Video; ಹೃದಯ ಸಿರಿವಂತಿಕೆಯ ಮುಂದೆ ಹಣದ ಸಿರಿವಂತಿಕೆ ಶೂನ್ಯ; 4 ತುತ್ತಿನಲ್ಲಿ 2 ತುತ್ತು ಹಂಚಿ ತಿಂದ ದೊಡ್ಡ ಹೃದಯದ ಸಿರಿವಂತ ಕಾರ್ಮಿಕ!

ದಾನ ಮಾಡಲು ಶ್ರೀಮಂತಿಕೆಯೇ ಬೇಕು ಎಂದೇನಿಲ್ಲ. ದಾನ ಮಾಡುವ ಮನಸ್ಸಿದ್ದರೆ ಆ ವ್ಯಕ್ತಿ ಹೇಗಾದರೂ ಮಾಡಿ ತನ್ನ ಶಕ್ತಿಗೆ ನಿಲುಕುವಷ್ಟು ದಾನ ಮಾಡಿಯೇ ಮಾಡುತ್ತಾನೆ. ಒಟ್ಟಿನಲ್ಲಿ ದಾನ ಮಾಡಲು ಹಣಕ್ಕಿಂತ ಮೊದಲು ದಾನ ಮಾಡುವ ಮನಸ್ಸಿರಬೇಕು, ಆವಾಗ ವ್ಯಕ್ತಿ ದಾನ ಮಾಡಲು ಸಾಧ್ಯ.

ಮಿತ್ರರೇ ನಿಮಗಾಗಿ ಒಂದು ಸುಂದರ ವಿಡಿಯೋವನ್ನು ತಂದಿದ್ದೇವೆ. ಪ್ರಸ್ತುತ ವಿಡಿಯೋ ನ್ಯಾಚುರಲ್ ಶೂಟ್ ಆಗಿದೆ ಎಂದು ತಿಳಿದು ಬರುತ್ತದೆ. ಈ ವಿಡಿಯೋದಲ್ಲಿಯ ದೃಶ್ಯ ನೋಡುಗನನ್ನು ಸತ್ಯವಾಗಲೂ ಮನಸೆಳೆಯುತ್ತದೆ. ಅಂಥ ದೃಶ್ಯ ಇಲ್ಲಿ ಕಂಡು ಬರುತ್ತದೆ.

ಇತ್ತೀಚೆಗೆ ತಮಾಷೆಯ ಅನೇಕ ಪ್ರ್ಯಾoಕ್ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ನೋಡಲು ಸಿಗುತ್ತವೆ. ಅಂತ ವಿಡಿಯೋಗಳನ್ನು ಮೇಲಿಂದ ಮೇಲೆ ನೋಡುತ್ತೇವೆ ಮತ್ತು ನಗುತ್ತೇವೆ. ಈ ವಿಡಿಯೋಗಳು ಯಾವುದೇ ರೀತಿಯ ಸಂದೇಶವನ್ನು ನೀಡುವುದಿಲ್ಲ. ಬರೀ ಇನ್ನೊಬ್ಬರ ಮೇಲೆ ಗೇಲಿ ಮಾಡುವುದೇ ಉದ್ದೇಶವಾಗಿರುತ್ತದೆ.

ಆದರೆ ಇಲ್ಲಿ ನೋಡುವ ಪ್ರ್ಯಾoಕ್ ವಿಡಿಯೋ ತುಂಬಾ ಒಳ್ಳೆಯದಾದ ಸಂದೇಶವನ್ನು ನೀಡುತ್ತದೆ. ಇಬ್ಬರು ಮಿತ್ರರು ಕೂಡಿ ಬಡವ ಕಾರ್ಮಿಕನೊಬ್ಬನಿಗೆ ಪ್ರ್ಯಾoಕ್ ಮಾಡಲು ಯೋಜನೆ ಮಾಡಿ ಆತನ ಹಿಂದೆ ಸುತ್ತುತ್ತಾರೆ. ಕಾರ್ಮಿಕ ಚಿಕ್ಕ ಹೋಟೆಲ್ ಒಂದರಿಂದ ಬ್ರೇಡ್ ಸಮೋಸ ತೆಗೆದುಕೊಳ್ಳುತ್ತಾನೆ. ಇಬ್ಬರು ಪ್ರ್ಯಾoಕ್ ಮಾಡುವ ಮಿತ್ರರು ಆತನ ಹಿಂದೆಯೇ ಹೋಗಿ ಆತ ಕುಳಿತುಕೊಂಡ ನಂತರ ಆತನ ಮುಂದೆ ಆಸೆಯಿಂದ ಕುಳಿತುಕೊಳ್ಳುತ್ತಾರೆ. ಕಾರ್ಮಿಕ ಬ್ರೆಡ್ ಸಮೋಸ ಇನ್ನೇನು ತನ್ನ ಬಾಯಲ್ಲಿ ಹಾಕಿಕೊಳ್ಳಬೇಕು ಎನ್ನುವಷ್ಟರಲ್ಲಿ ಇಬ್ಬರಲ್ಲಿ ಒಬ್ಬನು ಬಾಯಿ ತೆರೆಯುತ್ತಾನೆ. ಇದನ್ನು ಗಮನಿಸಿದ ಕಾರ್ಮಿಕ ತಾನು ತಿನ್ನದೆ ಆತನ ಬಾಯಿಗೆ ಮೊದಲ ತುತ್ತು ಹಾಕುತ್ತಾನೆ. ತದನಂತರ ಆತನ ಜೊತೆಯಲ್ಲಿದ್ದವನಿಗೂ ಇನ್ನೊಂದು ತುತ್ತು ತಿನ್ನಿಸುತ್ತಾನೆ. ಈ ದೃಶ್ಯ ನೋಡಲು ತುಂಬಾ ವಿಶೇಷವಾಗಿದೆ, ಜೊತೆಗೆ ಕೋಟಿ ರೂಪಾಯಗಳಿಗೂ ಮೀರಿದ ಅದ್ಭುತ ಸಂದೇಶವನ್ನು ನೀಡುವಂತದ್ದಾಗಿದೆ. ಈ ಸಂದರ್ಭದಲ್ಲಿ ಕಾರ್ಮಿಕನ ಮುಖದ ಮೇಲಿನ ಸಮಾಧಾನ, ಸಂತೃಪ್ತಿಯ ನಗು ಮೇಲಿಂದ ಮೇಲೆ ನೋಡುವಂತಹದ್ದಾಗಿದೆ.

ನೋಡಿ ಈ ಸುಂದರ ವಿಡಿಯೋ…

ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದ ಎಲ್ಲರ ಇಷ್ಟವಾದ ಸೈಟ್ instagram ನಲ್ಲಿ munda_faridkotiya_007 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ.