ಅದಕ್ಕೆ ಹೇಳೋದು ಮೆಂಟಲ್ ಹಾಸ್ಪಿಟಲ್ ನಲ್ಲಿ ಕೆಲಸವಿಲ್ಲದೆ ಕೂಡಬಾರದು ಅಂತ, ನೋಡಿ ವೀಡಿಯೋ!!

ವೈದ್ಯರನ್ನು ದೇವರೆಂದು ಸಹ ಕರೆಯುತ್ತಾರೆ, ವೈದ್ಯೋ ನಾರಾಯಣ ನಮಃ. ನಮ್ಮ ಜೀವನದಲ್ಲಿ ಹಲವಾರು ಬಾರಿ ನಾವು ಅನೇಕ ರೋಗಗಳಿಗೆ ಬಲಿಯಾಗುತ್ತೇವೆ ಆದರೆ ಎಂತಹದೇ ರೋಗ ಬಂದರು ಸಹ ಅದನ್ನು ಹತೋಟಿ ಮಾಡಿ ನಮ್ಮ ಜೀವನ ಕಾಪಾಡುವ ಕಾರ್ಯ ವೈದ್ಯರು ಮಾಡುತ್ತಾರೆ. ಹೀಗಾಗಿ ವೈದ್ಯರನ್ನು ಪರಬ್ರಹ್ಮ ಎಂದು ಹೇಳುತ್ತೇವೆ. ನಾವು ಸಣ್ಣ ಪುಟ್ಟ ಕಾರಣಗಳಿಂದ ಅನಾರೋಗ್ಯಕ್ಕೆ ತುತ್ತಾದರೆ ಮೊದಲು ನಾವು ಪ್ರಥಮೋಪಚಾರ ಅಂದರೆ ಮೆಡಿಕಲ್ ನಿಂದ ಟ್ಯಾಬ್ಲೆಟ್ ತಗೆದುಕೊಂಡು ಪರಿಹಾರ ಕಂಡುಕೊಳ್ಳಲು ಪ್ರಯತ್ನ ಮಾಡುತ್ತೇವೆ. ಒಂದು ವೇಳೆ ಟ್ಯಾಬ್ಲೆಟ್ ತಗೆದುಕೊಂಡರು ಸಹ ಪರಿಹಾರ ಸಿಗದೆ ಇದ್ದಾಗ ನಾವು ಆಸ್ಪತ್ರೆಯ ಕಡೆಗೆ ಹೆಜ್ಜೆ ಹಾಕುತ್ತೇವೆ.

ಚಿಕ್ಕವರಿದ್ದಾಗಿನಿಂದಲೂ ನಮಗೆ ವೈದ್ಯರು ಹಲವಾರು ಪ್ರಕಾರದ ಡೋಸ್ ನೀಡುತ್ತಾರೆ. ಹೀಗಾಗಿ ನಾವು ಯಾವುದೇ ರೋಗವಿಲ್ಲದೆ ಆರೋಗ್ಯವಾಗಿ ಬೆಳೆಯುತ್ತೇವೆ. ಆಕಸ್ಮಿಕವಾಗಿ ಒಂದು ಡೋಸ್ ಸಹ ಮಿಸ್ ಆದರೂ ಸಹ ಮಕ್ಕಳು ಭವಿಷ್ಯದಲ್ಲಿ ಅಂಗವಿಕಲ ಆಗುವ ಸಂಭವ ವಿರುತ್ತದೆ. ತಂದೆ-ತಾಯಿಯರು ಎಷ್ಟೋ ಕಷ್ಟವಾದರೂ ಸಹ ಮಕ್ಕಳಿಗೆ ಚಿಕ್ಕವರಿದ್ದಾಗ ಡೋಸ್ ಕೊಟ್ಟು ಕೊಡುತ್ತಾರೆ. ಆದರೆ ಮಕ್ಕಳು ಬೆಳೆಯುತ್ತ ಹೋದಂತೆ ಅವರಲ್ಲಿ ಹಲವಾರು ಪ್ರಕಾರದ ಬದಲಾವಣೆಯನ್ನು ಕಾಣುತ್ತೇವೆ. ಆದರೆ ಆಕಸ್ಮಿಕವಾಗಿ ಉಂಟಾದ ಘಟನೆ ಅಥವಾ ಆಂತರಿಕ ಸಮಸ್ಯೆಗಳಿಂದಾಗಿ ಕೆಲವೊಬ್ಬರು ಹುಚ್ಚರಾಗುತ್ತಾರೆ. ಈ ಹುಚ್ಚುತನ ಹೋಗಲಾಡಿಸಲು ಸಹ ಇಂದು ಅನೇಕ ಆಸ್ಪತ್ರೆಗಳನ್ನು ತಗೆಯಲಾಗಿದೆ. ಅವುಗಳಿಗೆ ಹುಚ್ಚಾಸ್ಪತ್ರೆ ಎಂದು ಸಹ ಕರೆಯುತ್ತೇವೆ. ನಿಮ್ಮ ಜೀವನದಲ್ಲಿ ಬಹಳಷ್ಟು ಕಷ್ಟ ಮತ್ತು ನಮ್ಮ ಜೀವನ ಸಾಕಾಗಿದೆ ಅಂತ ಅನಿಸಿದರೆ ನೀವು ಒಮ್ಮೆ ಹುಚ್ಚರ ಆಸ್ಪತ್ರೆಗೆ ಭೇಟಿ ನೀಡಿ ನಿಮ್ಮ ವಿಚಾರವೇ ಬದಲಾಗುತ್ತೆ.

ಸದ್ಯಕ್ಕೆ ಹುಚ್ಚರ ಆಸ್ಪತ್ರೆಯಲ್ಲಿಯ ಒಂದು ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವೀಡಿಯೋ ನೋಡಿದರೆ ನಗದೆ ಇರಲಾರಿರಿ. ಅಷ್ಟಕ್ಕೂ ಈ ವಿಡಿಯೋದಲ್ಲಿ ಏನಿದೆ ಎಂದರೆ, ಒಂದು ಹುಚ್ಚರ ಆಸ್ಪತ್ರೆಯಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿ ಆತನ ಯಾವುದೋ ಕೆಲಸಕ್ಕಾಗಿ ಹೋಗಿರುತ್ತಾನೆ. ಆತನ ಕೆಲಸವಾದ ನಂತರ ಅದೇ ಆಸ್ಪತ್ರೆಯಲ್ಲಿ ಸ್ವಲ್ಪ ಹೊತ್ತು ಕುಳಿತುಕೊಂಡು ವಿಶ್ರಾಂತಿ ಪಡೆದುಕೊಂಡು ಹೋಗಬೇಕು ಎಂದು ವಿಚಾರ ಮಾಡಿ ಅಲ್ಲಿಯೇ ಒಂದು ಟೇಬಲ್ ಮೇಲೆ ಕುಳಿತುಕೊಳ್ಳುತ್ತಾನೆ. ಆಗ ಆತನ ಹಿಂಬದಿಯಿಂದ ಒಬ್ಬ ಮಾನಸಿಕ ರೋಗಿ ಅಂದರೆ ಹುಚ್ಚು ಹಿಡಿದ ವ್ಯಕ್ತಿ ಬಂದು ಈತನ ತಲೆಯ ಮೇಲೆ ಜೋರಾಗಿ ಹೊಡೆಯುತ್ತಾನೆ. ಪಾಪ ವಿಶ್ರಾಂತಿ ಪಡೆಯಬೇಕು ಎಂದು ಕುಳಿತ ವ್ಯಕ್ತಿ ಈತನ ಹೊಡೆತದಿಂದ ಏನು ಮಾಡಬೇಕು ಎಂದು ತಿಳಿಯದೆ ಸುಮ್ಮನೆ ಅಲ್ಲಿಂದ ಎದ್ದು ಹೋಗುತ್ತಾನೆ. ಈ ವಿಡಿಯೋ ನೋಡಿದ ನೆಟ್ಟಿಗರು ‘ಅದಕ್ಕೆ ಹೇಳೋದು ಕೆಲಸವಿಲ್ಲದೆ ಹುಚ್ಚಾಸ್ಪತ್ರೆಯಲ್ಲಿ ಸುಮ್ಮನೆ ಕೂಡಬಾರದು” ಅಂತ ಕಾಮೆಂಟ್ ಮಾಡುತ್ತಿದ್ದಾರೆ.

ವಿಡಿಯೋ ನೋಡಿ.

ಪ್ರಸ್ತುತ ವೈರಲ್ ಆಗುತ್ತಿರುವ ಈ ವೀಡಿಯೋ ಇನ್ಸ್ಟಾಗ್ರಾಮ್ ನಲ್ಲಿ yedi_duniya ಎಂಬ ಹೆಸರಿನ ಅಕೌಂಟ್ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವೀಡಿಯೋವನ್ನು ಸುಮಾರು ಒಂದು ಮಿಲಿಯನ್ ಕ್ಕಿಂತ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಈ ವಿಡಿಯೋವನ್ನು ಸುಮಾರು ಒಂದು ಲಕ್ಷಕ್ಕಿಂತ ಹೆಚ್ಚು ನೆಟ್ಟಿಗರು ಲೈಕ್ ಸಹ ಮಾಡಿದ್ದಾರೆ.