ಐಷಾರಾಮಿ ಜೀವನವನ್ನು ತ್ಯಾಗ ಮಾಡಿ, ಕೋಟಿಗಟ್ಟಲೆ ಸಂಪತ್ತನ್ನು ತಿರಸ್ಕರಿಸಿ..’ಸನ್ಯಾಸಿತನ’ ಸ್ವೀಕರಿಸಿದ ಪ್ರಸಿದ್ಧ ವಜ್ರ ವ್ಯಾಪಾರಿಯ 8 ವರ್ಷದ ಪುತ್ರಿ!!
ಸೂರತ: ಸೂರತನಲ್ಲಿಯ ಒಬ್ಬ ಪ್ರಸಿದ್ಧ ಡೈಮಂಡ್ ವ್ಯಾಪರಿಯ ಮಗಳು ತನ್ನ ಐಷಾರಾಮಿ ಜೀವನವನ್ನು ತ್ಯಾಗ ಮಾಡಿ ಕೇವಲ 8 ವರ್ಷದ ಪ್ರಾಯದಲ್ಲೇ ಸನ್ಯಾಸಿತನ ಸ್ವೀಕಾರ ಮಾಡುವ ನಿರ್ಧಾರ ವನ್ನು ತಗೆದುಕೊಂಡಿದ್ದಾಳೆ.
ಆಟ ಆಡುವ ವಯಸ್ಸಿನಲ್ಲಿ ಡೈಮಂಡ್ ವ್ಯಾಪಾರಿ ಧನೇಶ ಅವರ ಮಗಳು ಬುಧವಾರ ಜೈನ್ ಧರ್ಮ ಸ್ವೀಕಾರ ಮಾಡಿ ಸನ್ಯಾಸಿಯಾಗಿದ್ದಾಳೆ. ದೇವಾಂಶಿ ಸಂಘವಿ ಈ ಹುಡುಗಿಯ ಹೆಸರಿದ್ದು, ಇಬ್ಬರು ಅಕ್ಕತಂಗಿಯರಲ್ಲಿ ಈಕೆ ದೊಡ್ಡವಳು ಆಗಿದ್ದಳು. ದೇವಾಂಶಿ ಜೈನ್ ಧರ್ಮದ ಕಾರ್ಯಕ್ರಮವೊಂದರಲ್ಲಿ ದೀಕ್ಷೆಯನ್ನು ಪಡೆದುಕೊಂಡಿದ್ದಾಳೆ.
ವಜ್ರದ ವ್ಯಾಪಾರಿಯ ಪುತ್ರಿ ದೇವಾಂಶಿ ಸಾಂಘ್ವಿ 367 ದೀಕ್ಷಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಯಾಸಿಯಾದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಕುಟುಂಬದ ಸದಸ್ಯರೊಬ್ಬರು, ‘ದೇವಾಂಶಿ ಇಲ್ಲಿಯವರೆಗೆ ಟಿವಿ, ಸಿನಿಮಾ ನೋಡಿಲ್ಲ. ಇಷ್ಟೇ ಅಲ್ಲ, ಅವಳು ಯಾವ ರೆಸ್ಟೋರೆಂಟ್‌ಗೂ ಹೋಗಿರಲಿಲ್ಲ. ದೇವಾಂಶಿ ದೀಕ್ಷೆಯ ಹಾದಿಯನ್ನು ಆಯ್ದುಕೊಳ್ಳದೇ ಇದ್ದಿದ್ದರೆ ದೊಡ್ಡವಳಾದ ಮೇಲೆ ಆಕೆ ಬಹುಕೋಟಿ ವಜ್ರದ ಕಂಪನಿಯ ಒಡತಿಯಾಗುತ್ತಿದ್ದಳು’ ಎಂದು ಹೇಳಿದರು.
ಮಾಧ್ಯಮ ವರದಿಗಳ ಪ್ರಕಾರ, ವಜ್ರದ ವ್ಯಾಪಾರಿ ಧನೇಶ್ ಮತ್ತು ಅವರ ಕುಟುಂಬ ತುಂಬಾ ಶ್ರೀಮಂತರಾಗಿದ್ದರೂ ಸಹ ಅವರ ಜೀವನಶೈಲಿ ತುಂಬಾ ಸರಳವಾಗಿದೆ. ಈ ಕುಟುಂಬವು ಮೊದಲಿನಿಂದಲೂ ಧಾರ್ಮಿಕವಾಗಿದೆ. 8 ವರ್ಷದ ದೇವಾಂಶಿಗೆ ಹಿಂದಿ, ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳು ಗೊತ್ತು. ಇಷ್ಟೇ ಅಲ್ಲ, ದೇವಾಂಶಿ ಸಂಗೀತದಲ್ಲಿ ಪಳಗಿದವರಾಗಿದ್ದು, ನೃತ್ಯ, ಯೋಗದಲ್ಲೂ ತುಂಬಾ ಪ್ರತಿಭಾವಂತಳಾಗಿದ್ದಾಳೆ.