ಮಕ್ಕಳ ಆಟಿಕೆಯ ಮೇಲೆ ಮಹಿಳೆ ತನ್ನ ಮಗುವನ್ನು ಹಿಡಿದುಕೊಂಡು ಜಾರಲು ಹೋದಳು, ಮಗುವಿನ ಜೊತೆಗೆ ಮಹಿಳೆ ಸಹ ಔಟ್ ಆಫ್ ಕಂಟ್ರೋಲ್!!!
ಸೋಶಿಯಲ್ ಮೀಡಿಯಾದಲ್ಲಿ ನಿಮಗೆ ಎಲ್ಲಾ ಸಂಬಂಧಗಳಿಗೆ ಸಂಬಂಧಿಸಿದ ವಿಡಿಯೋಗಳು ನೋಡಲು ಸಿಗುತ್ತವೆ. ಒಮ್ಮೆ ತಾಯಿ-ಮಗಳ, ತಂದೆ-ಮಗನ, ಸಹೋದರ-ಸಹೋದರಿಯರ, ಪತಿ-ಪತ್ನಿಯ, ತಂದೆ-ಮಗಳ ಅಷ್ಟೇ ಏಕೆ ಗುರು–ಶಿಷ್ಯರ ವಿಡಿಯೋಗಳು ಸಹ ನೋಡಲು ಸಿಗುತ್ತವೆ.
ಈ ರೀತಿ ಸಂಬಂಧಗಳಿಗೆ ಸಂಬಂಧಿಸಿದ ವೀಡಿಯೊಗಳನ್ನು ನೋಡಲು ನೇಟಿಜನ್ಸ್ ಗಳು ತುಂಬಾ ಇಷ್ಟ ಪಡುತ್ತಾರೆ. ಅದಕ್ಕಾಗಿಯೇ ಈ ರೀತಿಯ ಕಂಟೆಂಟ್ ಗಳು ತುಂಬಾ ವೈರಲ್ ಆಗುತ್ತವೆ. ಈಗ ಇದೇ ರೀತಿಯ ಒಂದು ವಿಡಿಯೋ ನಿಮಗಾಗಿ ತಂದಿದ್ದೇವೆ. ಈ ವಿಡಿಯೋ ತುಂಬಾ ಫನ್ನಿ ಯಾಗಿದೆ. ಏಕೆಂದರೆ ಮಕ್ಕಳ ಜೊತೆಗೆ ತಾಯಿ ಸಹ ಆಟ ಆಡಲು ಹೋದಳು ಆದರೆ ಅದರ ಪರಿಣಾಮ ಆಗಿದ್ದು ಬೇರೇನೇ. ಇದನ್ನು ನೋಡಿದರೆ ನೀವು ಸಹ ಅನ್ನುವಿರಿ ಒಳ್ಳೆಯದಾಗಿದೇ ಅಂತ.
ಪ್ರಸ್ತುತ ವೈರಲ್ ಆಗುತ್ತಿರುವ ಈ ವೀಡಿಯೋದಲ್ಲಿ ನೀವು ನೋಡಬಹುದು, ಒಂದು ಮೈದಾನದಲ್ಲಿ ಮಕ್ಕಳ ಸಲುವಾಗಿ ಹವೆ ತುಂಬಿದ ಬಟ್ಟೆಯ ಜಾರು ಬಂಡೆಯ ಆಟಿಕೆಯನ್ನು ಇಟ್ಟಿರುತ್ತಾರೆ. ನೀವೆಲ್ಲ ನೋಡಿರಬಹುದು ಜಾತ್ರೆಯಲ್ಲಿ ಅದೇ ತರ ಇಲ್ಲಿ ಒಂದು ಆಟಿಕೆಯನ್ನು ಅಳವಡಿಸಿಲಾಗಿರುತ್ತದೆ. ಅದರಲ್ಲಿ ಕೆಲವು ಮಕ್ಕಳು ಜಿಗಿದಾಡುತ್ತ ಆಟ ಆಡುತ್ತಿರುತ್ತವೆ. ಆಗ ಒಬ್ಬ ಮಹಿಳೆ ತನ್ನ ಮಗುವಿನೊಂದಿಗೆ ಆಟ ಆಡಬೇಕೆಂದು ನಿರ್ಧರಿಸುತ್ತಾಳೆ. ಆದರೆ ಆ ಆಟಿಕೆಯ ಮಾಲೀಕ ಮೇಡಂ ನೀವು ಆಡಬೇಡಿ ಅಂತ ಎಷ್ಟೇ ಬೇಡಿಕೊಂಡರು ಸಹ ಆ ಮಹಿಳೆ ಕೇಳುವುದೇ ಇಲ್ಲ. ಕೊನೆಗೆ ತನ್ನ ಮಗುವನ್ನು ಎತ್ತಿಕೊಂಡು ಮೇಲಕ್ಕೆ ಹೋಗಿ ಇನ್ನೇನು ಜಾರು ಬೇಕು ಅಂತ ಮಗುವನ್ನು ಕಂಕುಳಲ್ಲಿ ಹಿಡಿದುಕೊಂಡು ಜಾರಲು ಶುರು ಮಾಡುತ್ತಾಳೆ. ಜಾರುತ್ತಿದ್ದ ಹಾಗೆ ಈ ಮಹಿಳೆಯ ಭಾರಕ್ಕೆ ಬಟ್ಟೆಯಲ್ಲಿಯ ಹವೆ ಒಮ್ಮೆಲೇ ಕೆಳಗೆ ಹೋಗುತ್ತದೆ. ಆಗ ಮಹಿಳೆ ಹಾಗೂ ಮಗು ಇಬ್ಬರು ಸಹ ನೇರವಾಗಿ ಆಟಿಕೆಯ ಮಗ್ಗುಲಲ್ಲಿ ದೊಪ್ಪನೆ ಕೆಳಗೆ ಬೀಳುತ್ತಾರೆ. ಅದಕ್ಕೆ ಅನ್ನೋದು ಮಕ್ಕಳ ಆಟ ಮಕ್ಕಳೇ ಆಡಬೇಕು, ದೊಡ್ಡವರು ಆಡಲು ಹೋದರೆ ಇದೆ ತರ ಫಜೀತಿ ಆಗುವದು ಅಂತ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ವೀಡಿಯೋ ನೋಡಿ .
View this post on Instagram
ಪ್ರಸ್ತುತ ವೈರಲ್ ಆಗುತ್ತಿರುವ ಈ ವೀಡಿಯೋ ಇನ್ಸ್ಟಾಗ್ರಾಮ್ ನಲ್ಲಿ kidsgettinghurt ಎಂಬ ಹೆಸರಿನ ಅಕೌಂಟ್ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವೀಡಿಯೋವನ್ನು ಸುಮಾರು ಒಂದು ಮಿಲಿಯನ್ ಕ್ಕಿಂತ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಈ ವಿಡಿಯೋವನ್ನು ಸುಮಾರು ನಲ್ವತ್ತು ಸಾವಿರಕ್ಕೂ ಹೆಚ್ಚು ನೆಟ್ಟಿಗರು ಲೈಕ್ ಸಹ ಮಾಡಿದ್ದಾರೆ