಾ ಚೆನ್ನಾಗಿ ತನ್ನ ಚುಂಚಿನಿಂದಲೇ ಈ ಹಕ್ಕಿಯು ಮುಚ್ಚುತ್ತದೆ. ಅದು ಹೀಗೆ ಮಾಡಲು ಮುಖ್ಯ ಕಾರಣವೇನೆಂದು ಗೊತ್ತಾ?
ಹಕ್ಕಿಗಳಿಗೆ ಹೆಚ್ಚಾಗಿ ಹಾವಿನ ಭಯವಿರುತ್ತದೆ. ಹಾವು ಗೂಡಿನೊಳಗೆ ನುಗ್ಗಿ ಅಲ್ಲಿರುವ ಹಕ್ಕಿಯನ್ನು ಅಥವಾ ಪುಟ್ಟ ಮರಿಗಳನ್ನು ತಿನ್ನುವ ಪ್ರಯತ್ನ ಮಾಡುತ್ತಿರುತ್ತದೆ. ಇದರಿಂದ ರಕ್ಷಿಸಿಕೊಳ್ಳಲು ಜಾಣ ಹಕ್ಕಿ ತನ್ನ ಮನೆಯನ್ನು ತುಂಬಾ ಬುದ್ಧಿವಂತಿಕೆಯಿಂದ ಇಂಜಿನಿಯರ್ ಮೈಂಡ್ ನಿಂದ ಕಟ್ಟಿಕೊಳ್ಳುತ್ತದೆ.
ಮೊದಲು ನೋಡಿ ಸೂಪರ್ ವಿಡಿಯೋ…
View this post on Instagram
ಈ ಸುಂದರವಾದ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಪ್ಲ್ಯಾಟ್ ಫಾರ್ಮ್ ಆದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು akash_bhondwe_patil1881 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ನೆಟ್ಟಿಗರಿಗೆ ತುಂಬಾ ಇಷ್ಟವಾದಂತೆ ಕಾಣುತ್ತದೆ. ಪ್ರಸ್ತುತ ವಿಡಿಯೋವನ್ನು 3.3 ಮಿಲಿಯನ್ ಜನರು ನೋಡಿದ್ದಲ್ಲದೆ ಲಕ್ಷಾವಧಿ ಜನರು ಲೈಕ್ ಮಾಡಿದ್ದಾರೆ.