ಫುಲ್ ಎಂಟರ್ಟೈನ್ ಮೆಂಟ್; ಇದ್ದರೆ ಗೆಳೆಯ ಹೀಗಿರಬೇಕು! ಪತ್ನಿಯ ಮುಂದೆ ಬಚಾವ್ ಮಾಡಿದ ಗೆಳೆಯನ ಕೌಶಲ್ಯ ನೋಡಿ ಬೀಗಿದ ಗಂಡ.

ಕೆಲವು ಪತ್ನಿಯರು ತಮ್ಮ ಪತಿಯ ಮೇಲೆ ಸದಾ ಸಂಶಯವನ್ನು ತೆಗೆದುಕೊಳ್ಳುವ ವೃತ್ತಿಯವರಾಗಿರುತ್ತಾರೆ. ಇದಕ್ಕಾಗಿ ಗಂಡನೂ ಸಹ ಹೆಂಡತಿ ತನ್ನ ಮೇಲೆ ಯಾವತ್ತೂ ಸಂಶಯ ಪಡಬಾರದೆಂದು ಏನಾದರೂ ವ್ಯವಸ್ಥೆ ಮಾಡಿಕೊಂಡಿರುತ್ತಾನೆ. ಇಷ್ಟಾದರೂ ಪತ್ನಿ ಕೇಳಬೇಕಲ್ಲ? ಆಕೆಯಲ್ಲಿಯ ಪತ್ತೇದಾರಿ ಹಾಗೆಯೇ ಚಾಲೂ ಇರುತ್ತದೆ. ಇಂಥದ್ದೇ ಒಂದು ಸಂದರ್ಭದ ಸುಂದರ ವಿಡಿಯೋ ನಿಮಗಾಗಿ ಇಲ್ಲಿ ತಂದಿದ್ದೇವೆ, ಪ್ರಸ್ತುತ ವಿಡಿಯೋ ನಿಮಗೂ ಇಷ್ಟವಾಗಬಹುದು ಎಂಬ ಅನಿಸಿಕೆ ನಮ್ಮದು.

ವಿಡಿಯೋದಲ್ಲಿ ಪತ್ನಿ ತನ್ನ ಗಂಡನ ಸ್ನೇಹಿತನಿಗೆ ಕಾಲ್ ಮಾಡಿ, ‘ಇವರು (ಗಂಡ) ನಿಮ್ಮ ಜೊತೆಗೆ ಇದ್ದಾರಾ?’ ಎಂದು ಕೇಳುತ್ತಾಳೆ. ಆಗ ಗಂಡನ ಸ್ನೇಹಿತ ತುಂಬಾ ಸಹಜವಾಗಿ ಹಾ, ಹಾ, ಹೌದು ನಮ್ಮ ಜೊತೆಯೆ ಇದ್ದಾನೆ ಎನ್ನುತ್ತಾನೆ. ಆಗ ಪತ್ನಿ ಸರಿ ಹಾಗಾದರೆ ನನ್ನ ಜೊತೆ ಮಾತನಾಡಿಸು ಎನ್ನುತ್ತಾಳೆ. ಆಗ ಮಿತ್ರ ಆತ ನನ್ನ ಜೊತೆಯೇ ಇದ್ದಾನೆ, ಆದರೆ ಸ್ವಲ್ಪ ದೂರದಲ್ಲಿದ್ದಾನೆ, ಸ್ವಲ್ಪೇ ಸಮಯದಲ್ಲಿ ನಾನು ನಿಮ್ಮ ಜೊತೆಗೆ ಮಾತನಾಡಿಸುತ್ತೇನೆ ಎನ್ನುತ್ತಾನೆ. ಆಗ ಪತ್ನಿ ಕುಹಕದಿಂದ ಆಯ್ತು ಆಯ್ತು ಮಾತನಾಡಿಸು ಎನ್ನುತ್ತಾಳೆ. ಕಾರಣ ಆಕೆಯ ಗಂಡ ಎಲ್ಲೂ ಇರಾದೆ ಆಕೆಯ ಮುಂದೆಯೇ ಮುಖ ಜೋತುಬಿಟ್ಟು ನಿಂತಿರುತ್ತಾನೆ.

ಆಗ….ಪತ್ನಿ ಗಂಡನಿಗೆ ಕೇಳುತ್ತಾಳೆ, ನೀನು ನಿನ್ನ ಮಿತ್ರರಿಗೆಲ್ಲ ಸುಳ್ಳು ಹೇಳಲು ಕಲಿಸಿದ್ದಿಯಲ್ಲ, ಯಾರಿಗೆ ಕೇಳಿದರೂ ಇಲ್ಲೇ ಇದ್ದಾನೆ, ನನ್ನ ಜೊತೆಯಲ್ಲಿಯೇ ಇದ್ದಾನೆ ಎಂದು ಹೇಳಲು ಹೇಳಿದ್ದಿಯಲ್ಲ ಎಂದು ರೋಬ್ ಹಾಕುತ್ತಾಳೆ. ಅಷ್ಟರಲ್ಲಿ ಮಿತ್ರನ ಫೋನ್ ಪತ್ನಿಗೆ ಬಂದೇ ಬಿಡುತ್ತದೆ….

ಈಗ ನೋಡಿ ಸ್ಟೋರಿಯಲ್ಲಿಯ ಸೂಪರ್ ಟ್ವಿಸ್ಟ್…ಮತ್ತು ಗಂಡನ ಮುಖ ಗಮನವಿಟ್ಟು ನೋಡಿ…ಅದೇನು ಖುಷಿ, ಅಭಿಮಾನ, ಗೆಲುವು ಎಲ್ಲವೂ ಏಕಕಾಲಕ್ಕೆ ಎದ್ದು ಕಾಣುತ್ತಿದೆ ಮುಖದ ಮೇಲೆ.

ವೀಡಿಯೋ ನೋಡಿ.

ಈ ತಮಾಷೆ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಪ್ರಸ್ತುತ ಈ ವಿಡಿಯೋ ನೆಟ್ಟಿಗರಿಗೆ ತುಂಬಾ ಇಷ್ಟವಾಗುತ್ತಿದೆ.