ಈ ಘಳಿಗೆ ಬಾರದು ಮತ್ತೆ; ಪುಟ್ಟನ ಬೂದಿಯಲ್ಲಿಯ ಈ ಆಟ ನೆನಪಿಸಿತು ಪ್ರತಿಯೊಬ್ಬರ ಚಿಕ್ಕಂದಿನ ಆ ಮುದ್ದು ದಿನಗಳನ್ನು…
ಪುಟ್ಟ ಮಕ್ಕಳ ಆಟವೇ ಅದ್ಭುತವಾಗಿರುತ್ತದೆ. ಈ ಆಟ ಯಾರಿಗೂ ಬೇಸರಿಸದೆ ನೀಡುತ್ತದೆ ಅದ್ಭುತ ಅವರ್ಣನೀಯ ಖುಷಿಯನ್ನು. ಅವರ ಈ ಮುದ್ದಾದ ಆಟವನ್ನು ಶಬ್ದಗಳಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ, ಅಲ್ವಾ?
ಸದ್ಯ ಪುಟ್ಟನ ಮುದ್ದಾದ ವಿಡಿಯೋ ಒಂದನ್ನು ನೀವಿಲ್ಲಿ ನೋಡಬಹುದು. ಪ್ರಸ್ತುತ ಈ ವಿಡಿಯೋದಲ್ಲಿಯ ದೃಶ್ಯವನ್ನು ನೋಡಿದಾಗ ಎಲ್ಲರಿಗೂ ತಮ್ಮ ಚಿಕ್ಕಂದಿನ ದಿನಗಳು ನೆನಪಿಗೆ ಬರುತ್ತವೆ, ಅಥವಾ ತಮ್ಮ ಮಕ್ಕಳ ಚಿಕ್ಕಂದಿನ ತುಂಟಾಟ ನೆನಪಿಗೆ ಬಂದೇ ಬರುತ್ತದೆ. ಇಲ್ಲಿ ಮಗು ಸ್ವಚ್ಚಂದವಾಗಿ ಬೂದಿಯಲ್ಲಿ ಮಿಂದು ಆಡುತ್ತಿದ್ದಾನೆ. ಸದ್ಯಕ್ಕೆ ಆತನ ಈ ಜಗತ್ತಿನಲ್ಲಿ ತನ್ನನ್ನು ಕಂಟ್ರೋಲ್ ಮಾಡುವವರು ಯಾರು ಇಲ್ಲವೆಂದೇ ತಿಳಿದುಕೊಂಡು ಮುಕ್ತವಾಗಿ ಮಣ್ಣೆರೆಚಿಕೊಳ್ಳುತ್ತಿದೆ ಈ ಮಗು. ಈ ದೃಶ್ಯ ಮಕ್ಕಳನ್ನು ಇಷ್ಟಪಡುವ ಪ್ರತಿಯೊಬ್ಬನಿಗೂ ಸಂತೋಷ ನೀಡುತ್ತದೆ. ಹುಡುಗ ಸಂಪೂರ್ಣವಾಗಿ ತನ್ನ ಆಟದಲ್ಲಿ ತಲ್ಲಿನವಾಗಿ ಆಡುತ್ತಿದ್ದಾನೆ ಎನ್ನುವಷ್ಟರಲ್ಲಿ ಹೈಕಮಾಂಡ್ ಅವರ ಎಂಟ್ರಿ ಆಗುತ್ತದೆ, ಎರಡೇಟು ಬೆನ್ನ ಮೇಲೆ ಬಿದ್ದಾಗ ವಾಸ್ತವ ಜಗತ್ತಿಗೆ ಮರಳುತ್ತಾನೆ ಅದು ಅಳುತ್ತಾ. ಸ್ವಾತಂತ್ರ್ಯ ಕ್ಷಣದಲ್ಲಿ ಕಳೆದುಕೊಂಡು ಬಿಡುತ್ತಾನೆ.
ನೋಡಿ ಸುಂದರವಾದ ವಿಡಿಯೋ ದೃಶ್ಯ…
View this post on Instagram
ಪ್ರಸ್ತುತ ಈ ಮುಗ್ಧ ಮಗುವಿನ ಮನಸೂರೆಗೊಳ್ಳುವ ಮುದ್ದಾದ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಮಿಲಿಯನ್ ಸಂಖ್ಯೆಯಲ್ಲಿ ವೀಕ್ಷಣೆಯನ್ನು ಪಡೆದಿದೆ. ಈ ವಿಡಿಯೋ ಸುಮಾರು ಲಕ್ಷಗಳ ಸಂಖ್ಯೆಯಲ್ಲಿ ಮೆಚ್ಚುಗೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.