Video; ಮದುಮಗಳ Flexibility ಗೆ ದೀರ್ಘ ದಂಡ ನಮಸ್ಕಾರ ಹಾಕಿದ ವರ; ವಧು ಯೋಗವನ್ನು ಸ್ವಲ್ಪ ಸೀರಿಯಸ್ ಆಗಿಯೇ ಮಾಡಿದ್ದಾಳೆ.

ಮದುವೆಯಲ್ಲಿಯ ವೈರಲ್ ವಿಡಿಯೋಗಳು ನೆಟ್ಟಿಗರಿಗೆ ಒಳ್ಳೆಯ ಔತಣವಿದ್ದಂತೆ. ಮದುವೆಯಲ್ಲಿ ಆಕಸ್ಮಿಕವಾಗಿ ಕಂಡುಬರುವ ಅಥವಾ ನಡೆದು ಹೋಗುವ ದೃಶ್ಯಗಳು ನೋಡಲು ಎಲ್ಲರಿಗೂ ಇಷ್ಟವಾಗುತ್ತದೆ.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇದೇ ರೀತಿಯ ಮದುವೆಯ ಒಂದು ವಿಡಿಯೋ ತುಂಬಾ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದಾಗ ಮದುಮಗಳ ಫ್ಲೆಕ್ಸಿಬಿಲಿಟಿ ನೋಡಿ ಆಶ್ಚರ್ಯವಾಗುತ್ತದೆ. ವಧು ನಿರಾಯಾಸವಾಗಿ ಮಾಡಿದ ಈ ವಿರುದ್ಧ ದಿಕ್ಕಿನಲ್ಲಿಯ ಬಾಗುವಿಕೆ ನೋಡುಗರ ಹುಬ್ಬೇರಿಸುತ್ತದೆ.

ಮದುವೆಯಲ್ಲಿ ಮುಖ್ಯ ದೃಶ್ಯವೆಂದರೆ ಒಬ್ಬರಿಗೊಬ್ಬರು ಹೂಮಾಲೆಯನ್ನು ತೊಡಿಸುವದು. ಈ ಸಂದರ್ಭದಲ್ಲಿ ವರ ಸಹಜವಾಗಿ ತನ್ನ ಭಾವಿ ಪತ್ನಿಯ ಕೊರಳಲ್ಲಿ ಹೂಮಾಲೆಯನ್ನು ಹಾಕಲು ಮುಂದಾಗುತ್ತಾನೆ. ಆಗ ವಧು ಸಡನ್ ಆಗಿ ಹಿಂದೆ ವಾಲುತ್ತಾಳೆ. ಆಗ ವರ ಹೂಮಾಲೆ ತೊಡಿಸಲು ಇನ್ನಷ್ಟು ಆಕ್ಟಿವ್ ಆಗುತ್ತಾನೆ. ಈ ಸಂದರ್ಭದಲ್ಲಿ ವಧು ಸಂಪೂರ್ಣವಾಗಿ ವಿರುದ್ಧ ದಿಕ್ಕಿನಲ್ಲಿ (ಹಿಂಬದಿಗೆ) ಇನ್ನಷ್ಟು ಬಾಗುತ್ತಾಳೆ. ಇದನ್ನು ನೋಡಿದ ಮದುವೆಯಲ್ಲಿ ಉಪಸ್ಥಿತರಿದ್ದ ಸಂಬಂಧಿಕರು ಮತ್ತು ಮಿತ್ರರು ವಧುವಿಗೆ ಒಂದೇ ಸಮನೆ ಜೋಶ್ ನಲ್ಲಿ ಜೋರು ಜೋರಾಗಿ ಉತ್ತೇಜನ ನೀಡುತ್ತಾರೆ.

ನೋಡಿ ಈ ವಿಡಿಯೋ…

 

View this post on Instagram

 

A post shared by Good News Today (@goodnewstoday)

ಪ್ರಸ್ತುತ ವಿಡಿಯೋ ನೆಟ್ಟಿಗರಿಗೆ ತುಂಬಾ ಇಷ್ಟವಾಗಿದ್ದು ವಿಡಿಯೋ ನೋಡಿದ ನೇಟಿಜನ್ಸ್ ಗಳು ತರತರದ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ನೆಟ್ಟಿಗನೊಬ್ಬ ವಧುವಿನ ಫ್ಲೆಕ್ಸಿಬಿಲಿಟಿ ನೋಡಿ ಇದೇ ರೀತಿಯ ಫ್ಲೆಕ್ಸಿಬಿಲಿಟಿ ಸಂಸಾರದಲ್ಲಿ ಇದ್ದರೆ ಚೆನ್ನಾಗಿರುವುದು ಎಂದಿದ್ದಾನೆ. ಇನ್ನೊಬ್ಬ ಯೂಸರ್ ರಾಮದೇವ್ ಬಾಬಾ ಅವರು ಕಲಿಸುವ ಯೋಗವನ್ನು ಈ ವಧು ತುಂಬಾ ಸೀರಿಯಸ್ ಆಗಿಯೇ ತೆಗೆದುಕೊಂಡಿದ್ದಾರೆ ಎಂದಿದ್ದಾನೆ. ಮತ್ತೊಬ್ಬ ಯೂಸರ್ ತುಂಬಾ ಸುಂದರವಾಗಿ, ನನಗನಿಸುತ್ತೆ ಈ ವಧುವಿಗೆ ಬ್ಯಾಕ್ ಬೋನ್ ಇಲ್ಲವೇ ಇಲ್ಲ ಎಂದಿದ್ದಾನೆ.