Video; ಮನೆಯ ಗೇಟ್ ದಾಟಿ ಹೊರಗೆ ಹೋಗಲು ಎರಡೂ ನಾಯಿಗಳು ಕೂಡಿ ಮಾಡಿದ ಯಶಸ್ವಿ ಪ್ಲಾನ್..! ನೋಡಿ ತಮಾಷೆ.

ಜಗತ್ತಿನ ಪ್ರತಿಯೊಂದು ಜೀವಿಗೂ ಮುಕ್ತವಾಗಿರಬೇಕೆಂದೆನಿಸುತ್ತದೆ. ಯಾವ ಜೀವಿಗೂ ಯಾರ ಕೈಗೊಂಬೆಯಾಗಿ ಅಥವಾ ಯಾರ ಅಡಿಯಲ್ಲಿ ಬಂಧಿಯಾಗಿ ಇರಬೇಕು ಎನಿಸುವದೇ ಇಲ್ಲ. ಮನುಷ್ಯ ಬುದ್ಧಿಶಕ್ತಿಯಿಂದ ಅನೇಕ ಪ್ರಾಣಿಗಳನ್ನು ತನ್ನ ಕೈಗೊಂಬೆಯನ್ನಾಗಿ ಮಾಡಿಕೊಂಡಿದ್ದಾನೆ.

ಮನುಷ್ಯನು ಸತತವಾಗಿ ಮನೆಯಲ್ಲಿಯೇ ಕೂಡಿ ಹಾಕಿದ ಎರಡು ನಾಯಿಗಳು ಹೊರಗೆ ಹೋಗಲು ಹೋರಾಟ ಮಾಡುತ್ತಿರುವ ದೃಶ್ಯವೊಂದು ಇಲ್ಲಿ ನೋಡಬಹುದಾಗಿದೆ. ಈ ಹೋರಾಟ ಅವು ಯಾವ ಪ್ರಕಾರವಾಗಿ ಮಾಡಿ ಅದರಲ್ಲಿ ಯಶಸ್ವಿಯಾಗಿವೆ ಬನ್ನಿ ನೋಡೋಣ.

ಪ್ರಸ್ತುತ ಈ ವಿಡಿಯೋದಲ್ಲಿ ಎರಡು ನಾಯಿಗಳು ಹೊರಗೆ ಮುಕ್ತವಾಗಿ ತಿರುಗಾಡಲು ಬಯಸಿವೆ. ಆದರೆ ಅವುಗಳಿಗೆ ಮಾಲೀಕನ ಗ್ರಿಲ್ ಗೇಟ್ ಅಡ್ಡಿಯಾಗಿದೆ. ಆದರೂ ಈ ನಾಯಿಗಳು ಹೊರಗೆ ಹೋಗುವ ಹಂಬಲಕ್ಕಾಗಿ ಒಂದು ಐಡಿಯಾ ವರ್ಕೌಟ್ ಮಾಡಿಯೇ ಬಿಡುತ್ತವೆ ಮತ್ತು ಅದರಲ್ಲಿ ಯಶಸ್ವಿಯಾದ ನಂತರ ಆ ಎರಡೂ ನಾಯಿಗಳು ತುಂಬಾ ಸಂತೋಷದಿಂದ ಜೊತೆಯಾಗಿ ಓಡಿ ಹೋಗುವ ದೃಶ್ಯ ಇಲ್ಲಿ ನೋಡಬಹುದು.

ನೋಡಿ ಈ ಸುಂದರ ವಿಡಿಯೋ…

 

View this post on Instagram

 

A post shared by Animal (@animalbeastmaster)

ಪ್ರಸ್ತುತ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ‘ಅನಿಮಲ್ ಬೀಸ್ಟ್ ಮಾಸ್ಟರ್’ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ 2.8 ಮಿಲಿಯನ್ ವೀಕ್ಷಣೆಯನ್ನು ಪಡೆದಿದ್ದು ಸುಮಾರು 60,000 ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.