ಬೆಕ್ಕು ಪಾರಿವಾಳದ ಬೇಟೆಯಾಡಲು ಹಾಕಿತು ಹೊಂಚು! ಮರುಕ್ಷಣವೇ ಅಲ್ಲಿ ಕಂಡು ಬಂದ ದೃಶ್ಯ ನಿಮ್ಮನ್ನೂ ಮಂತ್ರಮುಗ್ಧ ಮಾಡುತ್ತದೆ.
ಸೋಶಿಯಲ್ ಮೀಡಿಯಾದಲ್ಲಿ ಕೆಲವೊಮ್ಮೆ ರೋಮಾಂಚನಗೊಳ್ಳುವ ವಿಶೇಷ ವಿಡಿಯೋಗಳು ನೋಡಲು ಸಿಗುತ್ತವೆ. ಇಲ್ಲಿಯ ಅದ್ಭುತ, ಆಶ್ಚರ್ಯ ನೋಡಿ ಯೂಸರ್ ಬೆರಗಾಗುತ್ತಾನೆ. ಸದ್ಯ ಇದೇ ರೀತಿಯ ಒಂದು ವಿಡಿಯೋ ಇಲ್ಲಿ ನೋಡಿ.
ಈ ವಿಡಿಯೋದಲ್ಲಿ ಟೆರೇಸ್ ಮೇಲೆ ಬೆಕ್ಕೊಂದು ಸಖತ್ ಬೇಟೆಯಾಡುವ ಮೂಡ್ನಲ್ಲಿ ಕಂಡುಬರುತ್ತವೆ. ಅದರ ಎದುರಿಗೆ ಶ್ವೇತ ವರ್ಣದ ಚಂದದ ಪಾರಿವಾಳ ಒಂದು ಕುಳಿತಿದೆ. ವಿಡಿಯೋ ನೋಡುವಾಗ ಇನ್ನೇನು ಬೆಕ್ಕು ಕ್ಷಣಾರ್ಥದಲ್ಲಿ ಈ ಸುಂದರವಾದ ಪಾರಿವಾಳವನ್ನು ಹಿಡಿದು ಮುಗಿಸಿಯೇ ಬಿಡುತ್ತದೆ ಎಂದು ಕೆಲವರಿಗೆ ಅನಿಸಿದರೆ ಇನ್ನೂ ಕೆಲವರಿಗೆ ಬೆಕ್ಕಿನ ಪ್ರಯತ್ನಕ್ಕೆ ಪಾರಿವಾಳವು ಸಿಗದೆ ಕ್ಷಣದಲ್ಲಿ ಹಾರಿ ಹೋಗುತ್ತದೆ ಎಂದೆನಿಸುತ್ತದೆ. ಆದರೆ ಮೇಲಿನ ಎರಡು ಪ್ರಕಾರಗಳು ನೋಡಲು ಸಿಗುವುದಿಲ್ಲ. ಬದಲಾಗಿ ಅಚ್ಚರಿಯ ದೃಶ್ಯವೊಂದು ನೋಡಲು ಸಿಗುತ್ತದೆ.
ಈ ವಿಡಿಯೋದಲ್ಲಿ ನಾವೊಂದುಕೊಂಡಂತೆ ಅದ್ಯಾವುದೂ ನಡೆಯುವುದಿಲ್ಲ. ಬದಲಾಗಿ ನಮ್ಮ ವಿಚಾರಕ್ಕೆ ವಿಪರೀತವಾದ ವಿರುದ್ಧ ದೃಶ್ಯ ಕಂಡುಬರುತ್ತದೆ. ಹೊಂಚು ಹಾಕಿ ಓಡಿದ ಬೆಕ್ಕು ಪಾರಿವಾಳದ ಹತ್ತಿರ ಹೋಗಿ ಅದರ ಮುಖಕ್ಕೆ ಮುದ್ದಾದ ಮತ್ತೊಂದು ನೀಡುತ್ತದೆ.
ನೋಡಿ ಈ ವಿಶೇಷವಾದ ಸುಂದರ ವಿಡಿಯೋ…
View this post on Instagram
ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ royal _baisa_0101 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಮಿಲಿಯನ್ ಸಂಖ್ಯೆಯಲ್ಲಿ ವೀಕ್ಷಿಸಲಾಗಿದ್ದು ಲಕ್ಷಾವಧಿ ನೆಟ್ಟಿಗರು ಈ ವಿಡಿಯೋಗೆ ಲೈಕ್ ಮಾಡಿದ್ದಾರೆ.