Video; ಸ್ಪೈಡರ್ ಮ್ಯಾನ್ ಅಲ್ಲ, ಸ್ಪೈಡರ್ ಮಂಕಿ ತನ್ನ ಮರಿಯನ್ನು ಎತ್ತರದಲ್ಲಿ ಮರದಿಂದ ಮರಕ್ಕೆ ಸಾಗಿಸಲು ತೆಗೆದುಕೊಂಡ ರಿಸ್ಕ್ ನೋಡಿ…!

ನಿಸರ್ಗ ಮತ್ತು ನಿಸರ್ಗದಲ್ಲಿಯ ಪ್ರತಿಯೊಂದು ಜೀವಿಗಳ ಜೀವನ ತುಂಬಾ ರೋಚಕತೆಯಿಂದ ಕೂಡಿದೆ. ಅದರಲ್ಲೂ ನಮ್ಮ ಪೂರ್ವಜನಾದ ಮಂಗನ ಆಟಗಳಂತೂ ತೀರ ಕುತೂಹಲದಿಂದ ಕೂಡಿವೆ.

ಇಲ್ಲಿ ನೋಡಲಿರುವ ವಿಡಿಯೋದಲ್ಲಿಯೂ ಮಂಗನ ಈ ಕೆಲಸ ತುಂಬಾ ಕುತೂಹಲವನ್ನು ಹುಟ್ಟಿಸಿದೆ. ವಿಡಿಯೋದಲ್ಲಿ ಕಾಣುವ ದೃಶ್ಯ ನಿಜಕ್ಕೂ ರೋಚಕತೆಯನ್ನು ಹುಟ್ಟಿಸುವದರೊಂದಿಗೆ ಭಯವೂ ಆಗುತ್ತದೆ. ಕಾರಣ ತುಂಬಾನೇ ಎತ್ತರವಾದ ಒಂದು ಒಣಗಿದ ಮರದಿಂದ ಅದಕ್ಕಿಂತಲೂ ಎತ್ತರವಾದ ಮತ್ತೊಂದು ಮರಕ್ಕೆ ಹತ್ತುವ ಪ್ರಯತ್ನ ಮಂಗ ಮಾಡಿದೆ. ಈ ಸಂದರ್ಭದಲ್ಲಿ ಮಂಗವು ಒಂದೇ ಇರದೆ ಜೊತೆಗೆ ಅದರ ಕರುಳ ಕುಡಿ ಪ್ರೀತಿಯ ಮರಿಯೂ ಸಹ ಇದೆ. ಇಲ್ಲಿ ಸ್ವಲ್ಪೇ ಸ್ವಲ್ಪ ಹೆಚ್ಚು ಕಡಿಮೆಯಾದರೂ ಎರಡು ಮಂಗಗಳು ಜೀವ ಕಳೆದುಕೊಳ್ಳುವುದು ನಿಶ್ಚಿತ. ಆದರೂ ಚಲನಚಿತ್ರದಲ್ಲಿಯ ಸೀನ್ ತರ ತಾಯಿ ಮಂಗ ನಿಧಾನವಾಗಿ ಬೇರೆ ಮರದ ರೆಂಬೆಯನ್ನು ಹಿಡಿದು ನಿಧಾನವಾಗಿ ಬ್ಯಾಲೆನ್ಸ್ ಮಾಡಿಕೊಂಡು ತನ್ನ ಮರಿಯನ್ನು ದಾಟಿಸುವಾಗ ಇಲ್ಲಿ ಮಂಗ ತನ್ನನ್ನು ಸೇತುವೆಯ ರೀತಿಯಲ್ಲಿ ಉಪಯೋಗ ಮಾಡಿಕೊಂಡಿದೆ.

ಈ ದೃಶ್ಯ ಸ್ವಲ್ಪ ರಿಸ್ಕ್ ದಿಂದಲೇ ಕೂಡಿದೆ ಎನ್ನಬಹುದು. ಆದರೂ ಮಂಗ ಇಲ್ಲಿ ತುಂಬಾ ಮುಂಜಾಗ್ರತೆಯನ್ನು ವಹಿಸಿದೆ. ಮೊದಲು ಮರವನ್ನು ತೂಗಿಕೊಂಡು ಬೇರೆ ಮರದ ರೆಂಬೆ ಹಿಡಿಯುತ್ತದೆ. ನಂತರ ತನ್ನ ಮರಿಯನ್ನು ದಾಟಿಸುತ್ತದೆ. ಈ ಸಂದರ್ಭದಲ್ಲಿ ತನ್ನ ಬಾಲವನ್ನು ಮೊದಲ ಮರದ ರೆಂಬೆಗೆ ಸುತ್ತಿಕೊಂಡೆ ಈ ರಿಸ್ಕ್ ತೆಗೆದುಕೊಂಡಿದೆ.

ನೋಡಿ ಮಂಗನ ಅದ್ಭುತವಾದ ಈ ದೃಶ್ಯ…

 

View this post on Instagram

 

A post shared by Tania Cappelluti (@tania.cappelluti)

ಪ್ರಸ್ತುತ ವಿಡಿಯೋ ನಿಮಗಾಗಿ ಇನ್ಸ್ಟಾಗ್ರಾಮ್ ನಿಂದ ತಂದಿದ್ದೇವೆ. ಈ ವಿಡಿಯೋ tania.cappelluti ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಇದನ್ನು ಇಲ್ಲಿಯವರೆಗೆ ಲಕ್ಷಾವಧಿ ಜನರು ನೋಡಿದ್ದಾರೆ.