ಸೂಪರ್ ಹಿಟ್ ‘ಗದರ್’ ಚಿತ್ರದ ಡೈರೆಕ್ಟರ್ ಶೇರ್ ಮಾಡಿದರು ಅದ್ಭುತ ವಿಡಿಯೋ! ಈ ನಟಿಯ ಯೋಗ ಮತ್ತು ಡಾನ್ಸ್ ನೋಡಿ, ಅಮೇಜಿಂಗ್..!
ಜಗತ್ತಿನಲ್ಲಿ ಟ್ಯಾಲೆಂಟ್ ತುಂಬಿದ ವ್ಯಕ್ತಿಗಳಿಗೇನು ಕಡಿಮೆ ಇಲ್ಲ. ದೇಶದ ಪ್ರತಿಯೊಂದು ನಗರ, ಪಟ್ಟಣ, ಓಣಿಯಲ್ಲಿ ಆಶ್ಚರ್ಯ ಪಡುವಂತಹ ಟ್ಯಾಲೆಂಟ್ ನಿಂದ ಕೂಡಿದ ವ್ಯಕ್ತಿಗಳು ತುಂಬಿದ್ದಾರೆ. ಇಂಥವರಲ್ಲಿ ಕೆಲವರು ಇಡೀ ಜಗತ್ತೇ ಬೆರಗಾಗುವಂತಹ ಅದ್ಭುತ ಕೃತಿಯನ್ನು ಮಾಡಿ ತೋರಿಸುತ್ತಾರೆ. ಈಗ ಇಲ್ಲಿ ನೋಡುವ ವಿಡಿಯೋ ಒಬ್ಬಳು ನಟಿಯದ್ದಾಗಿದೆ. ವಿಡಿಯೋದಲ್ಲಿ ಪ್ರಸ್ತುತ ನಟಿಯು ಮಾಡುತ್ತಿರುವ ಯೋಗಾಭ್ಯಾಸ ನೋಡಿದರೆ ಅಕ್ಷರಶಃ ದಂಗಾಗುವಿರಿ.
ಪ್ರಸ್ತುತ ಈ ವಿಡಿಯೋವನ್ನು ಬಾಲಿವುಡ್ ಸೂಪರ್ ಹಿಟ್ ಮೂವಿ “ಗದರ್” ಚಿತ್ರದ ಡೈರೆಕ್ಟರ್ ಅನಿಲ್ ಶರ್ಮಾ ಅವರು ತಮ್ಮ ಟ್ವಿಟರ್ ಹ್ಯಾಂಡಲ್ ನಿಂದ ಶೇರ್ ಮಾಡಿದ್ದಾರೆ.
ಈ ವಿಡಿಯೋ ಶೇರ್ ಮಾಡುವುದರ ಜೊತೆಗೆ ಅದಕ್ಕೊಂದು ಕ್ಯಾಪ್ಶನ್ ನೀಡಿದ್ದಾರೆ. ಅನಿಲ್ ಶರ್ಮಾ ಅವರು ತಮ್ಮ ಕ್ಯಾಪ್ಷನ್ನಲ್ಲಿ, ‘ಭಾರತದಲ್ಲಿ ಕಲೆ ಹಾಗೂ ಕಲಾಕಾರರ ಕೊರತೆಯೇ ಇಲ್ಲ’ ಎಂದಿದ್ದಾರೆ.
ಇಲ್ಲಿ ನೋಡುವ ವಿಡಿಯೋದಲ್ಲಿ ಕಂಡು ಬರುತ್ತಿರುವ ಯುವತಿ ಡಾನ್ಸ್ ಕೋರಿಯೋಗ್ರಾಫರ್, ಭರತನಾಟ್ಯಮ್ ಡಾನ್ಸರ್ ಹಾಗೂ ನಟಿ ಇದ್ದಾರೆ. ಇವರ ಹೆಸರು ರುಕ್ಮಿಣಿ ವಿಜಯಕುಮಾರ್ ಇದ್ದು ಇತ್ತೀಚೆಗೆ ತೆರೆಕಂಡ ‘ಸೀತಾ ರಾಮಮ್’ ಚಿತ್ರದಲ್ಲಿ ನಟಿಸಿದ್ದಾರೆ.
ಸದ್ಯಕ್ಕೆ ಇಂಟರ್ನೆಟ್ ನಲ್ಲಿ ರುಕ್ಮಿಣಿ ಅವರ ಈ ವಿಡಿಯೋ ತುಂಬಾ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಕಂಡು ಬಂದ ಅವರ ದೇಹದ ಫ್ಲೆಕ್ಸಿಬಿಲಿಟಿ ಬಗ್ಗೆ ತುಂಬಾ ಚರ್ಚೆಯಾಗುತ್ತಿದೆ. ಪ್ರಸ್ತುತ ದೃಶ್ಯದಲ್ಲಿ ರುಕ್ಮಿಣಿ ಅವರು ಸೀರೆಯನ್ನು ತೊಟ್ಟು ಕೆಲವು ಯೋಗ ಮುದ್ರೆಗಳನ್ನು ಹಾಗೂ ಆಸನಗಳನ್ನು ಮಾಡುತ್ತಿದ್ದಾರೆ. ಅವರು ಮಾಡುತ್ತಿರುವ ಕಠಿಣವಾದ ಯೋಗಗಳು ತುಂಬಾ ಸಹಜವಾಗಿ ಮಾಡುತ್ತಿದ್ದಾರೆನೋ ಎಂಬಂತೆ ಭಾಸವಾಗುತ್ತಿದೆ.
ರುಕ್ಮಿಣಿ ಅವರ ಸುಂದರವಾದ ಈ ವಿಡಿಯೋ ನೋಡಿ…
Bharat mein kala aur kalakaron ki kami nahi .. adbhut 🤩 https://t.co/iJupPW8aBl
— Anil Sharma (@Anilsharma_dir) January 17, 2023
ಈ ವಿಡಿಯೋವನ್ನು ಮೊದಲು “ಧಾರ್ಮಿಕ ಭಾರತ” ಹೆಸರಿನ ಐಡಿಯಿಂದ ಶೇರ್ ಮಾಡಲಾಗಿತ್ತು. ಅದೇ ವಿಡಿಯೋವನ್ನು ಅನಿಲ್ ಶರ್ಮಾ ಅವರು ಮತ್ತೆ ಶೇರ್ ಮಾಡಿದ್ದಾರೆ. ಈ ವಿಡಿಯೋವನ್ನು ಶೇರ್ ಮಾಡುತ್ತಾ ಕ್ಯಾಪ್ಶನ್ ನಲ್ಲಿ ಭಕ್ತಿ, ಭಾವ ಮತ್ತು ನೃತ್ಯ ಒಂದೆಡೆ ಸೇರಿದಾಗ ಅಂತಹ ದಿವ್ಯ ದೃಶ್ಯ ಕಾಣಸಿಗುತ್ತದೆ ಎನ್ನಲಾಗಿದೆ.