Video: ರಸ್ತೆಯಲ್ಲಿ ಬರುತ್ತಿದ್ದ ಮದುವೆಯ ಮೆರವಣಿಗೆಯಲ್ಲಿಯ ಡ್ಯಾನ್ಸ್ ಕಂಡು ಪುಟ್ಟ ಹುಡುಗಿ ತನ್ನ ತಂಗಿಯ ಜೊತೆಗೆ ಮಾಡಿದಳು ಅದ್ಭುತವಾದ ಡ್ಯಾನ್ಸ್!

ಎಲ್ಲರ ಜೀವನದಲ್ಲಿ ಜೀವನಪೂರ್ತಿ ನೆನಪಾಗಿ ಉಳಿಯುವ ಸಂಗತಿಗಳಲ್ಲಿ ಶಾಲೆ ಮತ್ತು ಕಾಲೇಜಿನಲ್ಲಿಯ ನೆನಪುಗಳು ತುಂಬಾ ವಿಶೇಷವಾಗಿರುತ್ತವೆ. ಆ ಸಮಯದಲ್ಲಿ ನಾವು ನಮಗೆ ಬೇಕಾದ ರೀತಿಯಲ್ಲಿ ವರ್ತಿಸುತ್ತೇವೆ ಅಲ್ಲದೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಅವುಗಳಲ್ಲಿ ಸಹಭಾಗ ಸಹ ತಗೆದುಕೊಳ್ಳುತ್ತೇವೆ. ವಾರ್ಷಿಕೋತ್ಸವ ಸಮಯದಲ್ಲಿ ವಿವಿಧ ಡ್ಯಾನ್ಸ್ ನಾಟಕ ಮುಂತಾದ ಕಾರ್ಯಗಳಲ್ಲಿ ಸ್ಟೇಜ್ ಮೇಲೆ ಹೋಗಿ ನಮ್ಮ್ ಬಳಿಯಲ್ಲಿದ್ದ ಕೌಶಲ್ಯವನ್ನು ಜನರ ಎದುರಿಗೆ ಪ್ರದರ್ಶನ ಮಾಡುತ್ತೆವೆ. ಆದರೆ ಈಗ ಅನೇಕ ಕಾಲೇಜಿನಲ್ಲಿಯ ಅನೇಕ ವಿದ್ಯಾರ್ಥಿಗಳು ರೋಡ್ ಮೇಲೆ ತಮ್ಮ ಕಲಾಬಾಜಿಯನ್ನು ಪ್ರದರ್ಶನ ಮಾಡುತ್ತಾ ಜನರ ಗಮನವನ್ನು ಸೆಳೆದುಕೊಳ್ಳುತ್ತಾರೆ.

ಭಾರತದಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ ಅಲ್ಲದೆ ಪ್ರತಿಯೊಂದು ಕಾರ್ಯಕ್ರಮದಲ್ಲಿ ಏನಾದರೂ ಹೊಸದಾದ ಸಂಗತಿಯನ್ನು ಮಾಡುವ ಪ್ರಯತ್ನ ಎಲ್ಲರೂ ಮಾಡುತ್ತಾರೆ. ಈ ಪ್ರಯತ್ನದಿಂದಾಗಿ ನಮಗೆ ಅಲ್ಲಿಯ ವಿಶೇಷತೆಯ ಕುರಿತು ಗುರುತಾಗುವದು. ಅಲ್ಲದೆ ಅವರ ಕಡೆಯಿಂದ ಪ್ರೋತ್ಸಾಹ ತಗೆದುಕೊಂಡು ನಾವು ಸಹ ಅವರ ಹಾಗೆ ಹೊಸದಾಗಿ ಏನಾದ್ರೂ ಮಾಡಬೇಕು ಎಂದು ಮನದಲ್ಲಿ ಹುಮ್ಮಸ್ಸು ಬರುತ್ತದೆ.

ಇಂದಿನ ಪ್ರತಿಯೊಂದು ಪೀಳಿಗೆಗೆ ಡ್ಯಾನ್ಸ್ ಮಾಡುವದು ಎಂದರೆ ತುಂಬಾ ಇಷ್ಟ. ಗಣೇಶೋತ್ಸವ ಬಂದರೆ ಸಾಕು ದಿನವಿಡೀ ಡಿ ಜೆ ಹಚ್ಚಿ ಅದರ ಮುಂದೆ ತಮಗೆ ಬೇಕಾದ ರೀತಿಯಲ್ಲಿ ಡ್ಯಾನ್ಸ್ ಮಾಡುತ್ತಾರೆ. ಅಲ್ಲದೆ ಗಣೇಶ ಉತ್ಸವದ ಕೊನೆಯ ದಿನದ ಅಂದರೆ ಮೆರವಣಿಗೆಯ ದಿವಸ ವಂತು ಪ್ರತಿಯೊಬ್ಬರ ಡ್ಯಾನ್ಸ್ ಬಗ್ಗೆ ಹೇಳತೀರದು. ಅಂದು ಚಿಕ್ಕ ಮಗುವಿನಿಂದ ಹಿಡಿದು ಮುಪ್ಪಾದ ಮುದುಕರು ಸಹ ಜೋಶ್ ನಲ್ಲಿ ಡ್ಯಾನ್ಸ್ ಮಾಡುತ್ತಾರೆ.

ಸದ್ಯಕ್ಕೆ ಅಂತಹದ್ದೇ ಒಂದು ವೀಡಿಯೋ ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಈ ವೀಡಿಯೋ ನೋಡಿದರೆ ನೀವು ಸಹ ಸೂಪರ್ ಅನ್ನುವಿರಿ. ಈ ವಿಡಿಯೋದಲ್ಲಿ ಮದುವೆಯ ಒಂದು ಮೆರವಣಿಗೆ ಬರುತ್ತಿರುತ್ತದೆ. ಅದನ್ನು ನೋಡಲು ಒಬ್ಬ ಪುಟ್ಟ ಬಾಲಕಿ ತನಗಿಂತ ಚಿಕ್ಕ ತಂಗಿಯನ್ನು ಕರೆದುಕೊಂಡು ಬಂದಿರುತ್ತಾಳೆ. ಅಲ್ಲಿದ್ದ ಒಂದು ಶಾಪ್ ನ ಬಾಗಿಲ ಮೇಲೆ ಕುಳಿತುಕೊಂಡ ಈ ಮೆರವಣಿಗೆ ನೋಡುತ್ತಿರುತ್ತಾಳೆ. ಮೆರವಣಿಗೆಯಲ್ಲಿ ಬ್ಯಾಂಜೋ ಹಚ್ಚಿಕೊಂಡು ಜೋರು ಜೋರಾಗಿ ಡ್ಯಾನ್ಸ್ ಮಾಡುತ್ತಿರುತ್ತಾರೆ ಇದನ್ನು ದೂರಿನಿಂದಲೇ ಕಂಡ ಈ ಪುಟ್ಟ ಬಾಲಕಿ ತಕ್ಷಣವೇ ಎದ್ದು ಕೈ ಮೇಲೆತ್ತಿ ಅವರಂತೆ ಡ್ಯಾನ್ಸ್ ಮಾಡಲು ಶುರು ಮಾಡುತ್ತಾಳೆ. ತದನಂತರ ಸುಮ್ಮನೆ ಕುಳಿತಿದ್ದ ತನ್ನ ಪುಟ್ಟ ತಂಗಿಯನ್ನು ಸಹ ಎದ್ದು ನಿಲ್ಲಿಸಿ ಅವಳಿಗೂ ಸಹ ಡ್ಯಾನ್ಸ್ ಹೊಡೆಯುವಂತೆ ಆಗ್ರಹ ಮಾಡುತ್ತಾಳೆ. ಆಗ ಆ ಪುಟ್ಟ ಹುಡುಗಿ ಮಾಡಿರುವ ಸ್ಟೆಪ್ ನೋಡಿದರೆ ವ್ಹಾ ವ್ಹಾ ಎನ್ನುವಿರಿ.

ವಿಡಿಯೋ ನೋಡಿ.

 

View this post on Instagram

 

A post shared by 💗🫶🏻💗 (@k6_cl)

ಪ್ರಸ್ತುತ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ k6_cl ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಈ ಅದ್ಭುತವಾದ ಡ್ಯಾನ್ಸ್ ವಿಡಿಯೋವನ್ನು ಇದುವರೆಗೆ ಸುಮಾರು ಐದು ಮಿಲಿಯನ್ ರಷ್ಟು ಜನರು ವೀಕ್ಷಣೆ ಮಾಡಿದ್ದಾರೆ ಅಲ್ಲದೆ ಈ ಪುಟ್ಟ ಮಕ್ಕಳ ಡ್ಯಾನ್ಸ್ ಕಂಡು ಸುಮಾರು ಒಂದು ಲಕ್ಷಕ್ಕೂ ಹೆಚ್ಚು ನೆಟ್ಟಿಗರು ಲೈಕ್ ಮಾಡಿದ್ದಾರೆ.