Video; ರಸ್ತೆ ಮೇಲೆ ಜೋಕರ್ ನ ಡಾನ್ಸ್ ನೋಡಿ ಕಾರಿನಿಂದ ಇಳಿದು ತಾನು ಜೋಕರ್ ಜೊತೆ ಸಖತ್ ಹೆಜ್ಜೆ ಹಾಕಿಯೇ ಬಿಟ್ಟಳು ಹುಡುಗಿ.
bee_happy_mama ಹೆಸರಿನ ಐಡಿಯಿಂದ ಸೋಶಿಯಲ್ ಮೀಡಿಯಾದ ಫೇಮಸ್ ಸೈಟ್ ಇನ್ಸ್ಟಾಗ್ರಾಮ್ ನಲ್ಲಿ ಒಂದು ವಿಡಿಯೋ ನೋಡಲು ಸಿಗುತ್ತಿದೆ. ಈ ವಿಡಿಯೋ ಒಂದು ವಿಶೇಷ ಸಂದೇಶವನ್ನು ನೀಡುತ್ತಿದೆ. ಬನ್ನಿ ಏನಿದೆ ಈ ವಿಡಿಯೋದಲ್ಲಿ ನೋಡೋಣ.
ಕುಣಿಯುವದೆಂದರೆ ಎಲ್ಲರೂ ಇಷ್ಟಪಡುವ ಸಬ್ಜೆಕ್ಟ್. ನೃತ್ಯ ಬರುವವರಂತೂ ಕುಣಿದೆ ಕುಣಿಯುತ್ತಾರೆ, ಆದರೆ ಇತ್ತೀಚೆಗೆ ನೃತ್ಯ ಬರದವರೂ ಸಹ ಕುಣಿಯುವ ಚಾನ್ಸ್ ಬಿಡುವುದೇ ಇಲ್ಲ. ಸದ್ಯ ಇಲ್ಲಿ ನೋಡುವ ವಿಡಿಯೋ ತುಂಬಾ ಸುಂದರವಾದ ಸಂದೇಶವನ್ನು ನೀಡುತ್ತದೆ.
ಅದೇನೆಂದರೆ ಪ್ರಸ್ತುತ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಜೋಕರ್ ವೇಷ ಧರಿಸಿ ರಸ್ತೆಯ ಮೇಲೆ ನೃತ್ಯ ಮಾಡುತ್ತಿದ್ದಾನೆ. ಈ ಸಂದರ್ಭದಲ್ಲಿ ಕಾರೊಂದು ಅಲ್ಲಿಗೆ ಬರುತ್ತದೆ. ಕಾರಿನಲ್ಲಿ ಮೂರ್ನಾಲ್ಕು ಜನ ಹುಡುಗಿಯರು ಕುಳಿತಿದ್ದಾರೆ. ಅವರಲ್ಲಿ ಒಬ್ಬಳಿಗೆ ರಸ್ತೆಯಲ್ಲಿ ಮಾಡುತ್ತಿರುವ ಜೋಕರ್ ನ ಡಾನ್ಸ್ ನೋಡಿ ಸ್ವಂತಕ್ಕೆ ಕಂಟ್ರೋಲ್ ಮಾಡಿಕೊಳ್ಳುವುದು ಸಾಧ್ಯವಾಗುವುದಿಲ್ಲ.
ಯಾರು? ಏನು? ಎಂಬ ವಿಚಾರವನ್ನೇ ಬಿಟ್ಟು ಈ ಯುವತಿ ನೇರ ಜೋಕರ್ ಹತ್ತಿರ ಡಾನ್ಸ್ ಮಾಡುತ್ತಾ ಬರುತ್ತಾಳೆ, ಬಂದವಳು ಸುಮ್ಮನೆ ನಿಲ್ಲದೆ ಆತನ ಜೊತೆಗೆ ಮತ್ತಷ್ಟು ಖುಷಿಯಿಂದ ಭರ್ಜರಿಯಾಗಿ ಕುಣಿದು ಕುಪ್ಪಳಿಸುತ್ತಾಳೆ. ಡಾನ್ಸ್ ನಲ್ಲಿ ಯುವತಿಯ ಈ ಹಠಾತ್ ಪ್ರವೇಶ ಎಲ್ಲರಿಗೂ ಆಶ್ಚರ್ಯದ ಜೊತೆಗೆ ಖುಷಿಯೂ ನೀಡುತ್ತದೆ.
ನೋಡಿ ಈ ವಿಡಿಯೋ…
View this post on Instagram
ಪ್ರಸ್ತುತ ಇಂಟರ್ನೆಟ್ ನಲ್ಲಿ ಶೇರ್ ಮಾಡಲಾದ ಈ ವಿಡಿಯೋ ಇಲ್ಲಿಯವರೆಗೆ 14.7 ಮಿಲಿಯನ್ ಜನರು ನೋಡಿ ಆನಂದಿಸಿದ್ದಾರೆ. ಡಾನ್ಸಿನ ಈ ಕಂಟೆಂಟ್ ನ್ನು ಇಲ್ಲಿಯವರೆಗೆ 1.6 ಮಿಲಿಯನ್ ಜನರು ಲೈಕ್ ಮಾಡಿದ್ದಾರೆ.