ಟೀಚರ್ ಈ ಹುಡುಗನಿಗೆ ಒಂದು ಶಬ್ದ ಎಷ್ಟೋ ಸಲ ಹೇಳಿದರೂ ಸಹ, ಈ ಹುಡುಗ ಹೇಳಿದ್ದೇನು ನೋಡಿ!!

ಗುರುವಿನ ಸ್ಥಾನವೇ ಪರಮಶ್ರೇಷ್ಠ ಎಂದು ಯಾರೋ ಒಬ್ಬರು ನಿಜವಾಗಿ ಹೇಳಿದ್ದಾರೆ. ಆದ್ದರಿಂದ ಜೀವನದಲ್ಲಿ ಗುರುವನ್ನು ಮರೆಯಬಾರದು. ಸಾಮಾನ್ಯವಾಗಿ ನಾವು ಎಲ್ಲರನ್ನೂ ಬಿಟ್ಟು ಮುಂದೆ ಸಾಗುತ್ತೇವೆ, ಯಾರ ಸಹಾಯದಿಂದ ನಾವು ಯಶಸ್ಸಿನ ಸಾಗರವನ್ನು ದಾಟಿದ್ದೇವೆಯೋ ಅವರನ್ನು ಮರೆತುಬಿಡುತ್ತೇವೆ. ನಾವು ಎಷ್ಟು ಯಶಸ್ವಿಯಾಗುತ್ತೇವೆ ಅಥವಾ ಎಷ್ಟು ವಿಫಲರಾಗುತ್ತೇವೆ ಎಂಬುದು ಮುಖ್ಯವಲ್ಲ. ನಿಮ್ಮ ವ್ಯಕ್ತಿತ್ವವನ್ನು ನೀವು ಎಷ್ಟು ಎತ್ತರಕ್ಕೆ ಏರಿಸುತ್ತೀರಿ ಎಂಬುದು ಜೀವನದಲ್ಲಿ ತುಂಬಾ ಮುಖ್ಯವಾಗಿದೆ.

ಮಕ್ಕಳ ವಿದ್ಯಾಭ್ಯಾಸವು ಮೊದಲು ಮನೆಯಲ್ಲಿ ಮತ್ತು ಮನೆಯಿಂದ ಹೊರಬಂದ ನಂತರ ಶಾಲೆಯಲ್ಲಿ ಪ್ರಾರಂಭವಾಗುತ್ತದೆ. ಶಿಕ್ಷಕರು ಕೂಡ ತರಗತಿಯಲ್ಲಿರುವ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಭವಿಷ್ಯವನ್ನು ಸುಧಾರಿಸಲು ಶ್ರಮಿಸುತ್ತಾರೆ. ತರಗತಿಯಲ್ಲಿ ಶಿಕ್ಷಕರು ನಮ್ಮನ್ನು ಒಳ್ಳೆಯ ರೂಢಿ ಕಲಿಸುವದರೊಂದಿಗೆ ನಮ್ಮಲ್ಲಿರುವ ಕೆಟ್ಟ ಅಭ್ಯಾಸಗಳನ್ನು ದೂರು ಮಾಡಲು ಪ್ರಯತ್ನ ಮಾಡುತ್ತಾರೆ.

ಶಿಕ್ಷಕರು ತಾನು ಕಲಿಸುವ ವಿದ್ಯಾರ್ಥಿಯು ಬೆಳೆದು ಉತ್ತಮ ಸ್ಥಾನವನ್ನು ತಲುಪಬೇಕು ಮತ್ತು ಕುಟುಂಬ ಮತ್ತು ಶಾಲೆಗೆ ಕೀರ್ತಿ ತರಬೇಕೆಂದು ಯಾವಾಗಲೂ ಬಯಸುತ್ತಾರೆ. ಶಿಕ್ಷಕರ ಕನಸು ನನಸಾದರೆ ಇಡೀ ಕುಟುಂಬದ ಜೊತೆಗೆ ಶಾಲೆಗೂ ಸಹ ಶಿಕ್ಷಕರ ಬಗ್ಗೆ ಹೆಮ್ಮೆ ಬರುತ್ತದೆ.

ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ಒಂದು ಶಾಲೆಯಲ್ಲಿಯ ಒಬ್ಬ ಹುಡುಗನ ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಟೀಚರ್ ಈ ಹುಡುಗನಿಗೆ ವಾಚನ ತಗೆದುಕೊಳ್ಳುತ್ತಿರುತ್ತಾರೆ ಪಾಠದ ಮಧ್ಯದಲ್ಲಿ ಒಂದು ಶಬ್ದ ಬರುತ್ತೆ ಆ ಶಬ್ದ ಈ ಹುಡುಗ ಬೇರೆ ತರಹ ಉಚ್ಛಾರ ಮಾಡುತ್ತಾನೆ. ಆಗ ಟೀಚರ ಈ ಶಬ್ದ ಮತ್ತೊಮ್ಮೆ ಹೇಳಲು ಹೇಳುತ್ತಾರೆ ಆದರೂ ಸಹ ಅದೇ ರೀತಿಯಲ್ಲಿ ಹೇಳುತ್ತಾನೆ. ತದನಂತರ ಟೀಚರ ಈ ಹುಡುಗನಿಗೆ ಆ ಶಬ್ದ ಮೊದಲು ಹೇಳಿ ತದನಂತರ ರಿಪೀಟ್ ಮಾಡಲು ತಿಳಿಸುತ್ತಾರೆ. ಆದರೂ ಸಹ ಹುಡುಗ ಅದೇ ತರಹ ಹೇಳುತ್ತಾನೆ. ಇದನ್ನು ನೋಡಿದರೆ ನೀವು ಸಹ ನಗುತ್ತಿರಿ. ಅಷ್ಟಕ್ಕೂ ಆ ಕಠಿಣವಾದ ಶಬ್ದ ಯಾವುದು ಇದೆ ಎಂಬುದನ್ನು ನೀವೇ ನೋಡಿ.

ವಿಡಿಯೋ ನೋಡಿ.

 

View this post on Instagram

 

A post shared by Suresha R (@rcall_me_ramu_r_c)

ಪ್ರಸ್ತುತ ವೈರಲ್ ಆಗುತ್ತಿರುವ ಈ ವೀಡಿಯೋ ಇನ್ಸ್ಟಾಗ್ರಾಮ್ ನಲ್ಲಿ rcall_me_ramu_r_c ಎಂಬ ಹೆಸರಿನ ಅಕೌಂಟ್ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವೀಡಿಯೋವನ್ನು ಸುಮಾರು ಒಂದು ಮಿಲಿಯನ್ ಕ್ಕಿಂತ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಈ ವಿಡಿಯೋವನ್ನು ಸುಮಾರು ಒಂದು ಲಕ್ಶಕ್ಕೂ ಹೆಚ್ಚು ನೆಟ್ಟಿಗರು ಲೈಕ್ ಸಹ ಮಾಡಿದ್ದಾರೆ